ಎನ್.ಆರ್.ಪುರ ತಾಲೂಕಲ್ಲಿ ಹಲವೆಡೆ ಅವಾಂತರ: ದುರಂತ!
– ಎನ್ ಆರ್ ಪುರ – ಶಿವಮೊಗ್ಗ ಮುಖ್ಯರಸ್ತೆಯಲ್ಲಿ ಹೂತು ಹೋದ ಬಸ್
– ಕಟ್ಟಿನಮನೆ ಗ್ರಾಮದ ವ್ಯಾಪ್ತಿಯಲ್ಲಿ ಭೂ ಕುಸಿತ
– ಮಳೆಗೆ ಮರ ಕೊಳೆಯುತ್ತಿದೆ!: ಎನ್.ಆರ್.ಪುರ ಆಸ್ಪತ್ರೆಯ ಅವ್ಯವಸ್ಥೆ
NAMMUR EXPRESS NEWS
ಎನ್.ಆರ್.ಪುರ: ಎನ್.ಆರ್.ಪುರತಾಲೂಕಿನ ಕುದುರೆಗುಂಡಿ- ಕಟ್ಟಿನಮನೆ ಮಾರ್ಗದ ಮೂಲಕ ಚಿಕ್ಕಗ್ರಹಾರಕ್ಕೆ ಹೋಗುವ ಪ್ರಮುಖ ರಸ್ತೆಯ ಪಕ್ಕ ಕಟ್ಟಿನಮನೆ ಗ್ರಾಮದ ವ್ಯಾಪ್ತಿಯಲ್ಲಿ ಭೂ ಕುಸಿತ ಉಂಟಾಗಿದ್ದು ಇದರಿಂದ ರಸ್ತೆ ಕುಸಿಯುವ ಭೀತಿ ಎದುರಾಗಿದೆ.
ಮುತ್ತಿನಕೊಪ್ಪ ಗ್ರಾ ಪಂ ವ್ಯಾಪ್ತಿಯ ಬೈರಾಪುರ ಗ್ರಾಮದ ಜಮೀನಿಗೆ ನೀರು ನುಗ್ಗಿದೆ,ಇದೇ ಗ್ರಾಮದ ಮೋರಿ ಹಾಗೂ ರಸ್ತೆಗೆ ಹಾನಿಗಿದೆ.
ಪಟ್ಟಣದ ವಾರ್ಡ್ ನಂ.04 ಮತ್ತು ವಾರ್ಡ್ ನಂ.05ರಲ್ಲಿ ಒಂದೊಂದು ಒಟ್ಟು ಎರಡು ಮನೆಯ ಗೋಡೆ ಕುಸಿದಿದ್ದು, ವಾರ್ಡ್ ನಂ.03 ರ ಪೌರ ಕಾರ್ಮಿಕರ ಕಾಲೋನಿಯಲ್ಲಿ ಕುರಿಗಳನ್ನು ಕಟ್ಟಿದ್ದ ಕಟ್ಟಡ ಕುಸಿದು ಒಂದು ಕುರಿ ಮೃತಪಟ್ಟಿದೆ.
ಗುರುವಾರ ಬೆಳಿಗ್ಗೆಯಿಂದ ಮಳೆ ಪ್ರಮಾಣ ಕಡಿಮೆಯಿತ್ತಾದರೂ ಹಾನಿಯ ಪ್ರಮಾಣ ಎಲ್ಲೆಡೆ ವರದಿಯಾಗಿದೆ ಸಂಜೆ ವೇಳೆಗೆ ಮತ್ತೆ ಮಳೆಯ ಪ್ರಮಾಣ ಹೆಚ್ಚಾಗಿತ್ತು.
ಎನ್ ಆರ್ ಪುರ – ಶಿವಮೊಗ್ಗ ಮುಖ್ಯರಸ್ತೆ ಕುಸಿತ
ಎನ್ ಆರ್ ಪುರ – ಶಿವಮೊಗ್ಗ ಮುಖ್ಯರಸ್ತೆ ಹಾರೆಕೊಪ್ಪ ಎಂಬಲ್ಲಿ ಹಿಂದಿನಿಂದಲೂ ರಸ್ತೆ ಮಧ್ಯೆ ಜರಿ ನೀರು ಹರಿಯುತ್ತಾ ರಸ್ತೆ ಉಬ್ಬುತ್ತಿತ್ತು ಅದಕ್ಕೆ ತಾತ್ಕಾಲಿಕವಾಗಿ ತೇಪೆ ಹಾಕಿ ನಂತರ ರಸ್ತೆಗೆ ಟಾರ್ ಎಳೆಯಲಾಗಿತ್ತು. ಹಲವು ಗುರುವಾರದ ದಿನ ಸುರಿದ ವಿಪರೀತ ಮಳೆಗೆ ಟಾರ್ ಮತ್ತೆ ಉಬ್ಬಿಕೊಂಡಿದೆ.
ಶಿವಮೊಗ್ಗದಿಂದ ಎನ್ ಆರ್ ಪುರ ಕಡೆಗೆ ಬರುವ ಖಾಸಗಿ ಬಸ್ವೊಂದು ಇದರ ಮೇಲೆ ಹತ್ತಿದ್ದರಿಂದ ಬಸ್ನ ಮುಂದಿಯ ಚಕ್ರ ಅಲ್ಲೇ ಹೂತುಕೊಂಡಿತು. ಬಸ್ನ ವೇಗ ಕಡಿಮೆಯಿದ್ದುದ್ದರಿಂದ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ನಂತರ ಸ್ಥಳೀಯರ ಸಹಾಯದಿಂದ ಹೂತಿದ್ದ ಬಸ್ನ ಚಕ್ರವನ್ನು ಮೇಲೆತ್ತುವ ಕಾರ್ಯ ಮಾಡಲಾಯಿತು. ಸ್ಥಳೀಯ ಗ್ರಾ ಪಂ ಸದಸ್ಯರು ಗ್ರಾಮಸ್ಥರ ಸಹಕಾರದೊಂದಿಗೆ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ಮಾಡಲಾಗಿದೆ.
ಮಳೆಗೆ ಮರ ಕೊಳೆಯುತ್ತಿದೆ!
ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡುತ್ತಿರುವ ಇಂತಹ ಸಮಯದಲ್ಲಿ ನರಸಿಂಹರಾಜಪುರ ಸಾರ್ವಜನಿಕ ಆಸ್ಪತ್ರೆಯ ಆವರಣದ ಒಳಗೆ ಮರ ಕಡಿದು ಹಾಕಿ ಹತ್ತು ದಿನದಗಳೇ ಕಳೆದಿದೆ. ಮಳೆಗೆ ಎಲೆಗಳು ಕೊಳೆತು ವಾಸನೆ ಬರಲು ಪ್ರಾರಂಭವಾಗಿದ್ದು ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕಿದೆ.