ಪಿಂಚಣಿ ವಂಚಿತ ನೌಕರರ ಸಂಘದ ಹೋರಾಟ!
– ಅನುದಾನ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಓ ಪಿ ಎಸ್, ಜ್ಯೋತಿ ಸಂಜೀವಿನಿ ಸೌಲಭ್ಯ ಜಾರಿಗೆ ಅಗ್ರಹ
– ರಾಜ್ಯ ಅನುದಾನಿಕ ಪಿಂಚಣಿ ವಂಚಿತ ನೌಕರರ ಸಂಘದ ಹೊಸದುರ್ಗ ಘಟಕದ ಪ್ರತಿಭಟನೆ
NAMMUR EXPRESS NEWS
ಹೊಸದುರ್ಗ: ಅನುದಾನ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಓ ಪಿ ಎಸ್ ಮತ್ತು ಜ್ಯೋತಿ ಸಂಜೀವಿನಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನಿಕ ಪಿಂಚಣಿ ವಂಚಿತ ನೌಕರರ ಸಂಘದ ಹೊಸದುರ್ಗ ತಾಲೂಕ್ ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ತಿರುಪತಿ ಪಾಟೀಲ್ ಅವರ ಮುಖಾಂತರ ಮಾನ್ಯ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಎನ್ಓ ಮಾತನಾಡಿ, ರಾಜ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿ ನಮ್ಮ ಸರ್ಕಾರ ಬಂದರೆ ಓ ಪಿ ಎಸ್ ಜಾರಿ ಮಾಡುತ್ತೇವೆ ಎಂದು ಹೇಳಿದ್ದರು ಇಲ್ಲಿಯವರೆಗೂ ಜಾರಿಗೆ ತಂದಿಲ್ಲ ಒಂದು ಪಕ್ಷ ಜಾರಿಗೆ ತರಲು ವಿಳಂಬವಾದರೆ ತಕ್ಷಣವೇ ಅನುದಾನಿತ ನೌಕರರಿಗೆ ಎನ್ ಪಿ ಎಸ್(NPS) ಜಾರಿಗೆ ತರಬೇಕು ಮತ್ತು ಅನುದಾನದ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ತುಂಬಿಕೊಳ್ಳಬೇಕು ಹಾಗೂ 2014ರ ವಿಧೇಯಕವನ್ನು ರದ್ದುಪಡಿಸಬೇಕು ಮತ್ತು ಜ್ಯೋತಿ ಸಂಜೀವಿನಿ ಯಥಾವತ್ತಾಗಿ ನಮಗೂ ಜಾರಿಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು ನಮ್ಮ ಬೇಡಿಕೆ ಈಡೇರಿದ್ದಾರೆ ಉಗ್ರವಾದ ಹೋರಾಟ ಮಾಡಲು ತಯಾರಿದ್ದೇವೆಂದು ತಿಳಿಸಿದರು
ಈ ಸಮಯದಲ್ಲಿ. ತಾಲೂಕು ಅಧ್ಯಕ್ಷ ರುದ್ರೇಶ್ ಮತ್ತು ಉಪಾಧ್ಯಕ್ಷರಾದ ಸಿದ್ದಪ್ಪನವರು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಮೂರ್ತಪ್ಪನವರು ಖಜಾಂಚಿ ಸುರೇಶ ರವರು ಕಾರ್ಯದರ್ಶಿ ಮಲ್ಲಿಕಾರ್ಜುನ್ ಆನಂದಮೂರ್ತಿ ಚಂದ್ರಪ್ಪನವರ ಪಿ ಕೃಷ್ಣಮೂರ್ತಿ ಪರಪ್ಪ ರಂಗಸ್ವಾಮಿ ವಸಂತ್ ಕುಮಾರ್ ಹೇಮಂತ್ ಕುಮಾರ್ ಶೇಖರ್ ಹಾಗೂ ತಾಲೂಕಿನ ಪ್ರೌಢಶಾಲಾ ಹಾಗೂ ಕಾಲೇಜಿನ ನೌಕರರು ಉಪಸ್ಥಿತರಿದ್ದರು.