ಟಾಪ್ 5 ನ್ಯೂಸ್: ಮೈಸೂರು -ಹಾಸನ
– ಯಮರೂಪಿಯಾಗಿ ಬಂದ ಟಾಟಾ ಏಸ್: ಮೂವರು ಬಲಿ!
– ಹಾಸನ ಶಾಂತಿಗ್ರಾಮದಲ್ಲಿ ನಡೆದ ಘಟನೆ- ಮೈಸೂರು: ಆನ್ಲೈನ್ನಲ್ಲಿ ₹2.96 ಕೋಟಿ ವಂಚನೆ!
– ರಸ್ತೆ ದಾಟುತ್ತಿದ್ದಾಗ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ : ವೃದ್ದೆ ಸಾವು
– ನೇಣು ಬೀಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ!
– ಮಂಡ್ಯ: ಹಳಿ ದಾಟುವಾಗ ರೈಲಿಗೆ ಸಿಲುಕಿ ವೃದ್ಧೆ ಮೃತ್ಯು!
NAMMUR EXPRESS NEWS
ಹಾಸನ: ಸ್ಕೂಟರ್ ಹಾಗೂ ಟಾಟಾ ಏಸ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ನಲ್ಲಿದ್ದ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಹಾಸನದ ಶಾಂತಿಗ್ರಾಮದಲ್ಲಿ ಈ ಅಪಘಾತ ನಡೆದಿದೆ. ಸ್ಕೂಟರ್ಗೆ ಡಿಕ್ಕಿ ಹೊಡೆದ ಟಾಟಾಏಸ್ ವಾಹನವು ರಸ್ತೆ ಬದಿಯ ರೈತರ ಜಮೀನಿಗೆ ನುಗ್ಗಿದೆ. ಟಾಟಾ ಏಸ್ ನಡಿ ಸಿಲುಕಿ ಸವಾರನೊಬ್ಬ ಮೃತದೇಹವು ನಜ್ಜುಗುಜ್ಜಾಗಿದ್ದು, ಮತ್ತಿಬ್ಬರ ಮೃತದೇಹವು ರಸ್ತೆ ಮೇಲೆ ಬಿದ್ದಿದೆ. ತೀವ್ರ ರಕ್ತಸ್ರಾವವಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೈಸೂರು: ಆನ್ಲೈನ್ನಲ್ಲಿ ₹2.96 ಕೋಟಿ ವಂಚನೆ!
ಮೈಸೂರು: ಷೇರು ಮಾರುಕಟ್ಟೆಗೆ ಸಂಬಂಧಿಸಿದ ನಕಲಿ ಕಂಪನಿಯೊಂದರಲ್ಲಿ ಹಣ ಹೂಡಿದ್ದ ನಗರದ ಉದ್ಯಮಿಯೊಬ್ಬರು ₹ 2.96 ಕೋಟಿ ವಂಚನೆಗೊಳಗಾಗಿದ್ದು, ಸೆನ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ನಗರದ ಸರಸ್ವತಿಪುರಂ ನಿವಾಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಆಸಕ್ತಿ ವಹಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಆಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲಿ ನೀಡಿದ ಮಾಹಿತಿಯಂತೆ ಏಪ್ರಿಲ್ನಿಂದ ಹಂತ ಹಂತವಾಗಿ ಒಟ್ಟು ₹2.96 ಕೋಟಿ ಹೂಡಿಕೆ ಮಾಡಿದ್ದರು. ಲಾಭ ಗಳಿಕೆಯ ನಿರೀಕ್ಷೆಯಲ್ಲಿದ್ದ ಅವರಿಗೆ ಕಂಪನಿ ಕಡೆಯಿಂದ ಯಾವುದೇ ಹಣ ಬಾರದಿದ್ದಾಗ, ವಂಚನೆ ಆಗಿರುವ ಅರಿವಾಗಿದೆ.
