ಇಂದು ಶ್ರಾವಣ ಶನಿವಾರದ ರಾಶಿ ಭವಿಷ್ಯ ಹೇಗಿದೆ?
– ಶನಿ ದೇವನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?
NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?
** ಮೇಷ ರಾಶಿ :
ಮನೆಗೆ ಅತಿಥಿಗಳ ಆಗಮನದಿಂದಾಗಿ ನಿಮ್ಮ ಸಂತೋಷ ಹೆಚ್ಚಾಗುವುದು. ಇದರಿಂದಾಗಿ ನಿಮಗೆ ಲಾಭ ಹೆಚ್ಚಾಗಬಹುದು. ವ್ಯಾಪಾರ ಮಾಡುವವರು ಈ ದಿನ ತಮ್ಮ ಪಾಲದಾರರೊಂದಿಗೆ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಇಂದು ನೀವು ನಿಮ್ಮ ತಾಯಿಗೆ ಉಡುಗೊರೆಯನ್ನು ಖರೀದಿಸುವಿರಿ.
** ವೃಷಭ ರಾಶಿ :
ಈ ದಿನ ಸಮಸ್ಯೆಗಳನ್ನು ಎದುರಿಸಬಹುದು. ಆದರೆ ಈ ಎಲ್ಲಾ ಸಮಸ್ಯೆಗಳ ನಡುವೆ ನಿಮ್ಮ ಸಂಬಂಧ ಉತ್ತಮವಾಗಿರುವುದು. ಸಂಜೆ ವೇಳೆಗೆ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸುವಿರಿ. ನಿಮ್ಮ ಆರ್ಥಿಕ ಸ್ಥಿತಿ ಈ ದಿನ ಉತ್ತಮವಾಗಿರುವುದು. ಇಂದು ನಿಮ್ಮ ಸ್ನೇಹಿತರ ನಮ್ಮ ಸಹಾಯಕ್ಕೆ ಮುಂದೆ ಬರುವರು. ಈ ದಿನ ನೀವು ನಿಮ್ಮ ಆದಾಯ ಮತ್ತು ಖರ್ಚಿನ ಬಗ್ಗೆ ಎಚ್ಚರ ವಹಿಸಬೇಕು.
** ಮಿಥುನ ರಾಶಿ
ಇಂದು ತಮ್ಮ ಗೌರವ ಖ್ಯಾತಿಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆ. ಯಾವುದೇ ತಪ್ಪು ಕೆಲಸಗಳನ್ನು ಮಾಡುವುದರಿಂದ ದೂರವಿರಿ, ಇಲ್ಲದಿದ್ದರೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ನೀವು ಯಾವುದಾದರೂ ಬ್ಯಾಂಕ್ ಅಥವಾ ಯಾವುದಾದರೂ ವ್ಯಕ್ತಿಯಿಂದ ಸಾಲ ಪಡೆದರೆ ಇಂದು ನಿಮಗೆ ಅದರಿಂದ ಮುಕ್ತಿ ದೊರಕುವುದು ಮತ್ತು ನಿಮ್ಮ ಹಣ ವೃದ್ದಿಯಾಗುವುದು.
** ಕರ್ಕಾಟಕ ರಾಶಿ :
ದೊಡ್ಡ ವ್ಯಕ್ತಿಯ ಸಹಾಯದಿಂದ ಕಳೆದು ಹೋದ ಹಣವು ವಾಪಸ್ಸು ಪಡೆಯುವ ಯೋಗವಿದೆ ಮತ್ತು ನಿಮ್ಮ ಸರಕಾರಿ ಕೆಲಸಗಳೆಲ್ಲವೂ ಪೂರ್ಣವಾಗುವುದು. ರಾಜಕೀಯದವರೊಂದಿಗೆ ನಿಮ್ಮ ಸಂಬಂಧ ಈ ದಿನ ಉತ್ತಮವಾಗಿರುವುದು. ಇದರಿಂದ ನೀವು ಹೆಚ್ಚಿನ ಲಾಭವನ್ನು ಪಡೆಯುವಿರಿ. ಆದರೆ ನೀವು ನಿಮ್ಮ ಪರಿಶ್ರಮವನ್ನು ಕಡಿಮೆ ಮಾಡಬಾರದು.
