ಮಲೆನಾಡು, ಕರಾವಳಿ ಅಡಿಕೆಗೆ ಈಗ ಆಮದು ಭೂತ!
– 3 ತಿಂಗಳಲ್ಲಿ 3009 ಟನ್ ವಿದೇಶಿ ಅಡಿಕೆ ಅಕ್ರಮ ಆಮದು!?
– ಅಕ್ರಮ ಅಡಿಕೆ ಆಮದಿಗೆ ಸಂಸದರ ಮೌನವೇಕೆ?
– ಕರ್ನಾಟಕ ಸೇರಿ ಭಾರತದ ರೈತರಿಗೆ ಆತಂಕ
– ಡಾ.ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರ
NAMMUR EXPRESS NEWS
ಬೆಂಗಳೂರು: ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕದ ರೈತರ ಉಸಿರು, ವಾಣಿಜ್ಯ ಬೆನ್ನೆಲುಬು ಆಗಿರುವ ಅಡಿಕೆ ಇದೀಗ ವಿದೇಶಿ ಅಡಿಕೆ ಆಮದು ಕಾರಣ ಆತಂಕದಲ್ಲಿದೆ.ಕರ್ನಾಟಕ ಸೇರಿ ಭಾರತದ ಪ್ರಮುಖ ಬೆಳೆ ಅಡಿಕೆ. ಭಾರತದಲ್ಲಿ ಪ್ರಸಕ್ತ ಹಣಕಾಸು ವರ್ಷದ ಜೂನ್ ಅಂತ್ಯದವರೆಗೆ ಒಟ್ಟು 84 ವಿದೇಶಿ ಅಡಿಕೆ ಅಕ್ರಮ ಆಮದಿನ ಪ್ರಕರಣಗಳನ್ನು ಪತ್ತೆ ಹಚ್ಚಿ 3,009 ಟನ್ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ವರ್ಷದಿಂದ ವರ್ಷಕ್ಕೆ ವಿದೇಶಿ ಅಕ್ರಮ ಅಡಿಕೆ ಆಮದಿನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ರಾಜ್ಯ ಸಚಿವ ಜಿತಿನ್ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.
ಮೂರು ತಿಂಗಳಲ್ಲಿ 84 ವಿದೇಶಿ ಅಡಿಕೆ ಅಕ್ರಮ ಆಮದಿನ ಪ್ರಕರಣಗಳನ್ನು ಪತ್ತೆ ಆಗಿವೆ ಅಂದರೆ, ಸರಾಸರಿ, ಪ್ರತೀ ಒಂದು ದಿನ ಒಂದು ಅಕ್ರಮ ವಿದೇಶ ಅಡಿಕೆ ಕಳ್ಳಸಾಗಣಿಕೆ ನಡೆಯುತ್ತಿದೆ. ಡ್ರೈ ಫೂಟ್ಸ್ ಹೆಸರಲ್ಲಿ ಇನ್ಯಾವುದೋ ಕಡಿಮೆ ಬೆಲೆಯ ವಸ್ತುವಿನ ಹೆಸರಲ್ಲಿ ಬಂದ ಅಕ್ರಮ ವಿದೇಶಿ ಅಡಿಕೆ ಪ್ರಕರಣಗಳು ಎಷ್ಟಿರಬಹುದು?.
84 ಪ್ರಕರಣಗಳಲ್ಲಿನ ಒಟ್ಟು ಅಡಿಕೆ 3009 ಟನ್ಗಳು!
ಅಂದರೆ, 30,09,000 ಕೆ.ಜಿ ಸರಾಸರಿ ಪ್ರತೀ ಕೆಜಿ ಅಡಿಕೆಗೆ ಈ 400 ಎಂದು ಪರಿಗಣಿಸಿದರೆ, ಈ 120 ಕೋಟಿ ಮೌಲ್ಯದ ಅಕ್ರಮ ವಿದೇಶಿ ಅಡಿಕೆ ಭಾರತಕ್ಕೆ ಸಾಗಾಣಿಕೆ ಆಗಿದೆ. ಇದು ಲೆಕ್ಕ ಸಿಕ್ಕಿದ ಅಕ್ರಮ ಅಡಿಕೆ.
ಯಾವ ವರ್ಷ ಎಷ್ಟು ಅಡಿಕೆ ಬಂದಿದೆ?
2020-21ರಲ್ಲಿ 278 ಪ್ರಕರಣಗಳನ್ನು ಪತ್ತೆ ಹಚ್ಚಿ 3,449 ಟನ್ ವಶಪಡಿಸಿಕೊಂಡಿದ್ದರೆ, 2021-22ರಲ್ಲಿ 260 ಪ್ರಕರಣಗಳಲ್ಲಿ 3,388 ಟನ್ ವಶಪಡಿಸಿಕೊಳ್ಳಲಾಗಿದೆ. 2022-23ರಲ್ಲಿ 454 ಪ್ರಕರಣಗಳಲ್ಲಿ 3,400 ಟನ್ ಅಕ್ರಮ ವಿದೇಶಿ ಅಡಿಕೆ ದೇಶದ ಒಳಗೆ ಬಂದಿದೆ. 2023-24ರಲ್ಲಿ 643 ಪ್ರಕರಣಗಳಲ್ಲಿ 12,881 ಟನ್ ಅಡಿಕೆ ವಶಪಡಿಸಿಕೊಂಡಿತ್ತು ಎಂದು ಕೇಂದ್ರ ಸಚಿವ ಜಿತಿನ್ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಅಡಿಕೆಗೆ, ಈಗ ವಿದೇಶಿ ಅಕ್ರಮ ಆಮದಿನಿಂದಾಗಿ ಅಡಿಕೆ ದರ ಇಳಿ ಮುಖವಾಗಿದೆ. ದಯವಿಟ್ಟು ರಾಜ್ಯದ ಎಲ್ಲ ಸಂಸದರು, ಶಾಸಕರು, ಸಚಿವರು ಈ ಅಕ್ರಮ ವಿದೇಶಿ ಅಡಿಕೆ ಸಾಗಾಣಿಕೆ ಬಗ್ಗೆ ಪರಿಣಾಮಕಾರಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮುಂದಾಗಲಿ ಎಂಬ ಅಗ್ರಹ ವ್ಯಕ್ತವಾಗಿದೆ.