ಶ್ರಾವಣ ಮಾಸ ಬಂತು..ಸಾಲು ಸಾಲು ಹಬ್ಬಗಳ ಸಂಭ್ರಮ!
– ಹಬ್ಬಗಳಿಗೆ ಸಿದ್ದವಾದ ಜನ: ತರಕಾರಿ, ಹೂ, ಹಣ್ಣುಗಳ ಬೆಲೆ ಏರಿಕೆ
– ದೇಗುಲಗಳು ಹಬ್ಬದ ಆಚರಣೆಗೆ ಸಜ್ಜು
NAMMUR EXPRESS NEWS
ಶ್ರಾವಣ ಮಾಸದಲ್ಲಿ ನಾಗರ ಪಂಚಮಿ, ವರಮಹಾಲಕ್ಷ್ಮಿ, ಶ್ರಾವಣ ಶನಿವಾರ, ಗೌರಿ – ಗಣೇಶ ಚತುರ್ಥಿಗಳು ಒಂದರ ಮೇಲೊಂದು ಹಬ್ಬಗಳು ಸಾಲು ಸಾಲಾಗಿ ಬರಲಿವೆ. ಈಗಾಗಲೇ ಹಬ್ಬಕ್ಕೆ ಜನ ಸಿದ್ಧವಾಗುತ್ತಿದ್ದಾರೆ.
ಹಬ್ಬದ ಅವಧಿಯಲ್ಲಿ ತರಕಾರಿ, ಹೂ, ಹಣ್ಣುಗಳಿಗೆ ಬೇಡಿಕೆ ಹೆಚ್ಚು. ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಕ್ಯಾರೆಟ್, ಬಿಟ್ರೋಟ್ ಬೆಲೆ ವಿಪರೀತ ಜಾಸ್ತಿಯಾಗಿದೆ. ಇದರಿಂದ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆ ಶಾಕ್ ಬೀಳಲಿದೆ.
ಶ್ರಾವಣ ಮಾಸ ಆರಂಭವಾಗಿ ಹೂ, ಹಣ್ಣು, ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದ್ದು ಕಳೆದ ವಾರಕ್ಕಿಂತ ಈ ವಾರ ತರಕಾರಿಗಳ ಬೆಲೆ 10 ರಿಂದ 20 ರೂಪಾಯಿ ಏರಿಕೆಯಾದರೆ ಹೂವಿನ ಬೆಲೆ 200 ರೂಪಾಯಿಯಷ್ಟು ಏರಿಕೆ ಮಾಡಿದ್ದಾರೆ.
ಈಗ ಬೆಲೆ ಅಂದಾಜು ಎಷ್ಟಿದೆ?
ತರಕಾರಿಗಳ ಬೆಲೆ:
ನಾಟಿ ಬೀನ್ಸ್ 100
ಟೊಮೆಟೊ 50
ಬಿಳಿ ಬದನೆ. 120
ಮೆಣಸಿನಕಾಯಿ 80
ನುಗ್ಗೆಕಾಯಿ 200
ಊಟಿ ಕ್ಯಾರೆಟ್ 200
ನವಿಲುಕೋಸು. 60
ಮೂಲಂಗಿ. 60
ಹೀರೇಕಾಯಿ 80
ಆಲೂಗಡ್ಡೆ 60
ಈರುಳ್ಳಿ 60
ಕ್ಯಾಪ್ತಿಕಂ. 85
ಹಾಗಲಕಾಯಿ. 85
ಕೊತ್ತಂಬರಿ ಸೊಪ್ಪು 70
ಶುಟಿ . 185
ಬೆಳ್ಳುಳ್ಳಿ. 350
ಪಾಲಕ್, 46
ಪುದಿನ 92
ನಾಟಿ ಬಟಾಣಿ 300
ಫಾರಂ ಬಟಾಣಿ 200
ಹಣ್ಣುಗಳ ಬೆಲೆ:
ಸೇಬು 350, ದ್ರಾಕ್ಷಿ 300, ಮೂಸಂಬಿ 140, ಸಪೋಟ 200, ಡ್ರಾಗಾನ್ ಪ್ರೋಟ್ 200, ಬಟರ್ ಪ್ರೋಟ್ 250, ಏಲಕ್ಕಿ ಬಾಳೆಹಣ್ಣು 80, ಪೊಪ್ಪಾಯ 50, ಕಲ್ಲಂಗಡಿ 50, ಅನಾನಸ್ 120, ಕಿವಿ ಪ್ರೋಟ್ 120, ಕಿತ್ತಳೆ 200
ಹೂಗಳ ದರ:
ಸೇವಂತಿಗೆ 250, ಗುಲಾಬಿ 200, ಅಣಗಲು 200, ಸುಗಂದರಾಜ 100, ಮಲ್ಲಿಗೆ 300, ಕನಕಾಂಬರ 300, ಚೆಂಡೂ ಹೂ 20, ತುಳುಸಿ 40, ವೈಟ್ ಸೇವಂತಿಗೆ 150, ಹಳದಿ ಸೇವಂತಿಗೆ ಮೊಳಕ್ಕೆ 250, ಕಾಕಡ ಕೆಜಿಗೆ 400, ಸಂಪಿಗೆ 200 ರೂ. ಗೆ ಮಾರಾಟ ಮಾಡಲಾಗುತ್ತಿದೆ.