ಬಜ್ಪೆ ಪೇಟೆ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿ ವೀಕ್ಷಣೆ
– ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಪರಿಶೀಲನೆ
– ಕಾಮಗಾರಿ ವೇಗವಾಗಿ ನಡೆಸುವಂತೆ ಮನವಿ
NAMMUR EXPRESS NEWS
ಬಜ್ಪೆ: ಬಜ್ಪೆ ಪಟ್ಟಣದಲ್ಲಿ ನಡೆಯುತ್ತಿರುವ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿ ವೀಕ್ಷಣೆಯನ್ನು ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ವೀಕ್ಷಿಸಿ ಸಂಬಂಧಪಟ್ಟವರ ಜತೆಗೆ ಚರ್ಚೆ ನಡೆಸಿದರು.
ಬಿಮಲ್ ಕಂಪನಿಯ ಇಂಜಿನಿಯರ್ ಮತ್ತು ಪಟ್ಟಣ ಪಂಚಾಯತ್ ಅಧಿಕಾರಿಗಳನ್ನು ಮತ್ತು ಮೆಸ್ಕಾಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದ ಚತುಷ್ಪಥ ರಸ್ತೆ ಸುಮಾರು 300 ಮೀಟರ್ ಉದ್ದ ಮತ್ತು 14 ಮೀಟರ್ ಅಗಲದ ಕಾಮಗಾರಿಯ ಬಗ್ಗೆ ತಿಳಿದುಕೊಂಡು,ಸ್ಥಳೀಯ ಮೆಸ್ಕಾಂ ಕಂಬಗಳನ್ನು ಮತ್ತು TC ಗಳನ್ನು ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆಸಿದರು. ಜನರ ಹಿತದೃಷ್ಟಿಯಿಂದ ಆದಷ್ಟು ಬೇಗ ಸಮಯಕ್ಕೆ ಸರಿಯಾಗಿ ಕಾಮಗಾರಿ ಮುಗಿದು,ಗುಣಮಟ್ಟದ ಕೆಲಸ ಮಾಡಿ ಸಾರ್ವಜನಿಕರಿಗೆ ಸುಲಭವಾಗಿ ಓಡಾಡಲು ಅನುಕೂಲ ಮಾಡಿಕೊಡಲು ಮನವಿ ಮಾಡಿದರು.
ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ ,ಸಹ ಸಂಚಾಲಕರಾದ ಇಸ್ಮಾಯಿಲ್ ಇಂಜಿನಿಯರ್ ,ದಲಿತ ಸಂಘ ಸಮಿತಿಯ ರಾಜ್ಯ ಸಂಚಾಲಕರಾದ ದೇವದಾಸ್ ,ಮುಲ್ಕಿ ಮೂಡಬಿದ್ರೆ ಐಟಿ ಸೆಲ್ ಅಧ್ಯಕ್ಷರಾದ ನಿಸಾರ್ ಕರಾವಳಿ ,ಗ್ರಾ .ಪಂ ,ಮಾಜಿ ಸದಸ್ಯರಾದ ನಜೀರ್ ಕಿನ್ನಿಪದವು ,ಖಾದರ್ ಏರ್ಪೋರ್ಟ್ ಟೈಲರ್ ಜಯ ,ಸಂತೋಷ್ ಉನಿಲೆ ,ಹಫೀಜ್ ಕೊಳಂಬೆ ,ಮೊನಕ ಏರ್ಪೋರ್ಟ್ ,ಖಾದರ್ ಬಿ.ಎಚ್ ,ರಮೇಶಪದ್ಮಾ ,ಆಸೀಫ್ ,ಕಂದಾವರ ಗ್ರಾ ಪಂ ಸದಸ್ಯರಾದ ಅಶ್ರಫ್ ಅನ್ವರ್ ,ಉಮರ್ ,ಹಕೀಮ್ ,ಪಲ್ಲು ,ಮನ್ಸೂರು,ಶಬೀರ್ ಹಾಂದಿ ,ಅಝರ್ ಸಾಗರ್ ,ನಜೀರ್ ಊರಿನ ಹಿರಿಯರು ಮತ್ತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಫಕೀರಪ್ಪ ಮೂಲ್ಯ ಮತ್ತು ಕಂದಾಯ ಅಧಿಕಾರಿಗಳು ,ಮೆಸ್ಕಾಂ ಸಿಬ್ಬಂದಿ ಸ್ಥಳದಲ್ಲಿದ್ದರು .