** ಸಿಂಹ ರಾಶಿ :
ತಮ್ಮ ವ್ಯಾಪಾರದಲ್ಲಿ ಹೊಸ ಯೋಜನೆಗಳಿಗಾಗಿ ಕೆಲಸ ಮಾಡುವ ಅವಕಾಶ ಲಭಿಸುವುದು. ನೀವು ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ, ಭವಿಷ್ಯದಲ್ಲಿ ಉತ್ತಮ ಲಾಭ ಪಡೆಯುವ ಯೋಗವಿದೆ. ಇಂದು ನಿಮಗೆ ಉತ್ತಮವಾದ ಅವಕಾಶಗಳು ಲಭಿಸುವುದು. ಇದರಿಂದಾಗಿ ನಿಮ್ಮ ಹಣ ವೃದ್ದಿಯಾಗುವುದು. ಆದರೆ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ.
** ಕನ್ಯಾ ರಾಶಿ :
ಸುತ್ತಲು ಸಂತೋಷ ಮಯವಾದ ವಾತಾವರಣ ಇರುವುದು. ಇದರಿಂದಾಗಿ ನಿಮ್ಮ ಮನಸ್ಸು ಸಂತಸದಿಂದಿರುವುದು. ಹಾಗಾಗಿ ನಿಮ್ಮ ಮುಖ ಸುಂದರವಾಗಿ ಕಾಣುವುದು. ಇದರಿಂದ ನೀವು ಹೆಚ್ಚಿನ ಲಾಭವನ್ನು ಪಡೆಯುವಿರಿ. ಈ ದಿನ ನಿಮ್ಮ ಅಪೂರ್ಣ ಕೆಲಸಗಳೆಲ್ಲವೂ ಪೂರ್ಣಗೊಳ್ಳುವುದು ಮತ್ತು ನೀವು ಹೆಚ್ಚಿನ ಧನ ಲಾಭವನ್ನು ಪಡೆಯುವ ಯೋಗವಿದೆ. ನಿಮ್ಮ ಮನೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ, ಅವೆಲ್ಲವೂ ಈ ದಿನ ದೂರವಾಗುವುದು.
** ತುಲಾ ರಾಶಿ :
ವಿದ್ಯಾರ್ಥಿಗಳಿಗೆ ಇಂದು ಉನ್ನತ ಶಿಕ್ಷಣಕ್ಕಾಗಿ ಉತ್ತಮ ಅವಕಾಶ ಲಭಿಸುವುದು. ಇಂದು ನೀವು ಯಾವುದೇ ಮಹತ್ವಪೂರ್ಣ ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ, ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಇಲ್ಲದಿದ್ದರೆ ಭವಿಷ್ಯದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ನಾಯಕತ್ವದ ಗುಣ ಈ ದಿನ ಹೆಚ್ಚಾಗುವುದು ಮತ್ತು ವ್ಯಾಪಾರದಲ್ಲಿನ ಎಲ್ಲಾ ಸಮಸ್ಯೆಗಳು ಈ ದಿನ ದೂರವಾಗುವುದು.
** ವೃಶ್ಚಿಕ ರಾಶಿ :
ವಿದ್ಯಾರ್ಥಿಗಳು ಇಂದು ಹೆಚ್ಚು ಏಕಾಗೃತೆಯಿಂದ ಪರೀಕ್ಷೆಗೆ ತಯಾರಿ ನಡೆಸಬೇಕು. ಈ ದಿನ ನಿಮ್ಮ ಸಹೋದರರಿಗೆ ಶಾರೀರಿಕ ಸಮಸ್ಯೆ ಎದುರಾಗಬಹುದು. ಈ ದಿನ ಮನೆಯಲ್ಲಿ ಒತ್ತಡದ ವಾತಾವರಣ ಇರುವುದು. ಆದರೆ ನಿಮಗೆ ನಿಮ್ಮ ಮಾತಿನ ಬಗ್ಗೆ ನಿಯಂತ್ರಣ ಇರಲಿ. ತಂದೆಯ ಸಲಹೆಯಿಂದ ನಿಮ್ಮ ಮನೆಯಲ್ಲಿನ ಸಮಸ್ಯೆಗಳು ಸಂಜೆ ವೇಳೆಗೆ ದೂರವಾಗುವುದು.
