ಟಾಪ್ ನ್ಯೂಸ್ ಕರಾವಳಿ
ಸ್ನಾನ ಮಾಡುತ್ತಿದ್ದ ಯುವತಿ ವೀಡಿಯೋ ಚಿತ್ರೀಕರಣ!
– ಯುವಕನಿಗೆ ಧರ್ಮದೇಟು ನೀಡಿದ ಸ್ಥಳಿಯರು
– ಪುತ್ತೂರು: ಹೊಳೆಗೆ ಹಾರಿದ್ದ ಯುವಕ ಸನ್ಮತ್ ಮೃತದೇಹ ಪತ್ತೆ
– ಕುಂದಾಪುರ: ಜುಗಾರಿ ಆಟ: ಆರು ಜನರ ಅರೆಸ್ಟ್!
NAMMUR EXPRESS NEWS
ಮಂಗಳೂರು : ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೋ ಮಾಡಲು ಹೋಗಿ ಸಿಕ್ಕಿ ಬಿದ್ದ ಯುವಕನಿಗೆ ಸ್ಥಳಿಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನ ತೋಟಬೆಂಗ್ರೆಯಲ್ಲಿ ನಡೆದಿದೆ.
ಯುವತಿಯೊಬ್ಬಳು ಸ್ನಾನ ಮಾಡುತ್ತಿದ್ದಾಗ ಮನೆಯ ಹಿಂಭಾಗದಿಂದ ಬಂದಿದ್ದ ಯುವಕನೊಬ್ಬ ಕದ್ದು ವೀಡಿಯೋ ಮಾಡುತ್ತಿದ್ದು, ಇದನ್ನು ಗಮನಿಸಿದ ಯುವತಿಯು ಬೊಬ್ಬೆ ಹಾಕಿದ್ದಾಳೆ, ಕೂಡಲೇ ಸ್ಥಳೀಯರು ಬೆನ್ನತ್ತಿ ಯುವಕನನ್ನು ಹಿಡಿದು ತದಕಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗ್ರೆ ನಿವಾಸಿ ಮೊಹಮ್ಮದ್ ರಂಶಿದ್ (21) ಆರೋಪಿ ಎಂದು ಗುರುತಿಸಲಾಗಿದೆ. ಮಾದಕ ದ್ರವ್ಯ ವ್ಯಸನಿಯೂ ಆಗಿರುವ ಈತನನ್ನು ಪಣಂಬೂರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪುತ್ತೂರು: ಹೊಳೆಗೆ ಹಾರಿದ್ದ ಯುವಕ ಸನ್ಮತ್ ಮೃತದೇಹ ಪತ್ತೆ
ಪುತ್ತೂರು; ಸರ್ವೆ ಗೌರಿ ಹೊಳೆ ಬಳಿ ಸ್ಕೂಟರ್ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕ ಸನ್ಮತ್ (21) ಮೃತದೇಹ ಗೌರಿ ಹೊಳೆಯಲ್ಲಿ ಪತ್ತೆಯಾಗಿದೆ.
ಪುತ್ತೂರು ನಗರದ ಹೊರವಲಯದ ಮುಕ್ರಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಷೋರೂಂ ಉದ್ಯೋಗಿ, ಕಡಬ ತಾಲ್ಲೂಕಿನ ಕುದ್ಮಾರು ಗ್ರಾಮದ ತೆಕ್ಕಿತ್ತಡ್ಕ ನಿವಾಸಿ ಚಂದ್ರ ಗೌಡ ಅವರ ಪುತ್ರ ಸನ್ಮತ್ ಜುಲೈ 19 ರಂದು ಸರ್ವೆ ಸಮೀಪದ ಗೌರಿ ಹೊಳೆ ತಮ್ಮ ಸ್ಕೂಟರ್, ಪರ್ಸ್, ಮೊಬೈಲ್ ಇಟ್ಟು ನಾಪತ್ತೆಯಾಗಿದ್ದರು.
ಈ ಬಗ್ಗೆ ಸನ್ಮತ್ ತಂದೆ ಚಂದ್ರ ಗೌಡ ಅವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಜುಲೈ 20 ರಿಂದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದರು.ಇಂದು ಎಸ್ ಡಿ ಆರ್ ಎಪ್ ತಂಡ ಕೂಡ ಆಗಮಿಸಿತ್ತು.ಅಷ್ಟರಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಮೃತದೇಹ ಪತ್ತೆಯಾಗಿತ್ತು.ಸದ್ಯ ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.
ಕೋಟ: ಯಡಾಡಿ ಮತ್ಯಾಡಿ ಜುಗಾರಿ ಆಟ : ಆರು ಜನರ ಅರೆಸ್ಟ್!
ಕೋಟ: ಕುಂದಾಪುರ ತಾಲೂಕು ಯಡಾಡಿ – ಮತ್ಯಾಡಿ ಗ್ರಾಮದ ಮತ್ಯಾಡಿಯ ಮನೆಯೊಂದರಲ್ಲಿ ಜುಗಾರಿ ಆಡುತ್ತಿದ್ದ 6 ಜನ ಆರೋಪಿಗಳನ್ನು ಕೋಟ ಪೋಲೀಸರು ಬಂಧಿಸಿದ್ದಾರೆ.
ಠಾಣೆಯ ಸಬ್ಇನ್ಸ್ ಪೆಕ್ಟರ್ ಗುರುನಾಥ್ ಬಿ ಹಾದಿಮನಿ ಅವರಿಗೆ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಈ ಸಂದರ್ಭ ಸುರೇಶ್, ಕೃಷ್ಣ, ಸಂತೋಷ್, ವಿಶ್ವನಾಥ, ಚಂದ್ರ, ರವಿ, ಸುದಾಕರ, ಸತೀಶ, ಆನಂದ ಹುಣ್ಣೆಮಕ್ಕಿ ಆಟದಲ್ಲಿ ನಿರತರಾಗಿದ್ದು, ಇವರುಗಳಲ್ಲಿ 6 ಜನ ಆರೋಪಿಗಳನ್ನು ವಶಕ್ಕೆ ಪಡೆದು ಅವರ ಬಳಿ ಜುಗಾರಿ ಆಟಕ್ಕೆ ಬಳಸಿದ ಒಟ್ಟು ರೂ. 1,090 ನಗದು ಹಾಗೂ 52 ಇಸ್ಪೀಟು ಎಲೆಗಳು, 6 ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಿಂದ ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 2ಲಕ್ಷದ 61 ಸಾವಿರ ಆಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.