ಟಾಪ್ 4 ನ್ಯೂಸ್ ಮಲ್ನಾಡ್
ಶಿವಮೊಗ್ಗ: ದೊಡ್ಡದಾವನಂದಿ ಗ್ರಾಮದ ಕೆರೆಯಲ್ಲಿ ಯುವಕನ ಶವ ಪತ್ತೆ
– ಮೂಡಿಗೆರೆ: ಕಬ್ಬಿಣದ ಏಣಿ ಕೊಂಡೊಯ್ಯುವಾಗ ವಿದ್ಯುತ್ ತಂತಿ ಸ್ಪರ್ಶ, ವ್ಯಕ್ತಿ ಸ್ಥಳದಲ್ಲೇ ಸಾವು
– ಸಾಗರ: ಬೈಕ್ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ
– ಶಿವಮೊಗ್ಗ: ಶ್ರೀಗಂಧದ ತುಂಡು ಸಾಗಾಟ ಮೂವರು ಸೆರೆ
NAMMUR EXPRESS NEWS
ಶಿವಮೊಗ್ಗ : ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡದಾವನಂದಿ ಗ್ರಾಮದ ಕೆರೆಯಲ್ಲಿ ಯುವಕ ನೋರ್ವನ ಶವವೊಂದು ಪತ್ತೆಯಾಗಿದ್ದು ಆತನನ್ನು ಸ್ಥಳೀಯ ನಿವಾಸಿ ನಿತಿನ್ ಎಂದು ಗುರುತಿಸಲಾಗಿದೆ. ಅಂಗವಿಕಲನಾಗಿದ್ದ ನಿತಿನ್ (29) ತುದಿಗಾಲಿನಲ್ಲಿ ನಡೆಯುತ್ತಿದ್ದ. ಗ್ರಾಮದ ಬಸ್ ನಿಲ್ದಾಣದಲ್ಲಿ ಚಹದಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದನು. ಇವರ ತಾಯಿ ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಗ್ರಾಮದಲ್ಲಿನ ಕೆರೆಯಲ್ಲಿ ಅಂಗಾತ ಬಿದ್ದು ಎರಡು ಕಾಲು ಗಳು ಕೆರೆಯಹೊರಭಾಗದಲ್ಲಿ ಬಿದ್ದು ಸಾವನ್ನಪ್ಪಿದ್ದನು. ನಿತಿನ್ ಮತ್ತು ಅವರ ತಾಯಿ ಇಬ್ಬರೇ ಇದ್ದು ಕೆರೆಯಲ್ಲಿ ಆಯತಪ್ಪಿ ಅಥವಾ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ ಸಂಜೆ ಅಂಗಡಿ ಕಡೆ ಬಂದ ತಾಯಿಗೆ ಶೌಚಕ್ಕೆ ಹೋಗಿ ಬರುವುದಾಗಿ ಹೇಳಿ ಆಕೆಗೆ ಮನೆಗೆ ತೆರಳಲು ಸೂಚಿಸಿದ್ದನು. ಆದರೆ ಮನೆಗೆ ಎಷ್ಟು ಹೊತ್ತು ಕಳೆದರೂ ಮನೆಗೆ ಬಾರದ ನಿತಿನ್ನನ್ನು ಹುಡುಕಿಕೊಂಡು ಹೋದಾಗ ಶವ ಕಂಡುಬಂದಿದೆ.
