ಬಾರ್ಕೂರು ರೋಟರಿ ಕ್ಲಬ್ ಪರಿಸರ ಸೇವೆಯ ಹೆಜ್ಜೆ!
– ವನ ಮಹೋತ್ಸವ, ಉಚಿತ ಔಷಧಿ ಗಿಡ ಹಾಗೂ ಹಣ್ಣಿನ ಗಿಡ ವಿತರಣೆ
– ಬಾರ್ಕೂರು ರೋಟರಿ ಕ್ಲಬ್ ಗಣೇಶ್ ಶೆಟ್ಟಿ ಸಾರಥ್ಯ
– ರೋಟರಿ ಸದಸ್ಯರು, ಸ್ಥಳೀಯ ಜನರ ಸಾಥ್
NAMMUR EXPRESS NEWS
ಬ್ರಹ್ಮಾವರ: ರೋಟರಿ ಕ್ಲಬ್ ಬಾರ್ಕೂರು ಇವರ ಆಶ್ರಯದಲ್ಲಿ ವನ ಮಹೋತ್ಸವ ಮತ್ತು ಉಚಿತ ಔಷಧಿ ಗಿಡ ಹಾಗೂ ಹಣ್ಣಿನ ಗಿಡ ವಿತರಣೆ ಬಾರ್ಕೂರು ಅಂಚೆ ಕಛೇರಿ ಬಳಿ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ಬಾರ್ಕೂರು ರೋಟರಿ ಕ್ಲಬ್ ಅಧ್ಯಕ್ಷರಾದ ಗಣೇಶ್ ಶೆಟ್ಟಿ. ಬಿ (ಅಧ್ಯಕ್ಷರು ರೋಟರಿ ಕ್ಲಬ್ ಬಾರ್ಕೂರು ),ಪ್ರಸಾದ್ ಭಟ್ (ಅನ್ನ ಪೂರ್ಣ ನರ್ಸರಿ ಪೇತ್ರಿ )ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೆ. ಪಿ ಕಾಂಚನ್ (ಮಾಜಿ ಸಹಾಯಕ ಗವರ್ನರ್ ), ಅಶೋಕ್ ಶೆಟ್ಟಿ(ಸಹ ಸಂಪಾದಕರು RI ಜಿಲ್ಲೆ 3182), ಡಾ. ಬಿ ಧನಂಜಯ (ಮುಖ್ಯಸ್ಥರು ಕೆವಿಕೆ ಬ್ರಹ್ಮಾವರ, ಹರೀಶ್ ಕೆ. (ಉಪವಲಯ ಅರಣ್ಯಾಧಿಕಾರಿ),ಮೋಹನ್ ಭಟ್ (ಪ್ರಗತಿಪರ ಕೃಷಿಕರು ), ಶ್ರೀನಿವಾಸ್ ಶೆಟ್ಟಿಗಾರ್ (ಮಾಲಕರು ಶೆಟ್ಟಿಗಾರ್ ಇಂಡಸ್ಟ್ರಿಸ್ )ಆನಂದ ಶೆಟ್ಟಿ (ಮಾಜಿ ಸಹಾಯಕ ಗವರ್ನರ್ ), ಸುಬ್ರಮಣ್ಯ ಪೂಜಾರಿ (ಅಧ್ಯಕ್ಷರು ಸ್ವಾಗತ್ ವಿವಿದೋದ್ದೇಶ ಸಹಕಾರಿ ಸಂಘ ಬಾರ್ಕೂರು, ಸಂದೀಪ್ ಪೂಜಾರಿ (ಉದ್ಯಮಿ )ರೋಟರಿ ಕ್ಲಬ್ ಸದಸ್ಯರು, ರೋಟರಿ ಮಹಿಳಾ ಬಳಗದ ಸದಸ್ಯರು, ಮಾಧ್ಯಮ ಪ್ರತಿ ನಿಧಿಗಳಾದ ಶ್ರೀಉದಯ ಆಚಾರ್, ಶಿವರಾಮ ಆಚಾರ್ ಬಂಡೀಮಠ, ಆರತಿ ಗಿಳಿಯಾರ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಮೋಹನ್ ಭಟ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಸಮಾರಂಭದ ಕೊನೆಯಲ್ಲಿ ಅಂಚೆ ಕಚೇರಿ ಅವರಣದಲ್ಲಿ ಗಿಡ ನೆಟ್ಟು ಸಾರ್ವಜನಿಕರಿಗೆ ವಿವಿಧ ತಳಿಯ ಔಷಧೀಯ ಗಿಡ,ಹಣ್ಣಿನ ಗಿಡಗಳನ್ನು ವಿತರಿಸಿ ಹಸಿರು ಬಾರ್ಕೂರಿಗೆ ಚಾಲನೆ ನೀಡಲಾಯಿತು.ರೋ ಬಿ ಸುಧಾಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು.ರೋ ಗಣೇಶ್ ಶೆಟ್ಟಿ ಸ್ವಾಗತಿಸಿ, ರೋ ಅಜಿತ್ ಕುಮಾರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.