ರಾಜ್ಯದಲ್ಲಿ ಹೆಚ್ಚಿದ ಕಲಬೆರಕೆ ಮಾಫಿಯಾ!
– ಎಣ್ಣೆ, ಬೆಲ್ಲ, ತುಪ್ಪ, ಜೇನು, ಟೀ ಪುಡಿ, ಖಾದ್ಯದಲ್ಲೂ ವಿಷ?
– ತಿನ್ನೋದೆಲ್ಲವೂ ವಿಷ ಇದ್ದಂತೆ.. ಜೋಪಾನ ಜೋಪಾನ
– ಅತಿಯಾದ ಕೆಮಿಕಲ್, ಎಣ್ಣೆ, ಮಸಾಲಾ ಒಳ್ಳೆಯದಲ್ಲ
– ಕಣ್ಣು ಮುಚ್ಚಿ ಕುಳಿತ ಸ್ಥಳೀಯ ಆಡಳಿತ, ಅಧಿಕಾರಿಗಳು
NAMMUR EXPRESS NEWS
ನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಬಳಸುವ ಬಹುತೇಕ ವಸ್ತುಗಳು ಇತ್ತೀಚಿಗೆ ಕಲ ಬೆರಕೆ ಎಂಬುದು ಅನೇಕ ಪ್ರಕರಣಗಳಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಜನ ಜಾಗೃತಿ ವಹಿಸಬೇಕು. ಅಡುಗೆ ಎಣ್ಣೆಗೇ ವಿಷ ಬೆರೆಸಲಾಗುತ್ತಿದೆ. ರಕ್ಕಸ ರೂಪದಲ್ಲಿ ಬೆಳೆದಿರುವ ಕಲಬೆರಕೆ ಜಾಲವು ಅಧಿಕ ಲಾಭದಾಸೆಗೆ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ. ಅತಿಯಾದ ಎಣ್ಣೆ ಹಾಗೂ ಕೆಮಿಕಲ್ ಹಾಗೂ ಅತಿಯಾಗಿ ಮಸಾಲೆ ಬೆಳೆಸುವ ಪದಾರ್ಥಗಳು ದೇಹಕ್ಕೆ ಒಳ್ಳೆಯದಲ್ಲ. ಇದರಿಂದ ಕಾಯಿಲೆಗಳು ಉಲ್ಬಣಿಸುತ್ತಿವೆ.
ಎಣ್ಣೆ, ಬೆಲ್ಲ, ತುಪ್ಪ, ಜೇನು, ಟೀ ಪುಡಿ, ಖಾದ್ಯದಲ್ಲೂ ದುಡ್ಡಿನ ಆಸೆಗೆ ಇತರೆ ಪದಾರ್ಥ ಬೆರಕೆ ಮಾಡಲಾಗುತ್ತಿದೆ. ಆದರೆ ಆಡಳಿತ ಹಾಗೂ ಅಧಿಕಾರಿಗಳು ಡೀಲ್ ಮಾಡಿಕೊಂಡು ಕಣ್ಣು ಮುಚ್ಚಿ ಕುಳಿತಿದ್ದಾರೆ.ದೊಡ್ಡ ಮಿಲ್, ಕಾರ್ಖಾನೆಗಳಲ್ಲಿ, ಸಣ್ಣಪುಟ್ಟ ಘಟಕಗಳಲ್ಲಿ ಪ್ಯಾಕ್ ಆಗಿ ಮಾರುಕಟ್ಟೆಗೆ ಬರುವ ಹಾಗೂ ಮಾರುಕಟ್ಟೆಯಲ್ಲಿ ಚಿಲ್ಲರೆಯಾಗಿ ಸಿಗುವ ಅಡುಗೆ ಎಣ್ಣೆಯು ಶೇ 50ರಿಂದ 80ರಷ್ಟು ಕಲಬೆರಕೆಯಿಂದ ಕೂಡಿರುವ ಬಗ್ಗೆ ವಿಜ್ಞಾನಿಗಳು, ಆಹಾರ ತಜ್ಞರು ಹಾಗೂ ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.ವಿವಿಧ ರಾಜ್ಯಗಳಲ್ಲಿ ನಡೆಸಿರುವ ಪರೀಕ್ಷೆಯೂ ಅದನ್ನು ದೃಢಪಡಿಸಿದೆ. ಧಾರಾಳವಾಗಿ ಹಾಗೂ ಕಡಿಮೆ ಬೆಲೆಗೆ ಸಿಗುವ ಪೆಟ್ರೋಲಿಯಂ ಉಪ ಉತ್ಪನ್ನ ‘ಮಿನರಲ್ ಆಯಿಲ್’ ಅನ್ನು ಅಡುಗೆ ಎಣ್ಣೆಗೆ ಬೆರೆಸುವ ಜಾಲ ಸಕ್ರಿಯವಾಗಿದ್ದು, ಹಲವು ರಾಜ್ಯಗಳಲ್ಲಿ ಹರಡಿಕೊಂಡಿದೆ.