– ಮೂಡಿಗೆರೆ: ಕಬ್ಬಿಣದ ಏಣಿ ಕೊಂಡೊಯ್ಯುವಾಗ ವಿದ್ಯುತ್ ತಂತಿ ಸ್ಪರ್ಶ, ವ್ಯಕ್ತಿ ಸ್ಥಳದಲ್ಲೇ ಸಾವು
ಮೂಡಿಗೆರೆ: ಕಬ್ಬಿಣದ ಏಣಿಯನ್ನ ಕೊಂಡೊಯ್ಯುವಾಗ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗದ್ಗಲ್ ಗ್ರಾಮದ ಬಳಿ ನಡೆದಿದೆ. ಪ್ರಸನ್ನ ಸಾಲ್ಡನ್ (48) ಮೃತ ದುರ್ದೈವಿ. ಮೃತ ಪ್ರಸನ್ನ ಮನೆಯಲ್ಲಿ ಬೇರೆ ಕೆಲಸದ ನಿಮಿತ್ತ ಕಾಫಿ ತೋಟದಿಂದ ಕಬ್ಬಿಣದ ಏಣಿಯನ್ನ ಮನೆಗೆ ತಂದಿದ್ದರು. ಕೆಲಸವಾದ ಬಳಿಕ ಕಾಫಿ ತೋಟಕ್ಕೆ ಇಡಲು ಗಬ್ಗಲ್ ಗ್ರಾಮದ ಶಾಲೆ ಪಕ್ಕ ಎತ್ತರದ ಪ್ರದೇಶದಲ್ಲಿ ಏಣಿಯನ್ನ ಹೊತ್ತುಕೊಂಡು ಹೋಗುವಾಗ ವಿದ್ಯುತ್ ತಂತಿಗೆ ತಗುಲಿ ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಸಾಗರ: ಬೈಕ್ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ
ಸಾಗರ : ತಾಲೂಕಿನ ಆವಿನಹಳ್ಳಿ ಸಮೀಪ ಬೈಕ್ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಸಚಿನ್ ( 18 ) ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸಚಿನ್ ಮೂಲತಃ ಪಡುಬೀಡು ಗ್ರಾಮದ ಯುವಕನಾಗಿದ್ದಾರೆ. ಸಾಗರದ ಎಲ್ ಬಿ ಕಾಲೇಜಿನಲ್ಲಿ ಪದವಿ ಕೋರ್ಸ್ ಗೆ ಅಡ್ಮಿಶನ್ ಸಹ ಪಡೆದಿದ್ದನು, ಇಂದು ದ್ವೀಪದಿಂದ ಸಾಗರಕ್ಕೆ ಹಾಸ್ಟೆಲ್ ಗಾಗಿ ಅರ್ಜಿ ಸಲ್ಲಿಸಲು ಸಾಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಬೈಕ್ ನಲ್ಲಿದ್ದ ಮತ್ತೊಬ್ಬ ಸವಾರ ಸುಮಂತ್ ನನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಇದೀಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
– ಶಿವಮೊಗ್ಗ: ಶ್ರೀಗಂಧದ ತುಂಡು ಸಾಗಾಟ ಮೂವರು ಸೆರೆ
ಶಿವಮೊಗ್ಗ : ನಗರದ ಉಂಬ್ಳೆ ಬೈಲು ರಸ್ತೆಯಲ್ಲಿರುವ ದರ್ಗಾದ ಹತ್ತಿರ ಮೂವರು ಕಾರಿನಲ್ಲಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತುಂಗಾನಗರ ಪೊಲೀಸರು ಅವರನ್ನು ಬಂಧಿಸಿ ಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿತರಾದ ಜೆಪಿ ನಗರದ ಇಮಾದ್ ಖಾನ್ (42), ಆರ್ ಎಂ ಎಲ್ ನಗರದ ಸಿದ್ದಿಕ್ ಬಾಷಾ ಅಲಿಯಾಸ್ ಸಿದ್ದು (30) ಇಂದಿರಾನಗರದ ಫೈರೋಜ್ ಖಾನ್ ಅಲಿಯಾಸ್ ಗಿಡ್ಡು (34) ಇವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಅಂದಾಜು ಮೌಲ್ಯ 58,000 ರೂ. ಗಳ 14.5 ಕೆ.ಜಿ ತೂಕದ ಶ್ರೀ ಗಂಧದ ತುಂಡುಗಳು ಮತ್ತು ಕೃತ್ಯಕ್ಕೆ ಬಳಸಿದ ಆಲ್ಟೊ ಕಾರನ್ನು ಪಡಿಸಿಕೊಳ್ಳಲಾಗಿದೆ. ವಶ ತುಂಗಾನಗರ ಸಿಪಿಐ ಮಂಜುನಾಥ್, ಎಸ್ ಐ ಶಿವಪ್ರಸಾದ್ ಮತ್ತು ಸಿದ್ದಪ್ಪ ಸಿಬ್ಬಂದಿಗಳಾದ ಹೆಚ್.ಸಿ ಕಿರಣ್ ಮೋರೆ, ಅರುಣ್ ಕುಮಾರ್, ಪಿಸಿ ಹರೀಶ್ ನಾಯ್ಕ, ನಾಗಪ್ಪ, ಲಂಕೇಶ್, ಹರೀಶ್, ಜಯಪ್ಪ ಮತ್ತು ರಮೇಶ್ ಅವರಿದ್ದ ತಂಡ ಕಾರ್ಯಾಚರಣೆ ನಡೆಸಿದೆ.