ಹೊಸದುರ್ಗ ತಾಲ್ಲೂಕಿನ 6 ಕೆರೆಗಳ ಪುನಃಚ್ಚೇತನ ಭಾಗ್ಯ!
– ನಮ್ಮ ಊರು ನಮ್ಮ ಕೆರೆ ಅಭಿವೃದ್ಧಿ: ಡಾ.ವೀರೇಂದ್ರ ಹೆಗ್ಗಡೆ ಮೆಚ್ಚುಗೆ
– ಕನ್ನಡ ನಾಡಿನ ಗ್ರಾಮಗಳ ಅಭಿವೃದ್ಧಿಗೆ ಸಂಕಲ್ಪ ಮಾಡಿದ ಸಂಸ್ಥೆ
NAMMUR EXPRESS NEWS
ಹೊಸದುರ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೊಸದುರ್ಗ ತಾಲ್ಲೂಕಿನ ಕೆರೆ ಅಭಿವೃದ್ದಿ ವರದಿಯನ್ನು ಹೊಸದುರ್ಗ ಕ್ಷೇತ್ರ ಯೋಜನಾಧಿಕಾರಿ ಶಿವಣ್ಣ.ಎಸ್ ಅವರು ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ನೀಡಿದ್ದು ವರದಿ ಪರಿಶೀಲಿಸಿ ಮಾತನಾಡಿದ ಅವರು ಹೊಸದುರ್ಗ ತಾಲ್ಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾಗಿರುವ 6 ಕೆರೆಗಳ ಬಗ್ಗೆ ಮೆಚ್ಚುಗೆ ಮಾತನ್ನಾಡಿದರು.
ಹೊಸ ದುರ್ಗ ತಾಲೂಕಿನ ಮಲ್ಲಪ್ಪನಹಳ್ಳಿ -ಹೊಸದುರ್ಗ ರೋಡ್, ಗೌಡನಕಟ್ಟೆ ಕೆರೆ- ದ್ಯಾವಜ್ಜಪಾಳ್ಯ, ಬನಸಿಹಳ್ಳಿ , ಬೈರವೇಶ್ವರ ದೇವಸ್ಥಾನದ ಕೆರೆ – ಡಿ.ಬಿ.ಕೆರೆ, ಕಂಚೀ ಅಲ್ಲಾಳನಾಥ ದೇವಸ್ಥಾನದ ಕೆರೆ – ಕಂಚೀನಗರ , ಬೋಕಿಕೆರೆ ಕೆರೆ ಈ ಸ್ಥಳಗಳಲ್ಲಿ ಕೆರೆ ಪುನಃಚ್ಚೇತನ ಮಾಡಿ ಕ್ಷೇತ್ರದ ಅನುದಾನ 42,92,782 /- ಮೊತ್ತ ಖರ್ಚಾಗಿದ್ದು ಇದಕ್ಕೆ ಸ್ಥಳೀಯ ನಮ್ಮ ಊರು ನಮ್ಮ ಕೆರೆ ಸಮಿತಿಯ ಸದಸ್ಯರು ಉತ್ತಮವಾಗಿ ಕೆರೆಗಳನ್ನು ಪುನಃಚ್ಚೇತನ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸದುರ್ಗ ತಾಲ್ಲೂಕಿನಲ್ಲಿ ಧರ್ಮಸ್ಥಳ ಯೋಜನೆಯಿಂದ ಅಭಿವೃದ್ಧಿಪಡಿಸಿರುವ 6 ಕೆರೆ ರಚನೆ,2 ವಾತ್ಸಲ್ಯ ಮನೆ ರಚನೆ, ವಿಕಲ ಚೇತನರಿಗೆ ವಿವಿಧ ರೀತಿಯ ಪರಿಕರ ವಿತರಣೆ, ಇನ್ನೀತರ ಸಮಾಜಮುಖಿ ಕೆಲಸಗಳನ್ನು ಉತ್ತಮವಾಗಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ,ಗಣ್ಯರು ಸಹಕಾರ ನೀಡಿರುವುದು ಶ್ಲಾಘನೀಯ ಎಂದ ಅವರು ಹೆಚ್ಚಿನ ಸಮಾಜಮುಖಿ ಕೆಲಸಗಳನ್ನು ಮಾಡಿ ಎಂದು ಪೂಜ್ಯ ವೀರೇಂದ್ರ ಹೆಗಡೆಯವರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಪ್ರಾದೇಶಿಕ ನಿರ್ದೇಶಕಿ ಗೀತಾ.ಬಿ, ಹಿರಿಯೂರು ಜಿಲ್ಲಾ ನಿರ್ದೇಶಕ ವಿನಯ್ ಕುಮಾರ್ ಸುವರ್ಣ, ಹಾಲು ರಾಮೇಶ್ವರ ಯೋಜನಾಧಿಕಾರಿ ಚಂದ್ರಶೇಖರ್, ಮತ್ತು ಹೊಸದುರ್ಗ ಯೋಜನಾಧಿಕಾರಿ ಶಿವಣ್ಣ ಉಪಸ್ಥಿತರಿದ್ದರು.
ಕನ್ನಡ ನಾಡಿನ ಗ್ರಾಮಗಳ ಅಭಿವೃದ್ಧಿಗೆ ಸಂಕಲ್ಪ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕನ್ನಡ ನಾಡಿನ ಗ್ರಾಮಗಳ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದು, ರೈತನ ಜೀವನಾಡಿ ಕೆರೆಗಳ ಅಭಿವೃದ್ಧಿಯೇ ನಮ್ಮ ಗುರಿ, ಸಾರ್ವಜನಿಕರು ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ನಮ್ಮ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನೌಕರರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಮಹಿಳೆ ಸ್ವಾವಲಂಬಿಯಾಗಿ ಬದುಕು ನಡೆಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.