ವಿಶ್ವ ಕುಂದಾಪುರ ದಿನ ಆಚರಿಸಿದ ಬಾರ್ಕೂರು ರೋಟರಿ ಕ್ಲಬ್!
– ಆಸಾಡಿಯಂಗೆ ಒಂದು ದಿನ ಕಾರ್ಯಕ್ರಮದಲ್ಲಿ ಗಮನ ಸೆಳೆದ ವೇದಿಕೆ
– ಮನು ಹಂದಾಡಿ ಸೇರಿ ಅನೇಕ ಗಣ್ಯರ ಸಮಾಗಮ
NAMMUR EXPRESS NEWS
ಬ್ರಹ್ಮಾವರ: ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯನ್ನು ಬಾರ್ಕೂರು ರೋಟರಿ ಕ್ಲಬ್ ಇವರ ಆಶ್ರಯದಲ್ಲಿ ಬಾರ್ಕೂರು ರೋಟರಿ ಭವನದಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಆಸಾಡಿಯಂಗೆ ಒಂದು ದಿನ ಕಾರ್ಯಕ್ರಮವನ್ನು ಬಹಳ ವಿಭಿನ್ನವಾಗಿ ಆಚರಿಸಲಾಗಿದ್ದು, ಸಿರಿ ಓಲೆ ತಳಿರು ತೋರಣಗಳಿಂದ ಕಲಾತ್ಮಕವಾಗಿ ರಚಿಸಲ್ಪಟ್ಟ ಸುಂದರ ವೇದಿಕೆಯಲ್ಲಿ ದೀಪ ಬೆಳಗಿಸಿ ತೆಂಗಿನ ಹೂ ಗೊನೆಯನ್ನು ಅರಳಿಸುವ ಮೂಲಕ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.
ವೇದಿಕೆಯ ಮುಂಭಾಗದಲ್ಲಿ ಬಾರ್ಕೂರಿನ ಪ್ರಸಿದ್ಧ ರಂಗವಲ್ಲಿ ಕಲಾವಿದೆ ವಿಶಾಲಮಹೇಶ್ ಪೂಜಾರಿ ಅವರು ರಂಗವಲ್ಲಿ ರಚಿಸಿದ ಕುಂದಾಪ್ರ ಕನ್ನಡದ ಲೋಗೋ ಹಾಗೂ ಕೂಡ್ಲಿ ಶ್ರೀ ಸುದರ್ಶನ ಉಡುಪರ ಸಂಗ್ರಹದಲ್ಲಿರುವ ಬಹಳ ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಗೃಹಬಳಕೆಯ ಹಾಗೂ ಕಲಾತ್ಮಕ ವಸ್ತುಗಳನ್ನು ಬಹಳ ಸುಂದರವಾಗಿ ಅಚ್ಚುಕಟ್ಟಾಗಿ ಜೋಡಿಸಿದ್ದು ನೆರೆದವರ ಮನಸೆಳೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆರ್ಗಮಿಸಿದ ಆರ್. ಎ ಸಾಮಗ ,ಮುಖ್ಯ ಅತಿಥಿಗಳಾದ ಕುಂದಗನ್ನಡದ ರಾಯಭಾರಿ ಶ್ರೀ ಮನು ಹಂದಾಡಿ,ಶಾಂತರಾಮ ಶೆಟ್ಟಿ, (ಅಧ್ಯಕ್ಷರು ಬಾರ್ಕೂರು ಗ್ರಾಮ ಪಂಚಾಯತ್ ಪ್ರಕಾಶ್ ಶೆಟ್ಟಿ ( ಅಧ್ಯಕ್ಷರು ಯಡ್ತಾಡಿ ಗ್ರಾಮ ಪಂಚಾಯತ್ ) ಅಲ್ವಿನ್ ಅಂದ್ರಾದೆ ( ಮಾಜಿ ಅಧ್ಯಕ್ಷರು ರೋಟರಿ ಬ್ರಹ್ಮಾವರ ) ರಾಜಾರಾಮ್ ಶೆಟ್ಟಿ( ಮಾಲಕರು ಆಶ್ರಯ ಹೋಟೆಲ್ ) ಸತೀಶ್ ಪೂಜಾರಿ ಬೆಣ್ಣೆಕುದ್ರು (ಪ್ರೋ. ಗ್ಲೋಬಲ್ ಕ್ವಾಯರ್ ಇಂಡಸ್ಟ್ರೀಸ್ ಬೆಣ್ ಅವರು ಭಾಗವಹಿಸಿ ಮಾತನಾಡಿದರು.