ಜಯಪುರ ಬಿಜಿಎಸ್ ಸಂಭ್ರಮದಲ್ಲಿ ವಿದ್ಯಾರ್ಥಿಗಳ ಸಂಭ್ರಮ!
– ಒಂದು ವಾರಗಳ ಕಾಲ ಬಿಜಿಎಸ್ ಸಂಭ್ರಮದ ರಂಗು
– ಮಲೆನಾಡಲ್ಲೇ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿ
NAMMUR EXPRESS NEWS
ಕೊಪ್ಪ/ಜಯಪುರ: ಬಿಜಿಎಸ್ ಸಮೂಹ ಸಂಸ್ಥೆ ಜಯಪುರ., ಶ್ರೀ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ವಾರಗಳ ಕಾಲ ಬಿಜಿಎಸ್ ಸಂಭ್ರಮ ಕಾರ್ಯಕ್ರಮ ವರ್ಣರಂಜಿತವಾಗಿ ನಡೆಯಿತು.
ಕೊಪ್ಪ ತಾಲೂಕು ಜಯಪುರದ ಪದವಿ ಕಾಲೇಜಿನಲ್ಲಿ ಆರು ದಿನಗಳ ಕಾಲ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸುವ ಸಲುವಾಗಿ ಬಿಜಿಎಸ್ ಸಂಭ್ರಮ ಎಂಬ ಸರಣಿ ಕಾರ್ಯಕ್ರಮದಡಿಯಲ್ಲಿ ಹಲವು ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಸತತ ಆರು ದಿನಗಳ ಕಾಲ ನಡೆದ ಈ ಸಂಭ್ರಮದ ಹಬ್ಬದಲ್ಲಿ ವಿದ್ಯಾರ್ಥಿಗಳಿಗಾಗಿ ಕಂಪನಿ ಲೋಗೋ,ಚಿತ್ರಕಲೆ,ಭಾವಗೀತೆ,ಆಶುಭಾಷಣ,ನಾಟಕ(ವಿಷಯ-ಸಾಮಾಜಿಕ ಪಿಡುಗು),ಜನಪದ ನೃತ್ಯ,ಫೇರ್ ಶಾಪ್ನಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಎಲ್ಲಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಮುಷ್ತಾಕ್ ಅಹಮದ್ ನೆರವೇರಿಸಿದರು. ಆಯೋಜಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಕಾಲೇಜಿನ ಉಪನ್ಯಾಸಕ ವರ್ಗ ಸಂಯೋಜಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಭಾಗವಹಿಸುವಲ್ಲಿ ಸಹಕರಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯಲು ನೆರವಾದರು. ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಮಲೆನಾಡ ಹೆಸರಾಂತ ಶಿಕ್ಷಣ ಸಂಸ್ಥೆ
ಬಿಜಿಎಸ್ ಸಮೂಹ ಸಂಸ್ಥೆ ಜಯಪುರ ಮಲೆನಾಡಲ್ಲೇ ಪ್ರಸಿದ್ಧ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಪ್ರಾಥಮಿಕ, ಪ್ರೌಢ, ಪಿಯುಸಿ, ಹಾಗೂ ಡಿಗ್ರಿ ಶಿಕ್ಷಣ ಇಲ್ಲಿ ನೀಡಲಾಗುತ್ತದೆ. ಶ್ರೀ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಕಾರ್ಯಕ್ರಮ ನಡೆದಿದ್ದು ಹಬ್ಬದ ವಾತಾವರಣ ಕಂಡು ಬಂತು.