ಶಿವಮೊಗ್ಗ, ಚಿಕ್ಕಮಗಳೂರು ಮಳೆ ಡೇಂಜರ್!
– 2 ಜಿಲ್ಲೆಯಾದ್ಯಂತ ನದಿಗಳು, ಹಳ್ಳಗಳು ಅಪಾಯ ಮಟ್ಟದಲ್ಲಿ
– ಪ್ರವಾಸಿ ತಾಣಗಳಿಗೆ ನೀರಿನ ಹರಿವು ಹೆಚ್ಚಳ: ಪ್ರವಾಸ ಇಲಾಖೆ ನಿಷೇಧ
– ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ 112 ಸಹಾಯವಾಣಿ
NAMMUR EXPRESS NEWS
ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂಗಾರು ಮಳೆ ತೀವ್ರಗೊಂಡಿದ್ದು, ಇದರಿಂದಾಗಿ ನದಿಗಳು, ಹಳ್ಳಗಳು ತುಂಬಿ, ಅಪಾಯಮಟ್ಟವನ್ನು ತಲುಪಿ ಹರಿಯುತ್ತಿದ್ದು, ಸಾರ್ವಜನಿಕರ ಹಿತದೃಷ್ಠಿಯಿಂದ ಅಣೆಕಟ್ಟುಗಳು, ಜಲಪಾತಗಳು ಮತ್ತು ನದಿ ನೀರಿಗೆ ಇಳಿಯುವುದು, ಈಜಾಡುವುದು ಮತ್ತು ಸೆಲ್ಪಿಗಳನ್ನು ತೆಗೆದುಕೊಳ್ಳುವುದನ್ನು ಹಾಗೂ ಈ ರೀತಿಯ ಅಪಾಯಕಾರಿ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಭೇಟಿಯನ್ನು ನೀರಿನ ಹರಿವು ಕಡಿಮೆಯಾಗುವವರೆಗೆ ಸಂಭಂದಪಟ್ಟ ಇಲಾಖೆಗಳಿಂದ ನಿಷೇದಿಸಲಾಗಿರುತ್ತದೆ.
ಈ ಬಗ್ಗೆ ಈಗಾಗಲೇ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸೂಚನಾ ಫಲಕಗಳನ್ನು ಅಳವಡಿಸಿ ಸಿಬ್ಬಂಧಿಗಳನ್ನು ನಿಯೋಜಿಸಲಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ನೀರಿನ ಹರಿವು ಕಡಿಮೆಯಾಗುವವರೆಗೆ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡದೇ ಸಹಕರಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ 112 ಸಹಾಯವಾಣಿಗೆ ಕರೆ ಮಾಡಲು ಕೋರಿದೆ.ಚಿಕ್ಕಮಗಳೂರು ಜಿಲ್ಲೆಯಲ್ಲೂ ಪ್ರವಾಸ ನಿಷೇಧ ಮಾಡಲಾಗಿದೆ. ಅಲ್ಲದೆ ಹಲವು ಕಡೆ ರಸ್ತೆ ಕುಸಿಯುತ್ತಿದೆ ಈ ಬಗ್ಗೆ ಪ್ರವಾಸಿಗರು ಗಮನಿಸಬೇಕಿದೆ.