ಕರಾವಳಿ ದೈವ ದರ್ಶನಕ್ಕೆ ಬಂದ ಬಾಲಿವುಡ್ ತಾರೆಯರು!
– ನಟಿ ಕತ್ರಿನಾ ಕೈಫ್, ಸುನೀಲ್ ಶೆಟ್ಟಿ ಸೇರಿ ಅನೇಕರ ಆಗಮನ
– ಕ್ರಿಕೆಟಿಗರಾದ ಸೂರ್ಯ ಕುಮಾರ್ ಯಾದವ್, ರಾಹುಲ್ ಭೇಟಿ
NAMMUR EXPRESS NEWS
ಮಂಗಳೂರು: ಕರಾವಳಿ ದೈವ ಪವಾಡ ಇದೀಗ ದೇಶದ ಎಲ್ಲೆಡೆ ಸದ್ದು ಮಾಡುತ್ತಿದೆ. ಇತ್ತೀಚೆಗೆ ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾದ ಆಟಗಾರ ಸೂರ್ಯ ಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಉಡುಪಿಯ ಕಾಪು ಶ್ರೀ ಮಾರಿಗುಡಿಗೆ ಭೇಟಿ ನೀಡಿದ್ದರು. ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಕ್ಷೇತ್ರಕ್ಕೆ ಬಾಲಿವುಡ್ ದಂಡೇ ಆಗಮಿಸಿದೆ. ನಟಿ ಕತ್ರಿನಾ ಕೈಫ್ ಕೂಡ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ತುಳುನಾಡಿನ ಕಾರ್ಣಿಕ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆತಿಯಾ ಶೆಟ್ಟಿ ಹಾಗೂ ಕ್ರಿಕೆಟರ್ ಕೆ.ಎಲ್.ರಾಹುಲ್ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ನಡೆಯುವ ಕೋಲ ಸೇವೆಯಲ್ಲೂ ಭಾಗವಹಿಸಿದ್ದಾರೆ.
ರಾತ್ರಿ ನಡೆದ ಕೋಲದಲ್ಲಿ ಪುರಷರಿಗಷ್ಟೇ ಅವಕಾಶ ಇದ್ದ ಕಾರಣ ಕತ್ರಿನಾ ಕೈಫ್ ಮತ್ತು ಆತಿಯಾ ಶೆಟ್ಟಿ ಕೋಲ ಸೇವೆಯಲ್ಲಿ ಪಾಲ್ಗೊಂಡಿಲ್ಲ. ಕ್ಷೇತ್ರಕ್ಕೆ ಆಗಮಿಸಿದ ವೇಳೆ ಕಚೇರಿಯಲ್ಲಿ ಕತ್ರಿನಾ ಕೈಫ್ ಕ್ಷೇತ್ರದ ಮಹಿಮೆ ಬಗ್ಗೆ ತಿಳಿದುಕೊಂಡರು.