ಕಾಪಾಡಿ ಫಲ್ಗುಣಿ ನದಿ ಒಡಲು!!
– ಕಾರ್ಖಾನೆಗಳಿಂದ ಸೇರುತ್ತಿದೆ ರಾಸಾಯನಿಕ ತ್ಯಾಜ್ಯ!
– ದೊಡ್ಡ ದೊಡ್ಡ ಕಾರ್ಖಾನೆ ಲಾಬಿಗೆ ಅಧಿಕಾರಿಗಳು ಮಣಿದರೇ?
NAMMUR EXPRESS NEWS
ಮಂಗಳೂರು: ನದಿ ನೀರು ಕಲುಷಿತಗೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಿವೆ. ಈ ನಡುವೆ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಕಾರ್ಖಾನೆಯೊಂದು ಫಲ್ಗುಣಿ ನದಿಗೆ ನೇರವಾಗಿ ಕಾರ್ಖಾನೆ ತ್ಯಾಜ್ಯ ನೀರು ಹರಿ ಬಿಡುತ್ತಿದೆ. ಜತೆಗೆ ಹಲವು ಕಾರ್ಖಾನೆಗಳು ನದಿ ನೀರನ್ನು ಮಲಿನ ಮಾಡುತ್ತಿವೆ.
ಬೈಕಂಪಾಡಿ ಸುತ್ತಲ ಹಲವು ಕೈಗಾರಿಕಾ ಘಟಕಗಳೂ ಶುದ್ದೀಕರಿಸದ ಕೈಗಾರಿಕಾ ತ್ಯಾಜ್ಯವನ್ನು ಫಲ್ಗುಣಿಗೆ ಹರಿಸುತ್ತಿವೆ. ಈ ಕುರಿತು ಮಾಲಿನ್ಯ ನಿಯಂತ್ರ ಮಂಡಳಿ, ಜಿಲ್ಲಾಡಳಿತದ ಗಮನಕ್ಕೆ ತಂದು ವಾರ ಕಳೆದಿದೆ. ಆದರೆ, ಈ ದಿನವೂ ರಾಜಾರೋಷವಾಗಿ ಕೈಗಾರಿಕಾ ತ್ಯಾಜ್ಯ ಜೀವನದಿ ಫಲ್ಗುಣಿಯ ಒಡಲು ಸೇರುತ್ತಿದೆ. ವರ್ಷಗಳಿಂದ ಈ ಕುರಿತು ಧ್ವನಿ ಎತ್ತುತ್ತಿದ್ದರೂ, ಜನಪ್ರತಿನಿಧಿಗಳು, ಅಧಿಕಾರಿಗಳು ಕನಿಷ್ಟ ಕಾಳಜಿಯನ್ನೂ ವಹಿಸುತ್ತಿಲ್ಲ. ಜೀವನದಿ ಫಲ್ಗುಣಿ ಸಾಯುತ್ತಿದ್ದಾಳೆ ಎಂದು ನಾಗರಿಕ ಹೋರಾಟ ಸಮಿತಿ ಪ್ರಮುಖ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.