ಜೋಗ ಜಲಪಾತ ವೀಕ್ಷಣೆಗೆ ಬಂದಿದ್ದ ಯುವಕ ಕಣ್ಮರೆ..!
– 6 ದಿನಗಳಿಂದ ಶೋಧ: ಪತ್ತೆಯಾಗದ ಯುವಕ
– ಹೊಳೆಹೊನ್ನೂರು: ಖಾಸಗಿ ಬಸ್ ಹಿಟ್ ಅಂಡ್ ರನ್
– ಶಿವಮೊಗ್ಗ : ಬಸ್ ನಿಲ್ದಾಣದಲ್ಲಿ ಬಂಗಾರದ ಸರ ಕಳ್ಳತನ
– ಶಿವಮೊಗ್ಗ : ನೆಹರು ರಸ್ತೆಯಲ್ಲಿ ಬೈಕ್ ಕಳ್ಳತನ
NAMMUR EXPRESS NEWS
ಶಿವಮೊಗ್ಗ: ಯುವಕನೊಬ್ಬ ಜೋಗ ಜಲಪಾತ ವೀಕ್ಷಣೆಗೆ ಬಂದಿದ್ದ ಆದರೆ ವೀಕ್ಷಣೆಗೆ ಎಂದು ಬಂದವನು ಕಣ್ಮರೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಗದಗ ಮೂಲದ ಆನಂದ್ (24) ಕಣ್ಮರೆಯದ ಯುವಕ ಎಂದು ಹೇಳಲಾಗುತ್ತಿದ್ದು, ಜೂನ್ 15 ರಂದು ಆನಂದ್ ಜೋಗ ಜಲಪಾತ ವೀಕ್ಷಿಸಲು ಬೆಂಗಳೂರಿನಿಂದ ಆಗಮಿಸಿದ್ದ. ಬೆಂಗಳೂರಲ್ಲಿ ಆನಂದ್ ಟೀ ಪಾಯಿಂಟ್ ಇಟ್ಟುಕೊಂಡಿದ್ದ. ಇದೀಗ ಪೋಲೀಸರು ಆನಂದ್ ಗಾಗಿ ಶೋಧ ನಡೆಸುತ್ತಿದ್ದು, ದಟ್ಟ ಮಂಜು ಇದ್ದ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಘಟನಾ ಸ್ಥಳದಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಸೇರಿದಂತೆ ಸ್ಥಳೀಯರ ಸಹಕಾರದೊಂದಿಗೆ ಯುವಕನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ಹೊಳೆಹೊನ್ನೂರು: ಖಾಸಗಿ ಬಸ್ ಹಿಟ್ ಅಂಡ್ ರನ್
ಹೊಳೆಹೊನ್ನೂರು: ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದಾಗಿ ಪಾದಾಚಾರಿಗೆ ಹೊಡೆತಬಿದ್ದಿದ್ದು, ಆತನ ಮೂಳೆ ಮುರಿದಿದೆ. ಬಸ್ ಅಪಘಾತ ಪಡಿಸಿ ಮುಂದೆ ಸಾಗಿದೆ. ಅಗಸನಹಳ್ಳಿ ಗ್ರಾಮದ ನಿವಾಸಿ ಬಸವರಾಜ್ ಹೊಳೆಹೊನ್ನೂರು ನೃಪತುಂಗ ವೃತ್ತದ ಬಳಿ ಕೆನರಾ ಬ್ಯಾಂಕ್ ಮುಂದೆ ನಡೆದುಕೊಂಡು ಬರುತ್ತಿದ್ದು, ಶಿವಮೊಗ್ಗದ ಕಡೆಯಿಂದ ಬಂದ ಬಸ್ ದಿಡೀರ್ ಎಂದು ರಸ್ತೆ ಕೆಳೆಗೆ ಇಳಿಸಿ ಅಪಘಾತಪಡಿಸಿದ್ದಾನೆ.
ಬಸವರಾಜ್ ಗೆ ಎದೆಯ ಭಾಗಕ್ಕೆ ಪೆಟ್ಟು ಬಿದ್ದಿದೆ. ಆತನನ್ನ ಉಪಚರಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಬಸ್ ಚಾಲಕ ಹಿಟ್ ಡ್ ರನ್ ಮಾಡಿದ್ದಾನೆ. ಬಸವರಾಜ್ ಅವರು ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ. ವೈದ್ಯಕೀಯ ವರದಿಯಲ್ಲಿ ಬಸವರಾಜ್ ಗೆ ಎದೆಗೆ ಬಲವಾಗಿ ಪೆಟ್ಟಾಗಿದ್ದು ಮೂಳೆ ಮುರಿದಿರುವುದಾಗಿ ತಿಳಿದು ಬಂದಿದೆ. ಉಸಿರಾಟಕ್ಕೆ ತೊಂದರೆ ಉಂಟುಮಾಡಿ ಅಪಘಾತ ಸ್ಥಳದಲ್ಲಿ ಬಸ್ ನಿಲ್ಲಿಸದೆ ಹೋಗಿರುವ ಖಾಸಗಿ ಬಸ್ ನ್ನ ಪತ್ತೆ ಮಾಡಿಕೊಡುವಂತೆ ಪತ್ನಿ ಹೊಳೆಹೊನ್ನೂರಿನಲ್ಲಿ ದೂರು ದಾಖಲಿಸಿದ್ದಾರೆ.
