ನಾಟಿ ಸೊಬಗು: ಹಸಿರಾದ ಗದ್ದೆಗಳು!
– ಮಲೆನಾಡು, ಕರಾವಳಿಯಲ್ಲಿ ಭತ್ತದ ನಾಟಿ ವೈಭವ
– ಮಳೆ ನಡುವೆ ಹಸಿರು ಹೊದ್ದಿರುವ ಗದ್ದೆಗಳು
– ನಾಟಿ ಮಾಡುವ ಕೆಲಸ ಎಷ್ಟು ಖುಷಿ ಗೊತ್ತಾ?
NAMMUR EXPRESS NEWS
ಮಳೆ ಧರೆಗೆ ಉರುಳುತ್ತಿದಂತೆ ಹಸಿರ ಹೊದಿಕೆಯ ಪ್ರಾಕೃತಿಕ ಸೌಂದರ್ಯದಲ್ಲಿ ಮಲೆನಾಡು ಚಿಗುರಿ ಮೈದುಂಬಿಕೊಳ್ಳತ್ತೆ. ಮಲೆನಾಡ ಪ್ರಕೃತಿ ಸಿರಿಯು ಒತ್ತಡದ ಬದುಕಿನಲ್ಲಿ ಸಿಲುಕಿದ ಮನಸ್ಸಿಗೆ ಮುದ ನೀಡಿ,ಹೊಸ ಉತ್ಸಾಹ ನೀಡುತ್ತೆ. ಇದೀಗ ಮಳೆ ನಡುವೆ ಎಲ್ಲಾ ಕಡೆ ನಾಟಿ ಕೆಲಸ ನಡೆಯುತ್ತಿದೆ.
ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕ ಭತ್ತ ಬೆಳೆಯುವ ಭಾಗಗಳು.
ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು, ಮಲೆನಾಡು ಹಾಗೂ ಬಯಲು ಸೀಮೆಯ ಭಾಗದಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿದೆ.
ಕರಾವಳಿ,ಮಲೆನಾಡಿನ ನಿಸರ್ಗದ ರಮ್ಯತೆಯ ಮಧುರವಾದ ಮನೋಲ್ಲಾಸ ನೀಡುವುದು ಮಲೆನಾಡಿನ ನಾಟಿ ಮಾಡುವ ಕೃಷಿ ಪದ್ಧತಿ.
ಆಧುನಿಕತೆ ಎಷ್ಟೇ ಮುಂದುವರೆದಿದ್ದರೂ ಕೂಡ, ಅಂದಿನ ಸಂಪ್ರದಾಯದ ಚೌಕಟ್ಟುಗಳ ಬೇರು ಇನ್ನೂ ಜೀವಂತವಾಗಿದೆ .
ಮೊದಲು ಪುರುಷ ಹಾಗೂ ಮಹಿಳೆಯರು ಸೇರಿ ನಾಟಿ ಮಾಡುವ ಪದ್ಧತಿ ಇತ್ತು. ಪ್ರಸ್ತುತ ಆಧುನಿಕಯುಗದಲ್ಲಿ ಯಂತ್ರಗಳು ಬಂದರೂ ಕೂಡ ರೈತಾಪಿ ವರ್ಗದ ಮಹಿಳೆಯರು ಗದ್ದೆಯಲ್ಲಿ ಕೈಯಿಂದ ಸಸಿ ನೆಟ್ಟು ನಾಟಿ ಮಾಡುತ್ತಾರೆ
ನಾಟಿ ಹಾಡು, ಜನಪದ ಹಾಡು, ಸೋಬಾನೆ ಸೊಗಡು ಸೋಬಾನೆ ಪದ ಹಾಡುತ್ತಾ ಭತ್ತ ನಾಟಿ ಮಾಡುತ್ತಾರೆ. ಮನಸ್ಸಿನ ಉಲ್ಲಾಸಕ್ಕಾಗಿ ಈ ರೀತಿ ಜನಪದ ಹಾಡುಗಳನ್ನು ಹಾಡುವ ಪದ್ಧತಿ ಹಿಂದಿನ ದಿನಗಳಲ್ಲಿ ಮಹಿಳೆಯರು ರೂಡಿಸಿಕೊಂಡು ಬಂದಿದ್ದರು.
ಮಳೆಯನ್ನ ಕೂಡ ಲೆಕ್ಕಿಸದೆ ಕೆಲಸಗಾರರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ನಾಟಿ ಮಾಡುವ ವೇಳೆ ಆಗುವ ಅನುಭವ ಯಾರಿಂದಲೂ ಪಡೆಯಲು ಸಾಧ್ಯವಾಗದೇ ಆ ಸುಂದರ ಕ್ಷಣವನ್ನು ಅನುಭವಿಸುವುದೇ ಚೆಂದ ಎನ್ನುತ್ತಾರೆ ನಮ್ಮ ಕರಾವಳಿ ಹಾಗೂ ಮಲೆನಾಡಿಗರು.
ಈ ವೀಡಿಯೋ ನೋಡಿ ನಿಮಗೂ ಕೂಡಾ ನಮ್ಮ ಮಲೆನಾಡ ಶೈಲಿಯ ನಾಟಿ ಮಾಡ್ಬೇಕು ಎಂದು ಅನ್ಸಿದ್ರೆ. ಒಮ್ಮೆ ನಮ್ಮ ನಾಟಿ ಗದ್ದೆಗೆ ಭೇಟಿ ನೀಡಿ ಆಹ್ಲಾದಕರ ಅನುಭವ ಪಡೆಯಿರಿ.