ದೊಡ್ಡ ದೊಡ್ಡ ಕಂಪನಿಗಳು, ವರ್ತಕರು, ರಾಜಕೀಯ ಮುಖಂಡರು, ಅಧಿಕಾರಿಗಳು ಈ ಜಾಲದೊಂದಿಗೆ ಕೈಜೋಡಿಸಿದ್ದಾರೆ. ಹೃದಯ ಹಾಗೂ ಇತರ ಅಂಗಾಂಗಳನ್ನು
ಹಾನಿಗೊಳಿಸುತ್ತಿರುವ, ರಾಸಾಯನಿಕಗಳಿಂದ ಶುದ್ದೀಕರಿಸಿದ (ರಿಫೈನ್ಸ್) ಅಡುಗೆ ಎಣ್ಣೆಯೇ ಆರೋಗ್ಯಕ್ಕೆ ಉತ್ತಮ ಎಂದು ಬಿಂಬಿಸಲಾಗುತ್ತಿದೆ. ಬಾಟಲಿ, ಪೊಟ್ಟಣಗಳ ಮೇಲೆಶೇ 100ರಷ್ಟು ಪ್ಯೂರ್ ಎಡಿಬಲ್ ಆಯಿಲ್ ಎಂದೇ ಲೇಬಲ್ ಹಾಕಿಕೊಂಡು ಗ್ರಾಹಕರ ದಾರಿ ತಪ್ಪಿಸಲಾಗುತ್ತಿದೆ. ಹೆಸರಾಂತ ಬ್ರಾಂಡ್ಗಳ ಒಂದು ಲೀಟರ್ ಅಡುಗೆ ಎಣ್ಣೆ ಪೊಟ್ಟಣಕ್ಕೆ ₹150ರವರೆಗೆ ಇದ್ದರೆ, ಇನ್ನು ಕೆಲವುಗಳ ದರ ಲೀಟರ್ಗೆ ₹ 80 ಇದೆ. ಸ್ಪರ್ಧೆ ಜೋರಾದಂತೆ ಕಲಬೆರಕೆಯೂ ಹೆಚ್ಚಾಗುತ್ತಿದೆ.
ಕಲಬೆರಕೆ ಎಣ್ಣೆಯು ಸ್ಥಳೀಯವಾಗಿ ಪೂರೈಕೆ ಆಗುವುದಲ್ಲದೇ, ತಮಿಳು ನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ರಾಜ್ಯಕ್ಕೆ ಸರಬರಾಜಾಗುತ್ತಿದೆ. ತೆಂಗು, ಶೇಂಗಾ, ಸೂರ್ಯಕಾಂತಿ ಬೆಳೆಯುವ ಪ್ರದೇಶಗಳಲ್ಲಿ ಮಿಶ್ರಣ ದಂಧೆ ಹೆಚ್ಚಿದೆ. ಡ್ರಮ್ಗಳಲ್ಲಿ ಎಣ್ಣೆ ತಂದು ಅದನ್ನು ಸ್ಥಳೀಯವಾಗಿ ಕ್ಯಾನ್ ಹಾಗೂ ಟಿನ್ಗೆ ತುಂಬಿಸುವಾಗಲೂ ಮಿಶ್ರಣ ದಂಧೆ ನಡೆಯುತ್ತಿದೆ.
ಸ್ಥಳೀಯ ಪ್ರಾಡಕ್ಟ್ ಬಳಸಿ… ಬೆಂಬಲಿಸಿ
ಮನೆಯಲ್ಲೇ ತಯಾರಿಸಿದ ಸ್ಥಳೀಯ ಕೈ ರುಚಿಯಾದ ಬ್ರಾಂಡ್ ಬಳಸಿ. ಅವು ಅರೋಗ್ಯಕ್ಕೂ ಹಾನಿ ಆಗಲ್ಲ ಎಂಬ ಚರ್ಚೆ ಶುರುವಾಗಿದೆ. ಈಗಾಗಲೇ ಎಲ್ಲಾ ಆಹಾರ ಪದಾರ್ಥ ಮಾಫಿಯಾ ಕೂಡ ಜೋರಾಗಿದೆ. ಬಳಸುವ ಮುನ್ನ ಒಮ್ಮೆ ಯೋಚಿಸಿ ಅಷ್ಟೇ.