5 ವರ್ಷ ಕಳೆಯಿತು.ಸಿದ್ದಾರ್ಥ ಅವರಿಗೆ ನಮ್ಮೆಲ್ಲರ ನಮನ!
– ಜುಲೈ 29ರಂದು ವಿಧಿವಶರಾಗಿದ್ದ ಕಾಫಿ ನಾಡ ಖ್ಯಾತ ಉದ್ಯಮಿ
– ಸಾವಿರಾರು ಜನರಿಗೆ ಬದುಕು ಕೊಟ್ಟ ಪುಣ್ಯಾತ್ಮನಿಗೆ ನುಡಿ ನಮನ
NAMMUR EXPRESS
ಕಾಫಿ ಡೇ ಸಂಸ್ಥೆಯೊಂದನ್ನು ಕಟ್ಟಿ ಸೊನ್ನೆಯಿಂದ ಹೆಮ್ಮರವಾಗಿ ಬೆಳೆದು, ಕಾಫಿನಾಡಿನ ಖ್ಯಾತಿಯನ್ನು ಕಾಫಿಯ ಸವಿಯೊಂದಿಗೆ ಜಗದಗಲ ಪಸರಿಸಿದ ಕಾಫಿನಾಡಿನ ಹೆಮ್ಮೆಯ ಮಗ ವಿ.ಜಿ. ಸಿದ್ದಾರ್ಥ್ ಅವರು ನಮ್ಮನ್ನಗಲಿ 5 ವರ್ಷ ಕಳೆದಿದೆ.ಸಿದ್ದಾರ್ಥ ಅವರ ಬದುಕು, ಸಾಧನೆ, ವ್ಯಕ್ತಿತ್ವದ ಮೂಲಕ ಸದಾ ನಮ್ಮೊಡನೆ ಜೀವಂತವಾಗಿದೆ. ಸಾವಿರಾರು ಜನರಿಗೆ ಬದುಕು ಕೊಟ್ಟ ಪುಣ್ಯಾತ್ಮ ಮರೆಯಾಗಿದ್ದಾರೆ. ಆದ್ರೆ ಅವರ ನೆನಪುಗಳು ಮಾಸಿಲ್ಲ. ಹೌದು. ಮಲೆನಾಡಿನ ಪುಟ್ಟ ಹಳ್ಳಿಯಿಂದ ದೇಶ ವಿದೇಶದಲ್ಲೂ ಕಾಫಿ ಬೇಡಿಕೆ ಹೆಚ್ಚಿಸಿದ, ಮಲೆನಾಡಿನ ನೂರಾರು ಯುವಕರಿಗೆ ಗೂಡು ಕಟ್ಟಿ ಬದುಕು ನೀಡಿದ ಸಿದ್ದಾರ್ಥ ಅವರು ಜುಲೈ 29 2019ರಲ್ಲಿ ಮಂಗಳೂರು ಬಳಿ ನೇತ್ರಾವತಿ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅವರು ನೆನಪು ಮಾತ್ರ. ಆದರೆ ಅವರ ಸಾಧನೆ ಎಲ್ಲರಿಗೂ ಪ್ರೇರಣೆ. ಆದರೆ ಕೊನೆಯ ನಿರ್ಧಾರ ಮಾತ್ರ ಯಾರೂ ಊಹಿಸಲಾಗದು.
1959ರಲ್ಲಿ ಜನಿಸಿದ್ದ ಅವರು ಕೆಫೆ ಕಾಫಿ ಡೇ, ಮೈಂಡ್ ಟ್ರೀ, ಲಿಕ್ವಿಡ್ ಕ್ರೈಸ್ಟಲ್, ವೇ 2ವೆಲ್ತ್ ಸೇರಿ ಅನೇಕ ಕಂಪನಿ ಕಟ್ಟಿ ದೇಶದ ಸ್ಟಾರ್ಟ್ ಅಪ್ ಜಗತ್ತಿಗೆ ಹೊಸ ದಾಖಲೆ ಬರೆದವರು. ಆದರೆ ವಿಧಿ ಅವರನ್ನು ಬಿಡಲಿಲ್ಲ.ಇದೀಗ ಅವರ ಸೇವೆಗೆ ನುಡಿ ನಮನ ಅಷ್ಟೇ ಸಾಧ್ಯ.