ಟಾಪ್ ನ್ಯೂಸ್ ಕರ್ನಾಟಕ
ಉಡುಪಿಯಲ್ಲಿ ಹಾಡುಹಗಲೇ ಕಾರಲ್ಲಿ ಕಾಮದಾಟ!
– ಕಾರು ನೋಡಿ ರೆಡ್ ಹ್ಯಾಂಡಾಗಿ ಜನರ ಕೈಗೆ ಸಿಕ್ಕಿ ಬಿದ್ದ ಜೋಡಿ
– ಬೆಂಗಳೂರು: 15 ವರ್ಷದ ಬಾಲಕಿ ಮೇಲೆ ರೀಲ್ಸ್ ಮಾಡಿ ಫೋಸ್ ಕೊಡುತ್ತಿದ್ದವನಿಂದ ರೇಪ್!
– ದೇಗುಲದಲ್ಲಿ ದರ್ಶನ್ ಫೋಟೋ ಇಟ್ಟು ಪೂಜೆ; ಅರ್ಚಕ ಅಮಾನತು!
– ಗುಪ್ತಾಂಗದಲ್ಲಿ ಮೊಬೈಲ್ ಇಟ್ಟುಕೊಂಡು ಪರೀಕ್ಷೆ ನಕಲು!
NAMMUR EXPRESS NEWS
ಉಡುಪಿ: ಹಾಡಹಗಲೇ ಜೋಡಿಯೊಂದು ಕಾರಿನಲ್ಲಿ ಕಾಮದಾಟದಲ್ಲಿ ತೊಡಗಿದ್ದ ಘಟನೆ ಉಡುಪಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗದಲ್ಲಿ ಬುಧವಾರ ನಡೆದಿದೆ.
ಕಾರಿನ ಗಾಜಿಗೆ ಪರದೆ ಅಳವಡಿಸಿ ಕಾರಿನ ಒಳಗೆ ಕುಲ್ಲಂಕುಲ್ಲಾ ಆಟದಲ್ಲಿ ಜೋಡಿ ತೊಡಗಿತ್ತು. ಕಾರು ಅಲ್ಲಾಡುತ್ತಿರುವುದರಿಂದ ಸಂಶಯಗೊಂಡ ಜನರು, ಕಾರನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಕಾರಿನ ಒಳಗಡೆ ಜೋಡಿ ಪತ್ತೆಯಾಗಿದೆ. ಈ ವೇಳೆ ಜೋಡಿ ಜನರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದೆ.
ನಗರದ ಮಧ್ಯಭಾಗದಲ್ಲಿ ಅನೈತಿಕ ಚಟುಚಟಿಕೆ ನಡೆಸಿದ್ದಕ್ಕೆ ಜೋಡಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರೀಲ್ಸ್ ಮಾಡಿ ಫೋಸ್ ಕೊಡುತ್ತಿದ್ದವನಿಂದ ರೇಪ್!
ಬೆಂಗಳೂರಲ್ಲಿ ಕಾಮುಕರ ಅಟ್ಟಹಾಸ ಮಿತಿ ಮೀರುತ್ತಿದ್ದು, ಯುವಕನೋರ್ವ 15 ವರ್ಷದ ಶಾಲಾ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಫೋಸ್ ಕೊಡುತ್ತಿದ್ದ ಸಾದ್ ಮುಸೈಬ್ರಾ ಎಂಬಾತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
15 ವರ್ಷದ ಶಾಲಾ ಬಾಲಕಿಯನ್ನು ಮನವೊಲಿಸಿ ಮನೆಗೆ ಕರೆದುಕೊಂಡು ಬಂದು ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.
ಬಾಲಕಿ ತಂದೆಗೆ ಬೆದರಿಕೆಯೊಡ್ಡಿ ಬಾಲಕಿಯನ್ನು ಪದೇ ಪದೇ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಬಾಲಕಿ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದಳು ಎನ್ನಲಾಗಿದೆ.ಸದ್ಯ ಬಾಲಕಿ ಪೋಷಕರು ನೀಡಿದ ದೂರಿನ ಮೇರೆಗೆ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇಗುಲದಲ್ಲಿ ದರ್ಶನ್ ಫೋಟೋ ಇಟ್ಟು ಪೂಜೆ; ಅರ್ಚಕ ಅಮಾನತು!
ಅಭಿಮಾನಿಗಳು ದರ್ಶನ್ ಬಿಡುಗಡೆಗಾಗಿ ಪೂಜೆ- ಪುನಸ್ಕಾರಗಳ ಮೊರೆ ಹೋಗಿದ್ದಾರೆ. ಹಾಗೆಯೇ ಅರ್ಚಕನೋರ್ವ ಒಂದು ಹೆಜ್ಜೆ ಮುಂದೆ ಹೋಗಿ ದೇವಸ್ಥಾನದಲ್ಲೇ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿ ಕೆಲಸ ಕಳೆದುಕೊಂಡಿದ್ದಾನೆ.