** ಧನಸ್ಸು ರಾಶಿ :
ತಮ್ಮ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವರು ಮತ್ತು ನಿಮಗೆ ಈ ದಿನ ವಿವಾಹ ಯೋಗವು ಇದೆ. ಕೆಲಸ ಮಾಡುವ ಈ ರಾಶಿಯವರು ಇಂದು ಎಲ್ಲರ ಪ್ರಶಂಸೆಗೆ ಪಾತ್ರರಾಗುವರು. ಆದರೆ ನಿಮ್ಮ ಮಾತಿನಲ್ಲಿ ಸೌಮ್ಯತೆ ಇರಲಿ. ನೀವು ಯಾರಿಂದಲಾದರೂ ಸಾಲ ಪಡೆದಿದ್ದರೆ, ಇಂದು ಅದನ್ನು ಹಿಂತಿರುಗಿಸುವ ಸಾಧ್ಯತೆ ಇದೆ. ಮನೆಯ ಅಂದವನ್ನು ಹೆಚ್ಚಿಸಲು ಈ ದಿನ ನೀವು ಖರೀದಿ ಮಾಡುವಿರಿ.
** ಮಕರ ರಾಶಿ :
ವ್ಯಾಪಾರದಲ್ಲಿ ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಪಡಬೇಕಾಗುತ್ತದೆ ಹಾಗೂ ಹೊಸ ಯೋಜನೆಗಳನ್ನು ರೂಪಿಸುವುದರಿಂದ ಸಹ ಯಶಸ್ಸು ಗಳಿಸುವಿರಿ. ಗಂಡನ ಮನೆಯ ಯಾವುದಾದರೂ ವ್ಯಕ್ತಿಗೆ ಹಣವನ್ನು ನೀಡಬೇಕಾದರೆ ಈ ದಿನ ಎಚ್ಚರಿಕೆಯಿಂದ ನೀಡಿ, ಇಲ್ಲದಿದ್ದರೆ ನಿಮ್ಮ ಸಂಬಂಧ ಹಾಳಾಗಬಹುದು. ಈ ರಾಶಿಗೆ ಸೇರಿದ ವಿದ್ಯಾರ್ಥಿಗಳು ನಾಳೆ ಹೊಸ ಕೋರ್ಸ್ ಗೆ ಸೇರಬಹುದು.
** ಕುಂಭ ರಾಶಿ :
ಗೌರವ, ಖ್ಯಾತಿ ಹೆಚ್ಚಾಗುವುದು ಮತ್ತು ನಿಮ್ಮ ಸಂಬಂಧ ಬಲಗೊಳ್ಳುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಲಭಿಸುವುದು, ಇದರಿಂದಾಗಿ ನೀವು ಯಶಸ್ಸು ಗಳಿಸುವಿರಿ ಮತ್ತು ಹೊಸ ವ್ಯಾಪಾರವನ್ನು ಶುರು ಮಾಡಲು ಈ ದಿನ ಉತ್ತಮವಾಗಿದೆ. ಇಂದು ಸಂಜೆ ನೀವು ದೇವರ ದರ್ಶನಕ್ಕೆ ದೇವಾಲಯಕ್ಕೆ ತೆರಳಬಹುದು. ನೀವು ವಾಹನವನ್ನು ಖರೀದಿಸಬೇಕೆಂದಿದ್ದರೆ, ಈ ಸಮಯ ನಿಮಗೆ ಅನುಕೂಲಕರವಾಗಿರಲಿದೆ.
** ಮೀನ ರಾಶಿ :
ತಮ್ಮ ಕಳೆದು ಹೋದ ಹಣವನ್ನು ವಾಪಸ್ಸು ಪಡೆಯಬಹುದು. ಇದರಿಂದಾಗಿ ನಿಮ್ಮ ಮನಸ್ಸು ಸಂತೋಷದಿಂದಿರುವುದು. ಹೊಸ ವ್ಯಾಪಾರವನ್ನು ಶುರು ಮಾಡಲು ಈ ದಿನ ಉತ್ತಮ ದಿನವಾಗಿದೆ. ಆದರೆ ಇಂದು ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ ಮತ್ತು ವೈದ್ಯರ ಸಲಹೆ ಪಡೆಯಿರಿ.