ನಗರದಲ್ಲಿ ದಾಖಲಾದ ಇದೇ ಮಾದರಿ ಐದು ಪ್ರತ್ಯೇಕ ಪ್ರಕರಣದಲ್ಲಿ ಐವರು ₹20 ಲಕ್ಷ ಕಳೆದುಕೊಂಡಿದ್ದಾರೆ. ಈಚೆಗೆ ಷೇರು ಮಾರುಕಟ್ಟೆ ಹಾಗೂ ಕ್ರಿಫ್ಟ್ ಕರೆನ್ಸಿ ಬಗ್ಗೆ ವಂಚನೆ ಪ್ರಕರಣಗಳೇ ಹೆಚ್ಚುತ್ತಿವೆ. ಅವೆಲ್ಲ ವ್ಯವಹಾರಗಳು ಸಾಮಾಜಿಕ ಜಾಲತಾಣಗಳಿಂದಲೇ ಆರಂಭವಾಗಿದೆ. ಎರಡು, ಮೂರು ಲಕ್ಷದಿಂದ ತೊಡಗಿ ಕೋಟಿಯವರೆಗೂ ವಂಚನೆಯಾಗುತ್ತಿದೆ. ಈ ಬಗ್ಗೆ ಜನರಲ್ಲೇ ಅರಿವು ಬರಬೇಕು’ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.
ರಸ್ತೆ ದಾಟುತ್ತಿದ್ದಾಗ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ : ವೃದ್ದೆ ಸಾವು!
ಮೈಸೂರು: ಮೈಸೂರಿನಲ್ಲಿ ನಡೆದ ಅಪಘಾತದಲ್ಲಿ ವೃದ್ಧೆಯರಿಬ್ಬರು ಅಸುನೀಗಿದ್ದಾರೆ. ಮೈಸೂರಿನ ನಂಜನಗೂಡಿನಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕೆಎಸ್ಆರ್ಟಿಸಿ ಬಸ್ವೊಂದು ವೃದ್ಧೆ ಮೇಲೆ ಹರಿದಿದೆ. ಪರಿಣಾಮ ವೃದ್ಧೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಾರ್ವತಮ್ಮ (75) ಮೃತ ದುರ್ದೈವಿ.
ಪಾರ್ವತಮ್ಮ ನಂಜನಗೂಡಿನ ಮೇದಾರ ಬೀದಿ ನಿವಾಸಿಯಾಗಿದ್ದರು. ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದಾಗ, ಚಾಮರಾಜನಗರ ಕಡೆಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ವೊಂದು ಡಿಕ್ಕಿ ಹೊಡೆದು ವೃದ್ಧೆ ಮೇಲೆ ಹರಿದಿದೆ. ತೀವ್ರ ರಕ್ತಸ್ರಾವಗೊಂಡ ಪಾರ್ವತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನೇಣು ಬೀಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ!
ಮೈಸೂರು: ನಗರದ ಗೋಕುಲಂ ಬಡಾವಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಲ್ಲಿಕಾ(47) ಎಂಬುವವರು ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗಂಡನಿಂದ ವಿಚ್ಛೇದನ ಪಡೆದು ಮೃತ ಮಲ್ಲಿಕಾ ಅವರು ಒಂಟಿಯಾಗಿ ವಾಸ ಮಾಡುತ್ತಿದ್ದರು. ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಈ ಕುರಿತು ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಳಿ ದಾಟುವಾಗ ರೈಲಿಗೆ ಸಿಲುಕಿ ವೃದ್ಧೆ ಮೃತ್ಯು.!
ಮಂಡ್ಯ: ರೈಲಿಗೆ ಸಿಲುಕಿ ವೃದ್ಧೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಮಂಡ್ಯ ತಾಲೂಕಿನ ಹನಕೆರೆ ಬಳಿ ಘಟನೆ ನಡೆದಿದೆ. ಹೊನ್ನಗಳ್ಳಿ ಮಠದ ನಿಂಗಮ್ಮ (70) ಮೃತ ದುರ್ದೈವಿ.
ಮಂಡ್ಯಕ್ಕೆ ತೆರಳುವ ಮಾರ್ಗದಲ್ಲಿ ಹನಕೆರೆ ಬಳಿ ರೈಲ್ವೆ ಗೇಟ್ ಹಾಕಲಾಗಿತ್ತು. ರೈಲ್ವೆ ಗೇಟ್ ಬಳಿ ದಾಟುವ ವೇಳೆ ತಿರುಪತಿ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ನಿಂಗಮ್ಮ ಮೃತಪಟ್ಟಿದ್ದಾರೆ. ರೈಲು ವೇಗವಾಗಿ ಬಂದು ಡಿಕ್ಕಿ ಹೊಡೆದ ರಭಸಕ್ಕೆ 100 ಮೀಟರ್ ದೂರ ವೃದ್ಧೆಯ ದೇಹ ಎಸೆಯಲ್ಪಟ್ಟಿದೆ. ತಲೆಗೆ ಗಂಭೀರ ಪೆಟ್ಟಾಗಿದ್ದು ನಿಂಗಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.