ಕಿಮ್ಮನೆಗೆ ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್
– ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ದಿನಪತ್ರಿಕೆ ಕನ್ನಡಪ್ರಭ ಸಂಸ್ಥೆಯ ಪ್ರಶಸ್ತಿ
-ರಾಜ್ಯ ಕಂಡ ಅಪರೂಪದ ರಾಜಕೀಯ ನಾಯಕ ಕಿಮ್ಮನೆ ರತ್ನಾಕರ್
NAMMUR EXPRESS NEWS
ಬೆಂಗಳೂರು: ಕರ್ನಾಟಕದ ಪ್ರತಿಷ್ಠಿತ ಸುದ್ದಿವಾಹಿನಿ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ದಿನಪತ್ರಿಕೆ ಕನ್ನಡಪ್ರಭ ಸಂಸ್ಥೆಯ ಪ್ರಾಯೋಜಕತ್ವದಲ್ಲಿ 2024-25 ಸಾಲಿನ ಕರುನಾಡಿನ ಸಾಧಕರಿಗೆ “ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ 2024 ಮಾಜಿ ಸಚಿವ, ಮಾಜಿ ಶಾಸಕರು ಆದ ಕಿಮ್ಮನೆ ರತ್ನಾಕರ್ ಅವರಿಗೆ ಲಭಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅವರಿಗೆ ಅಹ್ವಾನವನ್ನು ಸಂಸ್ಥೆ ಕೋರಿದೆ. ನಾಡಿನ ರಾಜಕೀಯ ಕ್ಷೇತ್ರದಲ್ಲಿನ ನಿಮ್ಮ ಸಾಧನೆಯನ್ನು ಗುರುತಿಸಿ “ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ 2024” ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು. ಆಗಸ್ಟ್ 09-2024 ರಂದು ಮಲೇಷ್ಯಾದಲ್ಲಿ ನಡೆಯಲಿದೆ. ತಾವು ದಯವಿಟ್ಟು ಈ ಪುರಸ್ಕಾರವನ್ನು ಸ್ವೀಕರಿಸಲು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಹಾಗೂ ಆಗಸ್ಟ್ 07 ರಿಂದ ಆಗಸ್ಟ್ 11ವರೆಗೆ ನಮ್ಮ ಅತಿಥಿ ಸತ್ಕಾರವನ್ನು ಸ್ವೀಕರಿಸಬೇಕೆಂದು ಸಂಸ್ಥೆ ಪತ್ರದಲ್ಲಿ ತಿಳಿಸಿದೆ. ನಿಮ್ಮ ಸೇವೆ ಸದಾಕಾಲ ನಮ್ಮ ರಾಜ್ಯಕ್ಕೆ ದೂರಕಲಿ, ನಿಮ್ಮ ಕೀರ್ತಿಗೌರವಗಳು ಹೀಗೇ ಎತ್ತರೆತ್ತರಕ್ಕೆ ಬೆಳೆಯುತ್ತಿರಲಿ ಎಂದು ಸಂಸ್ಥೆ ತನ್ನ ಅಹ್ವಾನ ಪತ್ರಿಕೆಯಲ್ಲಿ ತಿಳಿಸಿದೆ.
ರಾಜ್ಯ ಕಂಡ ಪ್ರಾಮಾಣಿಕ ರಾಜಕಾರಣಿ!
ಕಿಮ್ಮನೆ ರತ್ನಾಕರ್ ರಾಜ್ಯ ಕಂಡ ಅಪರೂಪದ ರಾಜಕೀಯ ನಾಯಕರು. ತೀರ್ಥಹಳ್ಳಿ ಕ್ಷೇತ್ರದ ಶಾಸಕರಾಗಿ, ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದವರು. ತಮ್ಮ ಸೇವೆ, ಪ್ರಾಮಾಣಿಕ ವ್ಯಕ್ತಿತ್ವ ಇಂದಿನ ರಾಜಕಾರಣಿಗಳಿಗೆ ಮಾದರಿ. ಈಗ ಈ ಹಿಂದೆ ಅವರಿಗೆ ವಿವಿಧ ಮಾಧ್ಯಮ ಸಂಸ್ಥೆಗಳ ಪ್ರಶಸ್ತಿ ಲಭಿಸಿದ್ದವು. ಇದೀಗ ನಾಡಿನ ಹೆಮ್ಮೆಯ ಮಾಧ್ಯಮ ಸಂಸ್ಥೆ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ದಿನಪತ್ರಿಕೆ ಕನ್ನಡಪ್ರಭ ತನ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಪತ್ನಿ ಅನಾರೋಗ್ಯ: ಬೆಂಗಳೂರಲ್ಲಿ ಕಿಮ್ಮನೆ
ಪತ್ನಿ ಅನಾರೋಗ್ಯ ಕಾರಣ ಬೆಂಗಳೂರಲ್ಲಿರುವ ಕಿಮ್ಮನೆ ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಮ್ಮೂರ್ ಎಕ್ಸ್ ಪ್ರೆಸ್ ಪ್ರತಿನಿಧಿ ಸಂಪರ್ಕ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.