ಅಸ್ತಿ, ಪಾಸ್ತಿ ಹಾನಿ: ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ
– ಶೃಂಗೇರಿ ಅತೀವೃಷ್ಟಿ ತಾಲೂಕೆಂದು ಘೋಷಣೆ ಮಾಡಲು ಪಟ್ಟು
– ಬಿಜೆಪಿ ವತಿಯಿಂದ ಶೃಂಗೇರಿಯಲ್ಲಿ ಪ್ರತಿಭಟನೆ: ಸರ್ಕಾರಕ್ಕೆ ಮನವಿ
NAMMUR EXPRESS NEWS
ಶೃಂಗೇರಿ: ಶೃಂಗೇರಿ ತಾಲೂಕಿನದ್ಯಂತ ಹಲವು ದಿನಗಳಿಂದ ಭಾರೀ ಮಳೆಯಿಂದಾಗಿ ಅಪಾರ ಆಸ್ತಿ, ಮನೆಗಳು ಹಾನಿಯಾಗಿದ್ದು, ವಿದ್ಯುತ್ ಇಲ್ಲದೆ ಹತ್ತು ದಿನಗಳು ಕಳೆದರೂ ಇನ್ನೂ ವ್ಯವಸ್ಥೆ ಸರಿಯಾಗದೆ ಜನ ಪರದಾಡುತ್ತಿದ್ದಾರೆ. ಆದ್ರೆ ಈಗಿನ ಕಾಂಗ್ರೇಸ್ ಸರ್ಕಾರ ಮನೆ ಹಾನಿಗೆ ಬಿಜೆಪಿ ಸರ್ಕಾರ ನೀಡುತ್ತಿದ್ದ 5 ಲಕ್ಷ ರೂ ಪರಿಹಾರವನ್ನು 1.5 ಲಕ್ಷಕ್ಕೆ ರೂಗಳಿಗೆ ಕಡಿಮೆಗೊಳಿಸಿದೆ. ಕೂಡಲೇ ಮನೆ, ಅಸ್ತಿ ಹಾನಿಗೆ ಸಮರ್ಪಕ ಪರಿಹಾರ ನೀಡಬೇಕು ಎಂದು ಅಗ್ರಹಿಸಿ ಶೃಂಗೇರಿ ಬಿಜೆಪಿ ಶೃಂಗೇರಿಯಲ್ಲಿ ಪ್ರತಿಭಟನೆ ನಡೆಸಿತು.
ಜತೆಗೆ ಜಿಲ್ಲಾ ಹೆಚ್ಚುವರಿ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಠಾರಿಯ ನೀಡಿದ ಹೇಳಿಕೆ ವಿರೋಧಿಸಿ ಮತ್ತು ಶೃಂಗೇರಿಯನ್ನು ಅತಿವೃಷ್ಟಿ ತಾಲೂಕೆಂದು ಘೋಷಣೆ ಮಾಡಬೇಕಿದ್ದು ಇಷ್ಟೆಲ್ಲಾ ಅನಾಹುತಗಳಾದರೂ ಕ್ಷೇತ್ರದ ಶಾಸಕರು ಭೇಟಿ ನೀಡದಿರುವುದು ದುರಂತ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಶೃಂಗೇರಿ ಬಿಜೆಪಿ ಮಂಡಲದಿಂದ ತಹಸೀಲ್ದಾರ್ರವರಿಗೆ ಸಮಸ್ಯೆ ಬಗ್ಗೆ ತಿಳಿಸಿ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ತಾಲೂಕು ಬಿಜೆಪಿ ಅಧ್ಯಕ್ಷರಾದ ಉಮೇಶ್ ತಲಗಾರ್, ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ಮತ್ತು ನೂತನ್ ಕುಮಾರ್, ಯುವ ಮೋರ್ಚಾ ಅಧ್ಯಕ್ಷ ಸುನಿಲ್ ಸಂಪೆಕೊಳಲು,ಪ್ರಧಾನಕಾರ್ಯದರ್ಶಿ ಶಶಿಕುಮಾರ್ ಹಾಗೂ ಪಕ್ಷದ ಪ್ರಮುಖರು,ಕಾರ್ಯಕರ್ತರು,ರೈತರು ಉಪಸ್ಥಿತರಿದ್ದರು.