ಕರಾವಳಿ ನ್ಯೂಸ್
– ಕರಾವಳಿ ದೈವ ಕಾರಣಿಕ ಜೀವ ಉಳಿಸಿತು!
– ಕೆಸರುಗದ್ದೆ ಕ್ರೀಡಾಕೂಟದ ಸಂದರ್ಭದಲ್ಲಿ ತಪ್ಪಿದ ಭಾರೀ ಅನಾಹುತ
– ಚಲಿಸುತ್ತಿದ್ದ ಲಾರಿ ಮೇಲೆ ಬಿದ್ದ ವಿದ್ಯುತ್ ಕಂಬ: ಜೀವ ಉಳಿಯಿತು!
– ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮೂವರು ಅರೆಸ್ಟ್!
– ಟಯರ್ ಬದಲಿಸುವ ವೇಳೆ ಟಯರ್ ಸ್ಫೋಟ; ಗಾಯ
NAMMUR EXPRESS NEWS
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ವರಕಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಜು.24 ರಂದು (ಇಂದು) ಬೆಳಗ್ಗೆ ಮದಡ್ಕ ಕಡೆಯಿಂದ ಗುರುವಾಯನಕೆರೆ ಕಡೆ ಬರುತ್ತಿದ್ದ ಲಾರಿ ಮೇಲೆ ಎರಡು ವಿದ್ಯುತ್ ಕಂಬ ಏಕಾಏಕಿ ಮುರಿದು ಬಿದ್ದಿದೆ.
ಲಾರಿ ಮೇಲೆ ವಿದ್ಯುತ್ ಕಂಬ ಬೀಳುವ ವೇಳೆ ಎರಡು ಬೈಕ್ ಸವಾರರು ಸ್ಕಿಡ್ ಅಗಿ ರಸ್ತೆಗೆ ಬಿದ್ದಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಬೈಕ್ ಸವಾರರಿಗೆ ಯಾವುದೇ ಗಾಯವಾಗಿಲ್ಲ. ಲಾರಿ ಮೇಲೆ ವಿದ್ಯುತ್ ಕಂಬ ಬಿದ್ದಿದ್ದರಿಂದ ಒಂದು ಗಂಟೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಘಟನೆಯಿಂದ ಲಾರಿ ಚಾಲಕ ಅದೃಷ್ಟವಶಾತ್ ಪರಾಗಿರುವುದು ಮಾತ್ರ ಪವಾಡವೇ ಎನ್ನಲಾಗಿದೆ.
ಕೆಸರುಗದ್ದೆ ಕ್ರೀಡಾಕೂಟದಲ್ಲಿ ತಪ್ಪಿದ ಭಾರೀ ಅನಾಹುತ; ಜಾಗದ ದೈವಗಳಿಂದ ಕಾರಣಿಕ
ಪುಂಜಾಲಕಟ್ಟೆ: ಸಿದ್ದಕಟ್ಟೆ ಸಮೀಪದ ಕೊನೆರಬೆಟ್ಟುನಲ್ಲಿರವಿವಾರದಂದು ಸಿದ್ದಕಟ್ಟೆ ಬಂಟರ ಸಂಘದ ವತಿಯಿಂದ ಕೆಸರುಗದ್ದೆ ಕ್ರೀಡಾ ಕೂಟವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ದೈವಗಳ ಕಾರಣಿಕದಿಂದ ಸಂಭವಿಸಬಹುದಾದ ಬಹುದೊಡ್ಡ ಅಪಾಯ ತಪ್ಪಿಹೋದ ಘಟನೆ ನಡೆದಿದೆ.
