ಶೃಂಗೇರಿಯಲ್ಲಿ ಉಕ್ಕಿದ ತುಂಗೆ: ಹಲವು ಕಡೆ ಮುಳುಗಡೆ!
– ರಸ್ತೆ ಸಂಪರ್ಕ ಕಡಿತ: ವಾಹನಗಳು ನೀರಿನಲ್ಲಿ ಮುಳುಗಡೆ
– ಅಂಗಡಿ ಮುಂಗಟ್ಟುಗಳು ಪ್ರವಾಹಕ್ಕೆ ಆಹುತಿ
– ಹೊರನಾಡು ಸಂಪರ್ಕ ಕಡಿತ: ನದಿಯಲ್ಲಿ ತೇಲಿ ಬರುತ್ತಿವೆ ಹಾವು!
ವಿಶೇಷ ವರದಿ: ಸಚಿನ್ ಶೃಂಗೇರಿ
NAMMUR EXPRESS NEWS
ಶೃಂಗೇರಿ: ಶೃಂಗೇರಿ ಗಾಂಧೀ ಮೈದಾನ ಜಲಾವೃತವಾಗಿದ್ದು ತುಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ನದಿ ತೀರದ ಜನರಿಗೆ ಸುರಕ್ಷಿತವಾಗಿರಲು ಸೂಚನೆ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕ್ಷಣಕ್ಷಣಕ್ಕೂ ತುಂಗೆಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ತುಂಗೆಯಿಂದ ತಾಲೂಕಿನಾದ್ಯಂತ ಪ್ರವಾಹ ಭೀತಿ ಎದುರಾಗಿದೆ.
ಕಳೆದ ಮೂರು ದಿನಗಳಿಂದ ಅಬ್ಬರಿಸಿದ ಮಳೆಗೆ ಮಲೆನಾಡು ತತ್ತರಗೊಂಡಿದೆ. ಜಿಲ್ಲೆಯ ಅನೇಕ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿ ನದಿ,ಹಳ್ಳ ಕೊಳ್ಳ ಉಕ್ಕಿ ಹರಿಯುತ್ತಿದೆ. ರಸ್ತೆ ಸಂಪರ್ಕ ಹಲವೆಡೆ ಬಂದ್ ಆಗಿದ್ದು ಜನಜೀವನ ಅಸ್ಥವ್ಯಸ್ಥವಾಗಿದೆ. ತುಂಗಾ, ಭಧ್ರಾನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಶೃಂಗೇರಿಯಲ್ಲಿ ತಂಗೆಯ ಪ್ರವಾಹ ಎದುರಾಗಿದೆ. ಪ್ರವಾಹದಲ್ಲಿ ಗಾಂಧೀಮೈದಾನ ಸಂಪೂರ್ಣ ಜಲಾವೃತಗೊಂಡಿದ್ದು ಅಂಗಡಿ ಮುಂಗಟ್ಟುಗಳು ಪ್ರವಾಹಕ್ಕೆ ಆಹುತಿಯಾಗಿದೆ,. ಅನೇಕ ಕಡೆ ಗದ್ದೆ,ತೋಟಗಳು ಜಲಾವೃತಗೊಂಡಿದ್ದು ರೈತರಿಗೆ ಕೃಷಿಕಾರ್ಯಗಳಿಗೆ ತೊಂದರೆ ಉಂಟಾಗಿದೆ.
ಹೊರನಾಡು ಸಂಪರ್ಕ ಕಡಿತ
ಹೆಬ್ಬಾಳೆ ಸೇತುವೆ ಮುಳುಗಡೆಗೊಂಡಿದ್ದು ಹೊರನಾಡು ಸಂಪರ್ಕ ಕಡಿತಗೊಂಡಿದೆ, ಶೃಂಗೇರಿ ಶ್ರೀಮಠದ ಹಿಂಭಾಗ ಶೃಂಗೇರಿ ವಿದ್ಯಾರಣ್ಯಪುರ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದೆ,ಕುರುಬಗೇರಿ ರಸ್ತೆ ಜಲಾವೃತಗೊಂಡು ಸಂಪಕರ್ಕ ಕಡಿತಗೊಂಡಿದೆ. ಅನೇಕ ಕಡೆ ಭೂಕಃಸೌತ ಉಂಟಾಗಿದೆ.ಪ್ರವಾಹದಲ್ಲಿ ವಿವಿಧ ಹಾವುಗಳು ಕೊಚ್ಚಿಕೊಂಡು ಬಂದಿದ್ದು ಜನರಿಗೆ ಆತಂಕ ಶುರುವಾಗಿದೆ.ಕ್ಷಣ ಕ್ಷಣಕ್ಕೂ ನದಿಗಳ ನೀರಿನ ಮಟ್ಟ ಏರುತ್ತಿದ್ದು ಸದ್ಯ ಪ್ರವಾಸಿಗರು ಜಿಲ್ಲೆಗೆ ತಮ್ಮ ಪ್ರವಾಸದ ಯೊಚನೆ ಮಾಡಿದ್ದರೆ ಮುಂದೂಡಲು ಮನವಿ ಮಾಡಲಾಗಿದೆ. ಶೃಂಗೇರಿ ಶ್ರೀಮಠದ ನರಸಿಂಹವನ ಜಲಾವೃತವಾಗಿದೆ. ವಾಹನಗಳು ಮುಳುಗಿವೆ.