ಎನ್. ಆರ್ ಪುರ ಆಸ್ಪತ್ರೆ ಸೋರುತೈತೆ..!
– ರೋಗಿಗಳಿಗೆ, ಜನರಿಗೆ ಮಳೆಗಾಲದಲ್ಲಿ ಸಂಕಟ
– ನೆನೆದುಕೊಂಡು ಚೀಟಿ ತೆಗೆದುಕೊಳ್ಳಬೇಕು
NAMMUR EXPRESS NEWS
ಎನ್.ಆರ್.ಪುರ: ಸಾರ್ವಜನಿಕ ಆಸ್ಪತ್ರೆ ನರಸಿಂಹರಾಜಪುರ ಇಲ್ಲಿನ ಹೊರ ರೋಗಿಗಳ ನೋಂದಣಿ ವಿಭಾಗದ ಬಳಿ ಮಳೆ ನೀರು ಸೋರುತ್ತಿದ್ದು., ನೋಂದಣಿಗೆ ಬಂದ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಎನ್ ನಾಗೇಶ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆ ಕಟ್ಟಡ ಸೋರುತ್ತಿದ್ದು ಜನರು ಆರ್ಸಿಸಿ ಕಟ್ಟಡದೊಳಗೆ ಮಳೆಯಲ್ಲಿ ನೆನೆದುಕೊಂಡು ತಮ್ಮ ಹೆಸರು ನೋಂದಾಯಿಸುವ ಪರಿಸ್ಥಿತಿ ಎದುರಾಗಿದೆ. ಎಲ್ಲಾ ವೈದ್ಯರ ಕೊಠಡಿಗಳ ಎದುರು ಹೊರ ರೋಗಿಗಳಿಗಾಗಿ ಆಸದ ವ್ಯವಸ್ಥೆ ಮಾಡಲಾಗಿದೆ. ಆದರೆ ಇದರ ಮೇಲೂ ನೀರು ಬೀಳುತ್ತಿದ್ದು ಯಾರೂ ಕೂರಲಾಗಲಾಗದ ಪರಿಸ್ಥಿತಿ ಇದೆ. ಈ ಬಗ್ಗೆ ಮಾನ್ಯ ಶಾಸಕರು ಗಮನ ಹರಿಸಿ ಆಸ್ಪತ್ರೆಯಲ್ಲಿ ಮಳೆಯ ನೀರು ಸೋರದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಸ್ಪತ್ರೆಯಲ್ಲಿ ಫೋನ್ ಇಲ್ಲ!
ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಿರ ದೂರವಾಣಿ ಇಲ್ಲದೇ ಮೂರು ವರ್ಷ ಕಳೆದಿದೆ ಇದರ ಕಡೆ ಕೂಡ ಶಾಸಕರು ಗಮನಹರಿಸಬೇಕಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದು ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ.ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡೋದಾಗಿ ಆಗಾಗ ಶಾಸಕರು ಹೇಳಿಕೆ ನೀಡುತ್ತಾರೆ. ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಯ ಮುಖ್ಯ ಕಟ್ಟಡವೇ ಸೋರುತ್ತಿದ್ದು ರೋಗಿಗಳು ಪರದಾಡುತ್ತಿರುವುದರಿಂದ ತಕ್ಷಣ ಶಾಸಕರು ಸ್ಪಂದಿಸಿ ಮುಂದಿನ ಕ್ರಮ ಕೈಗೊಂಡು ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.