ಪ್ರತಿ ವರ್ಷದಂತೆ ಸಿದ್ದಕಟ್ಟೆ ಬಂಟರ ಸಂಘದ ವತಿಯಿಂದ ಕೆಸರುಗದ್ದೆ ಕ್ರೀಡಾ ಕೂಟ ಆಯೋಜಿಸಿದ್ದು, ಕೆಸರುಗದ್ದೆ ಕೂಟದ ಮೊದಲು ಕೊನೆರಬೆಟ್ಟು ಸ್ಥಳ ದೈವಗಳಿಗೆ ಪರ್ವ ನಡೆಸಿ ಪ್ರಾರ್ಥನೆ ಮಾಡುವುದು ವಾಡಿಕೆ. ಈ ಬಾರಿಯೂ ಕೆಸರುಗದ್ದೆ ಕೂಟದ ಮೊದಲು ಪ್ರಾರ್ಥನೆ ಸಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಕ್ರೀಡಾ ಆಯೋಜಕರ ಗಮನಕ್ಕೆ ಕ್ರೀಡಾಕೂಟ ನಡೆಯುವ ಗದ್ದೆಯ ಮೇಲ್ಬಾಗದಲ್ಲಿ ಹೈಟೆನ್ನನ್ ವಿದ್ಯುತ್ ತಂತಿ ಹಾದು ಹೋಗಿದ್ದು ಕಂಡಿದ್ದು ಕ್ರೀಡಾಕೂಟದಲ್ಲಿ ವಾಲಿಬಾಲ್ ಮೊದಲಾದ ಪಂದ್ಯಾಟಗಳಿರುವ ಕಾರಣ ಕ್ರೀಡಾಕೂಟ ನಡೆಸುವ ದಿನ ಈ ಲೈನ್ ಸ್ಥಗಿತಗೊಳಿಸುವಂತೆ ಮೆಸ್ಕಾಂ ಇಲಾಖೆಗೆ ಮನವಿ ಮಾಡಿ ಲೈನ್ ಕಟ್ ಮಾಡಿಸಿದ್ದರು. ಆದರೆ ವಿಚಿತ್ರವೆನ್ನುವಂತೆ ಜು.21ರ ರವಿವಾರದಂದು ಕ್ರೀಡಾಕೂಟ ನಡೆಯುವಾಗ ಭಾರೀ ಗಾಳಿ ಬೀಸಿ ವಿದ್ಯುತ್ ಕಂಬ ತುಂಡಾಗಿ ತಂತಿ ಸಹಿತ ಗದ್ದೆಗೆ ಬಿದ್ದಿದೆ. ಗದ್ದೆಯಲ್ಲಿ ಮಕ್ಕಳ ಸಹಿತ ಸುಮಾರು ಐನೂರರಷ್ಟು ಜನ ಸೇರಿದ್ದರು. ಆದರೆ ಮೊದಲೇ ಲೈನ್ ಕಟ್ ಮಾಡಿದ್ದುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಇದೀಗ ಆಯೋಜಕರಿಗೆ ಜಾಗದ ದೈವಗಳು ಮೊದಲೇ ಸೂಚನೆ ನೀಡಿದ್ದಿರಬಹುದು ಎಂದು ಎಲ್ಲೆಡೆಯೂ ವೈರಲ್ ಆಗಿದೆ.