– ಶಿವಮೊಗ್ಗ : ಬಸ್ ನಿಲ್ದಾಣದಲ್ಲಿ ಬಂಗಾರದ ಸರ ಕಳ್ಳತನ
ಶಿವಮೊಗ್ಗ : ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಟಾಂಡ್ ಕಳ್ಳಿಯರು ಪತ್ತೆಯಾದ ಬೆರಳೆಣಿಕೆಗಳ ದಿನಗಳ ಅಂತರದಲ್ಲಿಯೇ ಮತ್ತೊಂದು ಪ್ರಕರಣ ದಾಖಲಾಗಿದೆ. ಇದುವರೆಗೂ ಪತ್ತೆಯಾಗಿದ್ದ ಅಷ್ಟೂ ಪ್ರಕರಣಗಳನ್ನ ಪತ್ತೆ ಮಾಡಿದ ಪೊಲೀಸರಿಗೆ ಮತ್ತೊಂದು ಪ್ರಕರಣ ದಾಖಲಾಗಿದೆ. ಸೊರಬ ತಾಲೂಕಿನ ಮಾವಳ್ಳಿ ಗ್ರಾಮದ ಮಹಿಳೆಯೊಬ್ಬರು ಪತಿಯ ಜೊತೆ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಬಗುರ್ ಹುಕುಂ ಸಾಗುವಳಿದಾರರ ಸಭೆಯಲ್ಲಿ ಭಾಗಿಯಾಗಿ ಸಂಜೆ 4-45 ರ ಸಮಯದಲ್ಲಿ ಶಿವಮೊಗ್ಗ ಕೆಎಸ್ಸಾರ್ಟಿಸಿ ಬಸ್ ನಿಲ್ದಾ ಣಕ್ಕೆ ಬಂದಿದ್ದಾರೆ. 5 ಗಂಟೆಗೆ ಶಿಕಾರಿಪುರ ಸೊರಬದ ಮೇಲೆ ಶಿರಸಿಗೆ ತೆರಳುವ ಬಸ್ನ ಸೀಟ್ ಹಿಡಿದು ಕುಳಿತುಕೊಂಡಿದ್ದಾರೆ. ಈ ವೇಳೆ ರಶ್ ಆಗಿದೆ. ಬಸ್ ಹತ್ತಿ ಕುಳಿತುಕೊಂಡ ಬಳಿಕ ವ್ಯಾನಿಟಿಬ್ಯಾಗ್ ನೋಡಿಕೊಂಡಿದ್ದಾರೆ. ವ್ಯಾನಿಟಿ ಬ್ಯಾಗ್ ಅರ್ಧ ಜಿಪ್ ತೆಗೆದ ಕಾರಣ ಮಹಿಳೆ ಗಾಬರಿಗೊಂಡಿದ್ದಾರೆ. ಬ್ಯಾಗ್ ನ ಒಳಗಿನ ಜಿಪ್ ಸಹ ತೆಗೆದಿರುವುದು ಗೋಚರಿಸಿದೆ. ಬ್ಯಾಗ್ ನಲ್ಲಿದ್ದ 2014 ನೇ ಸಾಲಿನಲ್ಲಿ ಖರೀದಿಸಿದ ಸುಮಾರು 17 ಗ್ರಾಂ ತೂಕದ 75,000ರೂ ಬೆಲೆಬಾಳುವ ಬಂಗಾರದ ನೆಕ್ಸಸ್ ಕಳುವಾಗಿದೆ. ಬಸ್ ಹತ್ತುವಾಗ ಕಳ್ಳರು ಕೈಚಳಕ ತೋರಿರುವುದಾಗಿ ನೇತ್ರಾವತಿ ಎಂಬುವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ
– ಶಿವಮೊಗ್ಗ : ನೆಹರು ರಸ್ತೆಯಲ್ಲಿ ಬೈಕ್ ಕಳ್ಳತನ
ಶಿವಮೊಗ್ಗ: ಇಲ್ಲಿನ ಸಿಟಿ ಸೆಂಟರ್ ಪಕ್ಕದಲ್ಲಿ ನೆಹರು ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ವಾಗಿದೆ. ಹೊನ್ನಾಳಿಯ ಹಾಲೇಶ್ ಎಂಬುವವರು ತಮ್ಮ ಸ್ಟೆಂಡರ್ ಬೈಕ್ ಅನ್ನು ಸಿಟಿ ಬಸ್ ಸ್ಟಾಪ್ ಪಕ್ಕದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದರು. ಸಂಜೆ 5.30ರ ಹೊತ್ತಿಗೆ ಸಿಟಿ ಸೆಂಟರ್ ಮಾಲ್ ಗೆ ಹೋಗಿ ಸಂಜೆ 6 ಗಂಟೆಗೆ ಹಿಂತಿರುಗಿದಾಗ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಿದರೂ ಬೈಕ್ ಸಿಕ್ಕಿರಲಿಲ್ಲ. ಏಪ್ರಿಲ್ 2ರಂದು ಘಟನೆ ಸಂಭವಿಸಿದೆ. ವೈಯಕ್ತಿಕ ಕಾರಣಕ್ಕೆ ತಡವಾಗಿ ದೂರು ನೀಡುತ್ತಿರುವುದಾಗಿ ಹಾಲೇಶ್ ಉಲ್ಲೇಖಿಸಿದ್ದಾರೆ. ದೊಡ್ಡಪೇಟೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.