ಕಾಫಿ ನಾಡಲ್ಲಿ ಕಾರ್ಗಿಲ್ ವಿಜಯೋತ್ಸವದ ಸಂಭ್ರಮ!
– ಮೂಡಿಗೆರೆಯಿಂದ ಶೃಂಗೇರಿ, ಕೊಪ್ಪ, ಎನ್.ಆರ್.ಪುರದವರೆಗೆ ಕಾರ್ಗಿಲ್ ವಿಜಯ ಜ್ಯೋತಿ ರಥಯಾತ್ರೆ
– ಸ್ವಾಗತಿಸಿ ಸಂಭ್ರಮಿಸಿದ ದೇಶ ಭಕ್ತರು: ಯೋಧರಿಗೆ ಸನ್ಮಾನ
NAMMUR EXPRESS NEWS
ಕೊಪ್ಪ /ಶೃಂಗೇರಿ: ಭಾರತದಲ್ಲಿ ಪ್ರತಿವರ್ಷ ಜುಲೈ 26 ಅನ್ನು ʼಕಾರ್ಗಿಲ್ ವಿಜಯ್ ದಿವಸ್ʼ ಎಂದು ಆಚರಿಸಲಾಗುತ್ತದೆ. ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತದ ಗೆಲುವನ್ನು ಸಂಭ್ರಮಿಸುವ ದಿನ ಇದಾಗಿದೆ. ಮಾತ್ರವಲ್ಲ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿಯೂ ದೇಶದಾದ್ಯಂತ ಕಾರ್ಗಿಲ್ ವಿಜಯ ದಿನವನ್ನು ಆಚರಿಸುತ್ತಾರೆ. ಕಾರ್ಗಿಲ್ ವಿಜಯೋತ್ಸವಕ್ಕೀಗ 25ನೇ ವರ್ಷ. ಭಾರತೀಯ ಜನತಾ ಪಾರ್ಟಿ ಯುವ ಮೋರ್ಚ ಚಿಕ್ಕಮಗಳೂರು ಹುತಾತ್ಮ ಯೋಧರ ನೆನಪಿಗಾಗಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ನಿಮಿತ್ತ ಜಿಲ್ಲೆಯಾದ್ಯಂತ ಕಾರ್ಗಿಲ್ ವಿಜಯ ಜ್ಯೋತಿ ರಥ ಯಾತ್ರೆಯನ್ನು ಆಚರಿಸಲಾಯಿತು. ಮೂಡಿಗೆರೆಯಲ್ಲಿ ಯಾತ್ರೆ ಉದ್ಘಾಟನೆಗೊಂಡು ಅಲ್ದುರ್, ಬಾಳೆಹೊನ್ನೂರು, ಬಳಿಕ ಶೃಂಗೇರಿ ಮಠದ ಮುಖ್ಯ ದ್ವಾರದಿಂದ ಕಟ್ಟೆ ಬಾಗಿಲಿನವರೆಗೂ ಮೆರವಣಿಗೆ ನಡೆಸಿ ಬಳಿಕ ಕೊಪ್ಪ, ಎನ್.ಆರ್.ಪುರದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಶುಕ್ರವಾರ
ಬೀರೂರು, ಕಡೂರು, ತರೀಕೆರೆ ಬಳಿಕ ಚಿಕ್ಕಮಗಳೂರಲ್ಲಿ ಸಮಾರೋಪ ನಡೆಯಲಿದೆ.
ಯೋಧರಿಗೆ ಸನ್ಮಾನ: ಯೋಧರು ದೇಶ ಸೇವಕರು. ಕಾರ್ಗಿಲ್ ವಿಜಯೋತ್ಸವದ ಸಂಭ್ರಮದ ವೇಳೆ ದೇಶ ಸೇವೆ ಸಲ್ಲಿಸಿದ ಯೋಧರನ್ನು ಸನ್ಮಾನಿಸಲಾಯಿತು.