ಉಡುಪಿಯ ಕಾಪುವಿನಲ್ಲಿ ನಾಗರ ಹಾವಿಗೆ ಪೂಜೆ!
– ಕಾಪುವಿನ ಮಜೂರು ಮಲ್ಲಾರಿನ ನಿವಾಸಿ ಗೋವರ್ಧನ್ ಭಟ್ ನಿವಾಸದಲ್ಲಿ ಪೂಜೆ
– 1000ಕ್ಕೂ ಅಧಿಕ ಹಾವುಗಳ ಆರೈಕೆ ಮಾಡುತ್ತಿರುವ
NAMMUR EXPRESS NEWS
ಉಡುಪಿ: ನಾಗರ ಪಂಚಮಿಯಂದು ಕರಾವಳಿಯಲ್ಲಿ ನಾಗನ ಕಲ್ಲಿಗೆ ಹಾಲೆರೆದು ಪೂಜಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ನಾಗನ ಹುತ್ತಕ್ಕೆ ಹಾಲೆರೆದು ನಾಗರಪಂಚಮಿಯನ್ನು ಆಚರಿಸುತ್ತಾರೆ ಆದರೆ ಇಲ್ಲಿ ಜೀವಂತ ಹಾವಿಗೆ ತನು ಎರೆಯುವುದರ ಮೂಲಕ ನಾಗರಪಂಚಮಿಯನ್ನು ಆಚರಣೆ ಮಾಡಲಾಗಿದೆ.
ಕಾಪುವಿನ ಮಜೂರು ಮಲ್ಲಾರಿನ ನಿವಾಸಿ ಗೋವರ್ಧನ್ ಭಟ್ ಅವರು ಹಾವುಗಳ ರಕ್ಷಣೆ ಮಾಡುತ್ತಾರೆ. ಕಾಪು ಪರಿಸರದಲ್ಲಿ ಚಿರಪರಿಚಿತರು. ಈ ಪರಿಸರದಲ್ಲಿ ಎಲ್ಲೆ ಹಾವುಗಳೂ ಸಂಕಷ್ಟದಲ್ಲಿದ್ದರೆ ಗೋವರ್ಧನ್ ನೆರವಿಗೆ ಧಾವಿಸುತ್ತಾರೆ. ಗಾಯಗೊಂಡ ಹಾವುಗಳನ್ನು ಆರೈಕೆ ಮಾಡಿ ಗುಣಮುಖಗೊಂಡ ನಂತರ ಕಾಡಿಗೆ ಬಿಡುವ ಮೂಲಕ ಹಲವು ಬಾರಿ ಉರಗ ಪ್ರೇಮ ಮೆರೆದಿದ್ದಾರೆ.
1000ಕ್ಕೂ ಅಧಿಕ ಹಾವುಗಳ ಆರೈಕೆ ಮಾಡಿದ್ದಾರೆ. ತನ್ನ ಆರೈಕೆಯಲ್ಲಿ ಇರುವ ಹಾವುಗಳಿಗೆ ತನು ಏರೆಯುವ ಮೂಲಕ ನಾಗರ ಪಂಚಮಿಯನ್ನು ಆಚರಿಸುತ್ತಾರೆ.
ಎಲ್ಲಾ ಕಡೆ ನಾಗರ ಕಲ್ಲಿಗೆ ಪೂಜೆ ಪುನಸ್ಕಾರಗಳು ನಡೆಯುತ್ತದೆ. ಆದ್ರೆ ಪಂಚಮಿಯಂದು ನಮ್ಮ ಮನೆಯಲ್ಲಿ ನಮ್ಮ ಮನೆಯವರು ಒಟ್ಟಾಗಿ ಜೀವಂತನಾಗನಿಗೆ ಪೂಜೆ ಮಾಡುವುದು ನಮ್ಮೆಲ್ಲರ ಭಾಗ್ಯ ಎನ್ನುತ್ತಾರೆ ಗೋರ್ವಧನ್ ಭಟ್.