ಆದರ್ಶ ದಂಪತಿಗಳಿಗಾಗಿ ” ಜನುಮದ ಜೋಡಿ” ರಂಗು!
– ಹೊಸದುರ್ಗದಲ್ಲಿ ಒಂದೊಳ್ಳೆ ಕಾರ್ಯಕ್ರಮ: ದಂಪತಿಗಳ ಖುಷ್
– ಪ್ರೇರಣೆ ಮಾತನಾಡಿದ ಯುವ ಉದ್ಯಮಿ ಸದ್ಗುರು ಪ್ರದೀಪ್
– ಕಲರ್ ಫುಲ್ ಕಾರ್ಯಕ್ರಮದಲ್ಲಿ ನಟ ನಟಿಯರ ಮೆರುಗು
NAMMUR EXPRESS NEWS
ಹೊಸದುರ್ಗ: ದಿನೇ ದಿನೇ ನಾವು ನಮ್ಮ ಬದುಕಿನಲ್ಲಿ ಒತ್ತಡಕ್ಕೆ ಸಿಲುಕುತ್ತಿದ್ದೇವೆ. ಬೆಳಿಗ್ಗೆಯಿಂದ ರಾತ್ರಿವರೆಗೂ ನಮ್ಮ ಒತ್ತಡದ ಜೀವನದ ನಡುವೆ ಹೆಂಡತಿ ಮಕ್ಕಳು ನಮ್ಮ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ ನಮ್ಮ ಬದುಕಿನ ಈ ಸುಂದರ ಜೀವನದಲ್ಲಿ ನಮ್ಮ ಕುಟುಂಬದೊಂದಿಗೆ ಬೆರೆಯದಿದ್ದರೆ ನಮ್ಮ ಮಕ್ಕಳು ಬಹುಬೇಗ ನಮ್ಮ ಪ್ರೀತಿ ವಾತ್ಸಲ್ಯ ಮರೆತು ಬಿಡುತ್ತಾರೆ ಎಂದು ಯುವ ಉದ್ಯಮಿ ಸದ್ಗುರು ಪ್ರದೀಪ್ ಆತಂಕ ವ್ಯಕ್ತಪಡಿಸಿದ್ದಾರೆ.
ಹೊಸದುರ್ಗ ನಗರದ ಗಣೇಶ ಸದನದಲ್ಲಿ ನಡೆದ ಆದರ್ಶ ದಂಪತಿಗಳಿಗಾಗಿ ನಡೆದ ಜನುಮದ ಜೋಡಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಿಗ್ಗೆಯಿಂದ ರಾತ್ರಿವರೆಗೂ ಮನೆಯ ಹೆಂಡತಿ ಮಕ್ಕಳ ಪ್ರೀತಿಯಿಂದ ದೂರವಾಗಿ ನಮ್ಮ ವ್ಯವಹಾರಗಳ ಜಂಜಾಟದಲ್ಲಿರುತ್ತೇವೆ. ಇದರಿಂದ ಮುಕ್ತವಾಗಿ ಹೊರ ಬಂದು ಒಂದು ದಿನವಾದರೂ ಸತಿಪತಿಗಳ ಆದರ್ಶದ ಬದುಕಿನ ಅನುಭವವನ್ನು ಹಂಚಿಕೊಳ್ಳಲು ಜನುಮದ ಜೋಡಿ ಕಾರ್ಯಕ್ರಮ ವೇದಿಕೆಯಾಗಿದೆ. ಜೀವನದಲ್ಲಿ ಆದರ್ಶ ದಂಪತಿಗಳಾಗಿ ಬದುಕಲು ಪರಸ್ಪರ ಪ್ರೀತಿ ಸೌಮ್ಯಮ ಹೊಂದಾಣಿಕೆ ಬಹಳ ಮುಖ್ಯವಾಗುತ್ತದೆ ಎಂದರು.
ಇಬ್ಬರು ದಂಪತಿಗಳಿಗೆ ಬಹುಮಾನ
ಜನುಮದ ಜೋಡಿ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಮಮತಾ ಡಾ ರವಿಶಂಕರ್ ಶಾಸ್ತ್ರಿ,ದ್ವಿತೀಯ ಬಹುಮಾನ ರಾಜೇಶ್ವರಿ ಪ್ರಹಾಲ್ಲಾದ್ ಈ ಎರಡು ದಂಪತಿಗಳಿಗೆ ಆಕರ್ಷಕ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಡಾಕ್ಟರ್ ಸ್ವಾತಿ ಪ್ರದೀಪ್, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಲನಚಿತ್ರ ನಟರಾದ ಜಗಪ್ಪ,ಸುಶ್ಮಿತಾ ಸಾಗರ್ತು ರುವೇಕೆರೆ, ವಿದ್ಯಾ ಖ್ಯಾತ ನಿರೂಪಕ ಜಿವಿ ಟಿವಿ, ರಾಘು,, ವೀರಶೈವ ಮಹಿಳಾ ಸಂಘದ ಅಧ್ಯಕ್ಷರಾದ ಅನಿತಾ ರಾಜೇಶ್, ಮುಖ್ಯ ತೀರ್ಪುಗಾರರಾದ ವಿವೇಕ್, ನಂದಿನಿ, ರಕ್ಷಿತಾ, ಸಾಯಿ ಕಿಡ್ಸ್ ನವೀನ್, ಅಂಜಲಿ ಎಂ ಶಶಿಧರ್ ಗುಜ್ಜರ್, ಹಾಗೂ ಮುಂತಾದವರಿದ್ದರು.