ಮೌಲ್ಯಯುತ ಶಿಕ್ಷಣ ಸಿಗದೆ ಮಾನವೀಯತೆ ಮಾಯ
– ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ಶಿವಣ್ಣ ಬೇಸರ
– ಹೊಸ ದುರ್ಗದಲ್ಲಿ ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರವನ್ನು ವಿತರಣೆ
NAMMUR EXPRESS NEWS
ಹೊಸದುರ್ಗ: ಪ್ರಸ್ತುತ ದಿನಗಳಲ್ಲಿ ಮೌಲ್ಯಯುತ ಶಿಕ್ಷಣ ಮಕ್ಕಳಿಗೆ ಸಿಗದೇ ಮಾನವೀಯತೆಯ ಹರಿವು ಕಡಿಮೆಯಾಗಿದೆ. ಶಾಲೆಯಲ್ಲಿಯೂ ಸಂಸೃತಿ, ಸಂಸ್ಕಾರ, ಗುರು ಹಿರಿಯರಿಗೆ ಗೌರವ ಆತ್ಮವಿಶ್ವಾಸ ಮಾಡಿಸುವ ಕೆಲಸ ಆಗಬೇಕಾಗಿದೆ. ಆಗ ಸಮಾಜದ ಕಡುಬಡವರನ್ನು ಶಿಕ್ಷಣದಿಂದ ಮೇಲೆತ್ತಲು ಸಾಧ್ಯವಾಗುತ್ತದೆ ಎಂದು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಶಿವಣ್ಣ ತಿಳಿಸಿದ್ದಾರೆ.
ನಗರದ ಯೋಜನಾ ಕಛೇರಿ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ವತಿಯಿಂದ ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರವನ್ನು ವಿತರಣೆ ಮಾಡಿ ಮಾತನಾಡಿದರು.
ರಾಜ್ಯದಲ್ಲಿ 1000 ಶಿಕ್ಷಕರ ನೇಮಕಾತಿ ಮಾಡಿದ್ದು ಹೊಸದುರ್ಗ ತಾಲ್ಲೂಕಿನಲ್ಲಿ 5 ಶಿಕ್ಷಕರ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಗಿದೆ. ಶಾಲೆಗಳಾದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವೆಂಗಳಾಪುರ ,ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಸಪ್ಪನಹಳ್ಳಿ,ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ದೊಡ್ಡಕಿಟ್ಟದಹಳ್ಳಿ , ಸರ್ಕಾರ ಹಿರಿಯ ಪ್ರಾಥಮಿಕ ಪಾಠಶಾಲೆ ಆರಳಹಳ್ಳಿ, ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಗ್ಗಲಕಟ್ಟೆ ಈ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಮಾಡಿದ್ದು ಸವಂಬರ್ ತಿಂಗಳಿಂದ ಶಾಲೆಗಳಲ್ಲಿ ಕಲಿಕೆಯ ಹಿನ್ನಡೆ ಇರುವ 10 ನೇ ತರಗತಿ ವಿದ್ಯಾರ್ಥಿಗಳಿಗೆ ವಿಷೇಶ ಬೋಧನಾ ತರಬೇತಿ ನೀಡಲಾಗುತ್ತಿದೆಎಂದು ತಿಳಿಸಿದರು.
ಮಂಜೂರಾತಿ ಪತ್ರವನ್ನು ಪಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಸಪ್ಪನಹಳ್ಳಿ ಶಿಕ್ಷಕಿ ಉಮಾದೇವಿ ಮಾತನಾಡಿ,ಉದ್ಯೋಗ ಇಲ್ಲದೆ ನಾನು ಮನೆಯಲ್ಲಿ ಕಷ್ಟ ಅನುಭವಿಸುತ್ತಿದ್ದೆ. ಧರ್ಮಸ್ಥಳ ಸಂಸ್ಥೆ ಈ ಒಂದು ಉದ್ಯೋಗ ಅವಕಾಶ ಕೊಟ್ಟಿದ್ದು ನನ್ನ ಕುಟುಂಬವನ್ನು ಅರ್ಥಿಕವಾಗಿ ಮೇಲೆತ್ತಲು ಸಹಾಯಕವಾಗಿದೆ. ನಾನು ಪ್ರಮಾಣಿಕವಾಗಿ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಕಲಿಕೆಗೆ ಆದ್ಯತೆ ನೀಡುತ್ತೇನೆ ಎಂದು ಮನದಾಳದ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಛೇರಿ ಪ್ರಬಂದಕರು ಪ್ರತಿಭಾ,ಕಛೇರಿ ಸಹಾಯಕರಾದ ನವೀನ್, ಮಂಜುನಾಥ್, ಉಪಸ್ಥಿತರಿದ್ದರು. ಶ್ವೇತ , ಚಂದ್ರಿಕಾ , ರಂಗನಾಥ ಇದ್ದರು.