ಬಿಜೆಪಿ ನಾಯಕ ವೆನಿಲ್ಲಾ ಭಾಸ್ಕರ್ ಅವರಿಗೆ ಮಹತ್ವದ ಹುದ್ದೆ
– ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ರಾಷ್ಟ್ರೀಯ ಸ್ಟಿರಿಂಗ್ ಜಿಲ್ಲಾ ಸಮಿತಿಯ ನಾಮ ನಿರ್ದೇಶನ
– ಬಿಜೆಪಿಯ ವಿವಿಧ ಜವಾಬ್ದಾರಿ ನಿರ್ವಹಣೆ ಮಾಡಿದ್ದ ನಾಯಕ
NAMMUR EXPRESS NEWS
ನರಸಿಂಹರಾಜಪುರ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ರಾಷ್ಟ್ರೀಯ ಸ್ಟಿರಿಂಗ್ ಜಿಲ್ಲಾ ಸಮಿತಿಯ ನಾಮ ನಿರ್ದೇಶನ ಸದಸ್ಯರಾಗಿ, ಬಿಜೆಪಿ ಮುಖಂಡರಾದ ವೆನಿಲ್ಲಾ ಭಾಸ್ಕರ್ ಆಯ್ಕೆ ಆಗಿದ್ದಾರೆ. ಅವರು ಈ ಹಿಂದೆ ಬಿಜೆಪಿಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
ಬಿಜೆಪಿ ಬಾಳೆಹೊನ್ನೂರು ಹೋಬಳಿ ಅಧ್ಯಕ್ಷರಾಗಿ, ಎರಡು ಬಾರಿ ಎನ್ ಆರ್ ಪುರ ತಾಲೂಕು ಅಧ್ಯಕ್ಷರಾಗಿ,ಕಳೆದ ಬಾರಿ ಓಬಿಸಿ ಮೋರ್ಚಾ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾಗಿ ಭಾರತೀಯ ಜನತಾ ಪಾರ್ಟಿಯ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿ,ಪ್ರಸ್ತುತ ಕೇಂದ್ರ ಕಾಫಿ ಮಂಡಳಿಯ ಸದಸ್ಯರಾಗಿದ್ದಾರೆ.
ರಾಜಕೀಯ ಮಾತ್ರವಲ್ಲದೆ ವಿವಿಧ ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ವೆನಿಲ್ಲಾ ಭಾಸ್ಕರ್ರವರು ಈಗ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ರಾಷ್ಟ್ರೀಯ ಸ್ಟಿರಿಂಗ್ ಜಿಲ್ಲಾ ಸಮಿತಿಯ ನಾಮನಿರ್ದೇಶನ ಸದಸ್ಯರಾಗಿ ನಿಯುಕ್ತಿಗೊಂಡಿದ್ದಾರೆ. ಅವರಿಗೆ ಬಿಜೆಪಿ ನಾಯಕರಾದ ಜೀವರಾಜ್ ಸೇರಿದಂತೆ ಪ್ರಮುಖರು ಅಭಿನಂದನೆ ಸಲ್ಲಿಸಿದ್ದಾರೆ.