ಟಾಪ್ ನ್ಯೂಸ್ ಕರಾವಳಿ
ದಿಢೀರ್ ಹಣದಾಸೆಗೆ ಲಕ್ಷ ಲಕ್ಷ ಹೋಯ್ತು!
– ಬ್ರಹ್ಮಾವರ: ಷೇರು ಮಾರುಕಟ್ಟೆ ಲಾಭದ ಆಸೆಗೆ ಹೋಗಿ 18.64 ಲಕ್ಷ ರೂ. ಕಳೆದುಕೊಂಡ ಮಹಿಳೆ
ಮಲ್ಪೆ: ನಾಲ್ವರ ಕೊಲೆ ಆರೋಪಿ ಪ್ರವೀಣ್ ಚೌಗುಲೆಗೆ ಜಾಮೀನಿಲ್ಲ!
– ಬೆಳ್ತಂಗಡಿ: ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು
– ಮಣಿಪಾಲ: ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಬೆಂಕಿಗೆ ಆಹುತಿ!
NAMMUR EXPRESS NEWS
ಬ್ರಹ್ಮಾವರ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎನ್ನುವ ಮೋಸದ ಬಲೆಗೆ ಸಿಲುಕಿ ಮಹಿಳೆಯೊಬ್ಬರು 18.64 ಲಕ್ಷ ರೂ. ಕಳೆದುಕೊಂಡಿರುವ ಪ್ರಕರಣ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ವಂಚನೆಗೆ ಒಳಗಾಗಿರುವ ಸೌಮ್ಯ ಎಂಬವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫೆ.12ರಂದು ಅಪರಿಚಿತ ಯುವತಿಯೊಬ್ಬರು ವಾಟ್ಸಾಪ್ ಮೂಲಕ ಪರಿಚಯವಾಗಿ ಶೇರು ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿರುವುದರಿಂದ ದೊಡ್ಡ ಮೊತ್ತದ ಲಾಭ ಪಡೆಯಬಹುದು ಎಂದು ನಂಬಿಸಿದ್ದರು.
ಇವರ ಮಾತನ್ನು ನಂಬಿದ ಸೌಮ್ಯ ತಮ್ಮೆಲ್ಲ ದಾಖಲೆಗಳನ್ನು ನೀಡಿ ಅದೇ ದಿನ 50ಸಾವಿರ ಹಾಗೂ ಮಾ.28ರಂದು 60 ಸಾವಿರ ಹೂಡಿಕೆ ಮಾಡಿದ್ದಾರೆ. ಆರೋಪಿಗಳು 3000ರೂ.ವನ್ನು ಸೌಮ್ಯ ಅವರ ಖಾತೆಗೆ ಹಾಕಿದ್ದು, ಆ ಬಳಿಕ ಇನ್ನೂ ಹೆಚ್ಚು ಹೂಡುವಂತೆ ಹೇಳಿ 18,64,500ರೂ. ಗಳನ್ನು ವಿವಿಧ ಲಿಂಕ್ ಮೂಲಕ ಕಳುಹಿಸಿದ್ದಾಗಿ ತಿಳಿಸಿದ್ದಾರೆ. ಮೇ 25ರ ನಂತರ ಈ ಗ್ರೂಪ್ ನಿಷ್ಕ್ರೀಯಗೊಂಡಿದ್ದು, ಆ ಬಳಿಕ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ. ಇದೀಗ ದೂರು ದಾಖಲಿಸಿಕೊಂಡಿರುವ ಕೋಟ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಾಲ್ವರ ಕೊಲೆ ಆರೋಪಿ ಪ್ರವೀಣ್ ಚೌಗುಲೆಗೆ ಜಾಮೀನಿಲ್ಲ!
