ಚಿತ್ರದುರ್ಗದ ಹೆದ್ದಾರಿಯಲ್ಲಿ ಮೂವರು ಸಾವು!
– ಕಾರಿಗೆ ಪೂಜೆ ಮಾಡಿಸಲು ಹೋಗಿ ಹೆಣವಾದರು
– ಏನಿದು ಘಟನೆ? ಮೈಸೂರಿಗೆ ಹೋದಾಗ ಅಪಘಾತ
ಮುರುಘಾ ಮಠದಲ್ಲಿ ಕಳ್ಳತನ
– ದರ್ಬಾರ್ ಹಾಲ್ನಲ್ಲಿದ್ದ 22 ಕೆಜಿ ತೂಕದ ಬೆಳ್ಳಿ ಮೂರ್ತಿ ಎಗರಿಸಿದ ಕಳ್ಳರು
ಬೆಳ್ಳಂ ಬೆಳಗ್ಗೆ ಚಿತ್ರದುರ್ಗದಲ್ಲಿ ಲೋಕಾಯುಕ್ತರ ದಾಳಿ
– ಚಿತ್ರದುರ್ಗ ಜಿಲ್ಲೆಯ ಇಬ್ಬರ ಮನೆ ಮೇಲೆ ದಾಳಿ
NAMMUR EXPRESS NEWS
ಚಿತ್ರದುರ್ಗ: ಕಾರಿಗೆ ಪೂಜೆ ಮಾಡಿಸಲು ಹೋಗಿದ್ದ ವೇಳೆ ಕಾರು ಅಪಘಾತಗೊಂಡು ಮೂವರು ಮೃತಪಟ್ಟ ಘಟನೆ ಮಂಡ್ಯದಲ್ಲಿ ನಡೆದಿದೆ.ಕಾರು-ಗೂಡ್ಸ್ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ರಾಮನಹಳ್ಳಿ ಗ್ರಾಮದ ಬಳಿ ನಡೆದಿದೆ.
ಕಾರಿಗೆ ಪೂಜೆ ಮಾಡಿಸಲು ದರ್ಶನ್ ಕೃಷಿ ಪತ್ತಿನ ಸಹಕಾರ ಸಂಘದ ಸ್ನೇಹಿತರನ್ನು ಕರೆದು ಕೊಂಡು ಬುಧವಾರ ಮೈಸೂರಿಗೆ ಪ್ರಯಾಣ ಬೆಳೆಸಿದ್ದಾರೆ. ಬೆಳಗಿನ ಜಾವ ನಾಗಮಂಗಲ- ಪಾಂಡವಪುರ ಹೆದ್ದಾರಿಯಲ್ಲಿ ವೇಗವಾಗಿ ಬಂದ ಲಾರಿಯೊಂದು ಕಾರಿಗೆ ಹಿಂಬಂದಿಯಿಂದ ಡಿಕ್ಕಿ ಹೊಡಿದಿದೆ. ಡಿಕ್ಕಿ ರಭಸಕ್ಕೆ ರಸ್ತೆಯಿಂದ ಪಕ್ಕಕ್ಕೆ ಸರಿದ ಕಾರು ಕಂಬವೊಂದಕ್ಕೆ ಗುದ್ದಿದೆ. ಕಾರಿನ ಎಡಭಾಗವು ಸಂಪೂರ್ಣ ನಜ್ಜುಗುಜ್ಜಾಗಿದೆ. ವಾಹನ ಚಾಲನೆ ಮಾಡುತ್ತಿದ್ದ ದರ್ಶನ್, ಪಕ್ಕದಲ್ಲಿ ಕುಳಿತಿದ್ದ ವಿಜಯ ಕುಮಾರ್ ಅಪಾಯದಿಂದ ಪಾರಾಗಿದ್ದಾರೆ.
ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಗಳಾದ ಚಿಕ್ಕಜಾಜೂರು ಸಮೀಪದ ಅರಸನಘಟ್ಟದ ಯುವರಾಜ್, ಮುತ್ತಗದೂರಿನ ತಿಪ್ಪೇಸ್ವಾಮಿ ಹಾಗೂ ಹಿರೇಎಮ್ಮಿಗನೂರಿನ ಎಚ್.ಸಿದ್ದೇಶ್ ಮೃತರು. ತೀವ್ರ ಗಾಯಗೊಂಡಿದ್ದ ಚಿಕ್ಕಜಾಜೂರು ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ನಟರಾಜ್ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿ.ದುರ್ಗದ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ವಿಜಯ ಕುಮಾರ್, ದಂಡಿಗೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ದರ್ಶನ್ ಗಾಯಗೊಂಡಿದ್ದಾರೆ.
