ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನಾಹುತ!
– ಜಿಲ್ಲಾಡಳಿತದಿಂದ ಸಂಸದರ ಜತೆಗೆ ಚರ್ಚೆ
– ಯಾವುದೇ ತುರ್ತು ಸಂದರ್ಭದಲ್ಲಿ 112 ಗೆ ಕರೆ ಮಾಡಿ!
– ಶೃಂಗೇರಿಯಲ್ಲಿ ಹೆಚ್ಚಿದ ತುಂಗಾ ನದಿ ಪ್ರವಾಹ
NAMMUR EXPRESS NEWS
ಕಳಸ: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನದಿಗಳು ಉಕ್ಕಿ ಹರಿದು,ಪ್ರವಾಹ ಉಂಟಾಗಿ, ಹಲವೆಡೆ ರಸ್ತೆಗೆ ಗುಡ್ಡ ಕುಸಿದು ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆಯ ಮೇಲೆ ನದಿಯ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸೇತುವೆಯ ಎರಡು ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಸಿಬ್ಬಂದಿಗಳನ್ನುನಿಯೋಜಿಸಿದ್ದು, ಸೇತುವೆಯಲ್ಲಿ ದನವೊಂದು ಪ್ರವಾಹಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿತ್ತು.ಸಾರ್ವಜನಿಕರು ಸೇತುವೆಯ ಬಳಿ ಹೋಗಬಾರದಾಗಿ ಹಾಗೂ ತಮ್ಮ ಜಾನುವಾರುಗಳನ್ನು ಸೇತುವೆಯ ಬಳಿ ಬಿಡಬಾರದಾಗಿ ಕೋರಿದೆ.
ಬದಲಿ ಮಾರ್ಗ:- ಕಳಸದಿಂದ ಹೊರನಾಡಿಗೆ ಹೋಗುವವರು ಹಳುವಳ್ಳಿಯಿಂದ ದಾರಿಮನೆ ಮಾರ್ಗವಾಗಿ ಹಾಗೂ ಹೊರನಾಡಿನಿಂದ ಕಳಸಕ್ಕೆ ಬರುವವರು ದಾರಿಮನೆ ಇಂದ ಹಳುವಳ್ಳಿ ಮಾರ್ಗವಾಗಿ ಸಂಪರ್ಕಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ಯಾವುದೇ ತುರ್ತು ಸಂದರ್ಭದಲ್ಲಿ 112 ಗೆ ಕರೆ ಮಾಡಿ.
ಶೃಂಗೇರಿಯಲ್ಲಿ ತುಂಗಾ ನದಿ ಪ್ರವಾಹ
ಶೃಂಗೇರಿ: ಭಾರೀ ಮಳೆಗೆ ಶೃಂಗೇರಿ ಕಾರ್ಕಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಬಳಿ ತುಂಗಾ ನದಿ ಪ್ರವಾಹ ಬಂದಿದ್ದು ರಸ್ತೆ ಮೇಲೆ ನೀರು ಬಂದಿದ್ದು ಶೃಂಗೇರಿ ಕಾರ್ಕಳ ಸಂಪರ್ಕ ಬಂದ್ ಆಗಿದೆ.ಶೃಂಗೇರಿಯ ಕುರುಬಗೇರಿ ರಸ್ತೆ ಮೇಲೆ ತುಂಗಾ ಪ್ರವಾಹ ಬಂದಿದ್ದು ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಳೆದ ಮೂರು ದಿನಗಳಿಂದ ಪ್ಯಾರಲಲ್ ರಸ್ತೆಯ ಮೇಲಿರುವ ತುಂಗಾ ಪ್ರವಾಹ ಈಗ ಮತ್ತಷ್ಟು ಹೆಚ್ಚಾಗಿದೆ. ಮತ್ತೆ ಗಾಂಧೀಮೈದಾನಕ್ಕೆ ನೀರು ನುಗ್ಗಿದ್ದು ಪಾರ್ಕಿಂಗ್ ಸ್ಥಳ ಸಂಪೂರ್ಣ ಜಲಾವೃತಗೊಂಡಿದೆ. ಮಳೆಯೊಂದಿಗೆ ಗಾಳಿಯ ರಭಸವು ಹೆಚ್ಚಾಗಿದ್ದು ಹಲವೆಡೆ ಭೂಕುಸಿತ,ಮರ ಬಿದ್ದಿರುವ ಘಟನೆಗಳಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ
ಚಿಕ್ಕಮಗಳೂರು ಜಿಲ್ಲೆಯ ಪ್ರಾಕೃತಿಕ ವಿಕೋಪದಿಂದಾಗಿರುವ ನಷ್ಟ ಮತ್ತು ಅದರ ಪರಿಹಾರದ ಬಗ್ಗೆ ಜಿಲ್ಲಾಧಿಕಾರಿ ತಂಡದೊಂದಿಗೆ ಮಾನ್ಯ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಚರ್ಚೆಯನ್ನು ನಡೆಸಿದರು.