ಉಡುಪಿ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದ ಕೊಲೆ ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂಜಿ ಉಮಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಉಡುಪಿ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ನೇಜಾರು ಎಂಬಲ್ಲಿ ಒಂದೇ ಕುಟುಂಬದ ಐನಾಝ್, ಹಸೀನಾ, ಅಫ್ನಾನ್, ಅಸೀಮ್ ಎಂಬವರನ್ನು ಹತ್ಯೆ ನಡೆಸಿದ್ದ ಅರುಣ್ ಚೌಗುಲೆ ಅಧೀನ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಹೀಗಾಗಿ, ಆರೋಪಿಯು ಹೈಕೋರ್ಟ್ ಮೆಟ್ಟಲೇರಿದ್ದ. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆರೋಪಿಯ ವಿರುದ್ಧ ಸಾಂದರ್ಭಿಕ ಸಾಕ್ಷಿಗಳ ಜತೆಗೆ ಸಿಸಿಟಿವಿ ದೃಶ್ಯಾವಳಿಗಳು ಕೂಡ ಇವೆ. ಅಲ್ಲದೆ, ಆರೋಪಿಯ ಕೂದಲಿನ ಡಿಎನ್ಎ ಆಧರಿಸಿ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ಬೆಳ್ತಂಗಡಿ: ಬಸ್ ಡಿಕ್ಕಿ ಬೈಕ್ ಸವಾರ ಬಲಿ
ಬೆಳ್ತಂಗಡಿ: ದುರ್ಗಾ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ನಡ ಗ್ರಾಮ ಸಹಾಯಕ ಜಯರಾಜ್(48) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಲಾಯಿಲದ ಪುತ್ರಬೈಲಿನಲ್ಲಿ ನಡೆದಿದೆ.
ದುರ್ಗಾ ಬಸ್ ಲಾಯಿಲ ಗ್ರಾಮದ ಪುತ್ರಬೈಲು ಬಳಿ ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲಿಯೇ ಗ್ರಾಮ ಸಹಾಯಕ ಜಯರಾಜ್ ಸಾವನ್ನಪ್ಪಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಮಂಜೊಟ್ಟಿಯಲ್ಲಿ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಬಸ್ ನ ಟೈಮಿಂಗ್ ಹಾಗೂ ಅತಿವೇಗವೇ ಅಪಘಾತಕ್ಕೆ ಕಾರಣವಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರುಮೇಲೆ ವಹಿಸಬೇಕು ಎಂಬ ಆಗ್ರಹವಾಗಿದೆ.
ರಸ್ತೆ ಬದಿ ನಿಲ್ಲಿಸಿದ್ದ ರಿಟ್ಸ್ ಕಾರು ಬೆಂಕಿಗಾಹುತಿ
ಉಡುಪಿ: ರಸ್ತೆ ಬದಿ ನಿಲ್ಲಿಸಿದ್ದ ರಿಟ್ಸ್ ಕಾರು ಬೆಂಕಿಗಾಹುತಿಯಾಗಿ ಸಂಭವನೀಯ ಅನಾಹುತವೊಂದು ತಪ್ಪಿದ ಘಟನೆ ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನದ ಎದುರು ಗುರುವಾರ ತಡರಾತ್ರಿ ನಡೆದಿದೆ.
ಕಾರು ಚಾಲಕ ಸೇರಿ ಇನ್ನೋರ್ವ ವ್ಯಕ್ತಿ ಕಾರನ್ನು ರಸ್ತೆ ಬದಿ ನಿಲ್ಲಿಸಿ ಅದರೊಳಗೆ ಮಲಗಿದ್ದರು. ಈ ವೇಳೆ ಕಾರು ಚಾಲಕನಿಗೆ ಕಾರಿನ ಬಾನೆಟ್ ಬಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಕಾರಿನಿಂದ ಹೊರಬಂದಿದ್ದಾರೆ.
ಬೆಂಕಿಯ ಕೆನ್ನಾಲೆಗೆ ಕಾರು ಸಂಪೂರ್ಣ ಸುಟ್ಟುಹೋಗಿದ್ದು, ಶಾರ್ಟ್ ಸರ್ಕ್ಯೂಟ್ನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇನ್ನು ಕಾರು ಮಾಲೀಕನ ಮಾಹಿತಿ ಮೇರೆಗೆ ಅಗ್ನಿ ಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.