ಮುರುಘಾ ಮಠದಲ್ಲಿ ಕಳ್ಳತನ
>ಚಿತ್ರದುರ್ಗ: ಮುರುಘಾ ಮಠದಲ್ಲಿ ಬೆಳ್ಳಿ ಮೂರ್ತಿಯೊಂದು ಕಳ್ಳತನವಾಗಿದೆ. ಮುಂಜಾನೆ ಪೂಜೆಗೆಂದು ಹೋದಾಗ ಮೂರ್ತಿ ಕಳವು ಆಗಿರುವುದು ಬೆಳಕಿಗೆ ಬಂದಿದೆ ಎಂದು ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳು ಜೂನ್ 26ರಂದೇ ಮಠದಲ್ಲಿ ಸಿಸಿಟಿವಿ ಆಫ್ ಆಗಿದೆ. ಈ ವೇಳೆ ದರ್ಬಾರ್ ಹಾಲ್ನಲ್ಲಿದ್ದ 22 ಕೆಜಿ ತೂಕದ ಬೆಳ್ಳಿಮೂರ್ತಿ ಕಳ್ಳತನವಾಗಿದೆ. ಕಳ್ಳರು ಸಿಸಿಟಿವಿ ಆಫ್ ಮಾಡಿ ಕಳ್ಳತನ ಮಾಡಿರಬಹುದು. ಈ ಕುರಿತು ಮೊದಲು ಮಠದ ಆಂತರಿಕ ಸಭೆ ಕರೆದು ವಿಚಾರಣೆ ಮಾಡಿದ್ದೇವೆ. ಆದರೆ ಕಳ್ಳತನ ಮಾಡಿದ್ದು ಯಾರು ಏನು ಎಂಬುದು ತಿಳಿದುಬಂದಿಲ್ಲ.ಕಾರ್ಯಕ್ರಮದ ಒತ್ತಡದಿಂದಾಗಿ ಕಳ್ಳತನವಾಗಿರುವುದು ಅರಿವಿಗೆ ಬಂದಿರಲಲ್ಲ. ಮಠದ ಯುವಕರು ಗಮನಿಸಿ ಮಾಹಿತಿ ನೀಡಿದ್ದಾರೆ. ಈ ಹಿಂದೆ ಸ್ವಾಮೀಜಿಗೆ ಸವಿನೆನಪಿಗಾಗಿ ಸಮಾರಂಭವೊಂದರಲ್ಲಿ ಬೆಳ್ಳಿ ಮೂರ್ತಿಯನ್ನು ನೀಡಲಾಗಿತ್ತು. ಈಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದೇವೆ ಎಂದು ಬಸವಕುಮಾರ ಸ್ವಾಮೀಜಿ ಮಾಹಿತಿ ನೀಡಿದರು. ಬಸವಕುಮಾರ ಸ್ವಾಮೀಜಿ ಜತೆಗೆ ಮಠದ ಆಡಳಿತ ಮಂಡಳಿ ಸದಸ್ಯರು ಸೇರಿ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ತೆರಳಿ ದೂರು ದಾಖಲಿಸಲಿದ್ದಾರೆ.
ಬೆಳ್ಳಂ ಬೆಳಗ್ಗೆ ಚಿತ್ರದುರ್ಗದಲ್ಲಿ ಲೋಕಾಯುಕ್ತರ ದಾಳಿ
ಚಿತ್ರದುರ್ಗ: ಬೆಳ್ಳಂ ಬೆಳಗ್ಗೆ ಲೋಕಾಯುಕ್ತರು ದಾಳಿ ನಡೆಸಿದ್ದು, ಚಿತ್ರದುರ್ಗ ಜಿಲ್ಲೆಯ ಇಬ್ಬರ ಮನೆ ಮೇಲೆ ದಾಳಿ ನಡೆಸಲಾಗಿದೆ. ನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್ ಎಂ.ರವೀಂದ್ರಪ್ಪ ಹಾಗೂ ಬಿಬಿಎಂಪಿ ಸೂಪರಿಂಡೆಂಟ್ ಇಂಜಿನಿಯರ್ ಆಗಿರುವ ಜಗದೀಶ್ ಅವರ ಚಿತ್ರದುರ್ಗದ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಜಗದೀಶ್ ಇತ್ತೀಚೆಗೆ ಬಿಬಿಎಂಪಿಯಿಂದ ಭದ್ರಾ ಮೇಲ್ದಂಡೆ ಯೋಜನೆಗೆ ವರ್ಗಾವಣೆ ಆಗಿದ್ದರು. ಎಂ.ರವೀಂದ್ರಪ್ಪ ಅವರ ಹಿರಿಯೂರು ತಾಲೂಕು ಸೂಗೂರು ಫಾರಂ ಹೌಸ್, ಬೆಂಗಳೂರಿನ ಅಪಾಟ್ರ್ಮೆಂಟ್, ಚಿತ್ರದುರ್ಗದ ವಿನಾಯಕ ಬಡಾವಣೆಯ ಮನೆ, ಐಮಂಗಲ ಬಳಿಯ ಬಾಟಲಿಂಗ್ ಫ್ಯಾಕ್ಟರಿ ಮೇಲೆಯೂ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ವಾಸುದೇವರಾಂ ನೇತೃತ್ವದಲ್ಲಿ ಈ ರೇಡ್ ನಡೆದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ನಿವೃತ್ತ ಇಂಜಿನಿಯರ್ ಎಂ.ರವೀಂದ್ರಪ್ಪ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.
ಲೋಕಾಯುಕ್ತರು ದಾಳಿ ನಡೆಸಿದಾಗ ಬಿಬಿಎಂಪಿ ಇಂಜಿನಿಯರ್ ಜಗದೀಶ್ ಅವರ ಮನೆಗೆ ಬೀಗ ಹಾಕಲಾಗಿತ್ತು. ದಾಳಿಗೆ ಬಂದ ಪೊಲೀಸರು ಮನೆಯ ಬಳಿ ಕಾದು ನಿಂತಿದ್ದರು.