ಶೃಂಗೇರಿಯಲ್ಲಿ ನಾಪತ್ತೆಯಾಗಿದ್ದ ಜ್ಯೋತಿಷಿ ಉಡುಪಿಯಲ್ಲಿ ಪತ್ತೆ..!
– ಕಾರಿನ ಬಳಿ ಹೋಗಿದ್ದ ಜ್ಯೋತಿಷಿ ನಾಪತ್ತೆ ಆಗಿದ್ದು ಹೇಗೆ?
– ಕಾಣೆಯಾದ ಕಥೆಯೇ ರೋಚಕ: ಮಾಯ ಆಗಿದ್ರಾ?
NAMMUR EXPRESS NEWS
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ ಸನ್ಮಾನ ಸ್ವೀಕರಿಸಲು ಬಂದಿದ್ದ ಆಂಧ್ರ ಪ್ರದೇಶದ ಖ್ಯಾತ ಜ್ಯೋತಿಷಿಗಳೊಬ್ಬರು ಕೆಲವು ದಿನಗಳ ಹಿಂದೆ ದಿಢೀರ್ ನಾಪತ್ತೆಯಾಗಿದ್ದರು. ಈ ಘಟನೆ ಅವರ ಕುಟುಂಬಸ್ಥರಲ್ಲಿ ಹಾಗೂ ಶೃಂಗೇರಿ ಜನತೆಯಲ್ಲಿ ತೀವ್ರ ಆತಂಕವನ್ನುಂಟು ಮಾಡಿತ್ತು. ಜ್ಯೋತಿಷಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ ಪೋಲೀಸರು ಅವರನ್ನು ಉಡುಪಿಯಲ್ಲಿ ಪತ್ತೆ ಹಚ್ಚಿದ್ದಾರೆ. ಕಾಣೆಯಾದ ದಿನದಿಂದ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಇದರಿಂದ ಪೋಲೀಸರಿಗೆ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ನಂತರ ಉಡುಪಿಗೆ ಬಂದಾಗ ಮೊಬೈಲ್ ಆನ್ ಆಗಿದ್ದು ಆಗ ಅವರನ್ನು ಸಂಪರ್ಕಿಸಿ ಕರೆತರಲಾಗಿದೆ.
ಶೃಂಗೇರಿಗೆ ಬಂದವರು ಉಡುಪಿಗೆ ಹೋಗಿದ್ದು ಯಾಕೆ ಅವರಿಗೆ ಗೊತ್ತಿಲ್ಲ., ಶೃಂಗೇರಿಯಲ್ಲಿ ತನ್ನ ಕಾರಿನ ಬಳಿ ಹೋದ ಜ್ಯೋತಿಷಿಗಳು ದಿಢೀರ್ ನಾಪತ್ತೆಯಾಗಿ ಉಡುಪಿಯಲ್ಲಿ ಪತ್ತೆಯಾಗಿದ್ದು ರೋಚಕ ಸಂಗತಿಯಾಗಿದೆ. ಸಿಕ್ಕ ಜ್ಯೋತಿಷಿಗಳನ್ನ ಪ್ರಶ್ನಿಸಿದಾಗ ಏನಾಯಿತು,ಹೇಗೆ ಇಲ್ಲಿಯವರೆಗೆ ಬಂದೆ ಯಾವುದೂ ಗೊತ್ತಿಲ್ಲ,ಏನೂ ನೆನಪಿಲ್ಲ ಎಂದು ಉತ್ತರಿಸಿದ್ದಾರೆ.
ಆಗಂಬೆ-ಹೆಬ್ರಿ ಮೂಲಕ ಧರ್ಮಸ್ಥಳ- ಸುಬ್ರಮಣ್ಯ ದೇವಾಲಯಗಳಿಗೆ ಹೋಗಿ ಅಲ್ಲಿಂದ ಉಡುಪಿಗೆ ಬಂದು ತಮ್ಮ ಮೊಬೈಲ್ ನೋಡಿದ್ದಾರೆ. ಮೊಬೈಲ್ ಒಡೆದಿದ್ದು ಆನ್ ಆಗಿರುವುದಿಲ್ಲ. ಅಲ್ಲೇ ಒಂದು ಹೊಸ ಮೊಬೈಲ್ ಖರೀದಿಸಿ ಆನ್ ಮಾಡಿದಾಗ ಪೋಲೀಸರ ಸಂಪರ್ಕಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಇದೆ. ಜ್ಯೋತಿಷಿಗಳು ಸಿಕ್ಕಿದ್ದಾರೆ ಆದರೆ ಅವರು ಚಲಿಸಿ ಕೊನೆಗೆ ಪತ್ತೆಯಾದ ರೀತಿ ಒಂಥರಾ ಆಶ್ಚರ್ಯವನ್ನುಂಟು ಮಾಡಿದೆ.