ಬಳ್ಳಾರಿಯ ಕುರುಗೋಡಿನ ಬಸವೇಶ್ವರ ದೇಗುಲದಲ್ಲಿ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದ್ದಕ್ಕೆ ಅರ್ಚಕ ಮಲ್ಲಿ ಎನ್ನುವರನ್ನು ಧಾರ್ಮಿಕ ದತ್ತಿ ಇಲಾಖೆ ಅಮಾನತು ಮಾಡಿದೆ. ಅಲ್ಲದೇ ಈ ಘಟನೆಯ ವಿಚಾರಣೆ ಮುಗಿಯುವವರೆಗೂ ದೇವಸ್ಥಾನಕ್ಕೆ ಬಾರದಂತೆ ನಿಷೇಧ ಹೇರಿದೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಬೀರ್ಭುಮ್ನ ಸೂರಿಯ ಬೆನಿಮಾಧಬ್ ಇನ್ಸಿಟ್ಯೂಷನ್ನಲ್ಲಿ ಎಎನ್ಎಂ ಮತ್ತು ಜಿಎನ್ಎಂ ನರ್ಸಿಂಗ್ ಕೋರ್ಸ್ಗೆ ಪ್ರವೇಶ ಪರೀಕ್ಷೆ ನಡೆಯುತ್ತಿತ್ತು. ಮಾಲ್ದಾದ ಕೆಲವು ವಿದ್ಯಾರ್ಥಿಗಳು ಸೂರಿಯ ಬೆನಿಮಾಧಬ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗುತ್ತಿದ್ದರು. ಪರೀಕ್ಷಾ ಕೇಂದ್ರಗಳ ಒಳಗೆ ಮೊಬೈಲ್ ಫೋನ್ ಗಳನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿತ್ತು.
ಪ್ರತಿಯೊಬ್ಬರನ್ನು ಸರಿಯಾಗಿ ಪರಿಶೀಲನೆ ನಡೆಸಿಯೇ ಮಹಿಳಾ ಸೆಕ್ಯುರಿಟಿ ಗಾರ್ಡ್ಗಳು ಪರೀಕ್ಷಾ ಕೊಠಡಿಗೆ ಹೋಗಲು ಅನುಮತಿಸುತ್ತಿದ್ದರು. ಪರಿಶೀಲನೆ ವೇಳೆ ಹಲವರ ಬಳಿ ಮೊಬೈಲ್, ಕಾಪಿ ಚೀಟಿ ಪತ್ತೆಯಾಗಿತ್ತು. ತಕ್ಷಣ ಅವರಿಂದ ಅದನ್ನು ಸೀಜ್ ಮಾಡಿ ಅವರನ್ನು ಪರೀಕ್ಷ ಕೊಠಡಿಗೆ ಕಳುಹಿಸಲಾಗಿತ್ತು. ಆದರೆ ಇನ್ನು ಕೆಲವರು ಸಿಬ್ಬಂದಿಗಳ ಕಣ್ಡಪ್ಪಿಸಿ ಪರೀಕ್ಷೆ ಬರೆಯಲು ಮುಂದಾಗಿದ್ದರು.
ಆದರೆ ಪರೀಕ್ಷೆಗಳು ಪ್ರಾರಂಭವಾದ ತಕ್ಷಣ, ಕೊಠಡಿಯೊಳಗೆ ಕೆಲವು ಭದ್ರತಾ ಸಿಬ್ಬಂದಿಗಳಿಗೆ ಮೊಬೈಲ್ ಬಳಕೆ ಅನುಮಾನ ಬಂದಿತು. ನಂತರ ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿ ಮತ್ತೊಂದು ಸಭಾಂಗಣಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಒಬ್ಬೊಬ್ಬರನ್ನೇ ವಿಚಾರಣೆಗೆ ಒಳಪಡಿಸಿ ತಪಾಸಣೆ ನಡೆಸಲಾಯಿತು. ಮೆಟಲ್ ಡಿಟೆಕ್ಟರ್ ಗಳ ಮೂಲಕ ದೇಹವನ್ನು ಹುಡುಕುತ್ತಿದ್ದಂತೆ, ಕೆಲ ವಿದ್ಯಾರ್ಥಿನಿಯರು ತಮ್ಮ ಗುಪ್ತಾಂಗದಲ್ಲಿ ಮೊಬೈಲ್ ಇಟ್ಟುಕೊಂಡು ಬಂದಿದ್ದೂ ಪತ್ತೆಯಾಯಿತು.