ಕಡಬ; ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮೂವರ ಬಂಧನ
ಕಡಬ; ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮೂವರನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಕಡಬ ತಾಲೂಕಿನ ಪಂಜ ಅರಣ್ಯ ವಲಯ ವ್ಯಾಪ್ತಿಯ ಬಲ್ಯದಲ್ಲಿ ನಡೆದಿದೆ.ಓರ್ವ ಆರೋಪಿ ಎಸ್ಕೆಪ್ ಆಗಿದ್ದಾನೆ. ವಿಜಯ್, ಹೇಮಂತ್, ಸಜಿ ಬಂಧಿತರಾಗಿದ್ದು ಪ್ರವೀಣ್ ಎಂಬಾತ ತಪ್ಪಿಸಿಕೊಂಡಿದ್ದಾನೆ. ಬಂಧಿತರಿಂದ ನಾಡ ಕೋವಿ ಸಹಿತ ಬೇಟೆಯಾಡಿದ ಕಾಡು ಪ್ರಾಣಿ ಬರ್ಕಾ ವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಕುಟ್ರುಪ್ಪಾಡಿ ಗ್ರಾ.ಪಂ ನ ಬಲ್ಯ ಗ್ರಾಮದ ಪಟ್ಟೆ ಎಂಬಲ್ಲಿ ಯಶೋಧರ ಗೌಡ ಎಂಬವರಿಗೆ ಸೇರಿದ ಜಾಗದ ತೆಂಗಿನ ತೋಟದಲ್ಲಿ ಕಾಡು ಪ್ರಾಣಿ ಬೇಟೆಯಾಡುತ್ತಿದ್ದ ಖಚಿತ ಮಾಹಿತಿ ಪಡೆದು ಅರಣ್ಯಾಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಜಾಗದ ಮಾಲಿಕರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಜಯಕುಮಾರ್, ಸುನಿಲ್ ಕುಮಾರ್, ಬೀಟ್ ಫಾರೆಸ್ಟ್ ರವಿ ಕುಮಾರ್, ಫಾರೆಸ್ಟ್ ದೇವಿ ಪ್ರಸಾದ್, ವಾಚರ್ ಗಣೇಶ್ ಹೆಗ್ಡೆ, ಚಾಲಕ ಪದ್ಮ ಕುಮಾರ್ ಭಾಗವಹಿಸಿದ್ದರು. ಉಪ ಸಂರಕ್ಷಣಾ ಅಧಿಕಾರಿ ಮರಿಯಪ್ಪ, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರವೀಣ್ ಶೆಟ್ಟಿ ಮಾರ್ಗದರ್ಶನದಲ್ಲಿ ಪ್ರೊಬೆಷನರಿ ಆರ್ ಎಫ್,ಒ ಅಕ್ಷಯ್ ಪ್ರಕಾಶ್ ಕರ್ (IFS)ತನಿಖೆ ನಡೆಸುತ್ತಿದ್ದಾರೆ.
ಪುತ್ತೂರು: ಟಯರ್ ಬದಲಿಸುವ ವೇಳೆ ಟಯರ್ ಸ್ಫೋಟ!
ಪುತ್ತೂರು: ಟಯರ್ ಬದಲಿಸುವ ವೇಳೆ ಟಯರ್ ಸ್ಪೋಟವಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಸೋಮವಾರ ರಾತ್ರಿ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸ್ಫೋಟ ತೀವ್ರತೆ ನೋಡಿದ್ರೆ ಬೆಚ್ಚಿ ಬೀಳುವಂತಿದೆ.ಘಟನೆಯಲ್ಲಿ ಗಾಯಗೊಂಡವರನ್ನು ಬೆಳ್ತಂಗಡಿ ತಾಲೂಕಿನ ಕರಾಯದ ಜನತಾ ಕಾಲನಿಯ ರಶೀದ್ ಎಂದು ಗುರುತಿಸಲಾಗಿದೆ. ಕಲ್ಲು ಸಾಗಾಟದ ಲಾರಿಯ ಟಯರ್ ಪಂಚರ್ ಆದ ಕಾರಣ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು.
ಬಳಿಕ ಟಯರ್ ಪಂಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯರ್ ತಂದಿದ್ದರು. ಟಯರ್ ಬದಲಿಸುವ ವೇಳೆ ಒಮ್ಮೆಲೇ ಟಯರ್ ಸ್ಫೋಟವಾಗಿದ್ದು, ಅದರ ರಿಂಗ್ ಹೊರಚಿಮ್ಮಿದೆ. ರಭಸಕ್ಕೆ ಟಯರ್ ಸಹಿತ ರಶೀದ್ ಅವರು ತುಸು ದೂರ ಕಾಂಪೌಂಡ್ ಗೆ ಎಸೆಯಲ್ಪಟ್ಟಿದ್ದಾರೆ.ಸದ್ಯ ಆಸ್ಪತ್ರೆಯಲ್ಲಿ ರಶೀದ್ ಚಿಕಿತ್ಸೆ ಪಡೆಯುತ್ತಿದ್ದಾರೆ.