ಹೆಬ್ರಿ ಬಸ್ ನಿಲ್ದಾಣದ ಬಳಿ ಎಟಿಎಂ ಇಲ್ಲ!
– ಕೆಲಸಕ್ಕಾಗಿ ಬರುವ ಜನರು, ಪ್ರಯಾಣಿಕರ ಪರದಾಟ
– ಇಂಡಿಯಾ ಒನ್ ಅಥವಾ ಯಾವುದೇ ಎಟಿಎಂ ಅಳವಡಿಸಲು ಪಟ್ಟು
ವರದಿ: ರಕ್ಷಿತ್ ಕುಮಾರ ಶೆಟ್ಟಿ
ಹೆಬ್ರಿ: ಹೆಬ್ರಿ ಕರಾವಳಿ ಮತ್ತು ಮಲೆನಾಡು ಸಂಪರ್ಕದ ಊರು. ಆದರೆ ಇಲ್ಲಿ ಸಮರ್ಪಕ ಸೌಲಭ್ಯ ಇಲ್ಲದೆ ನಲುಗುತ್ತಿದೆ. ಅದರಲ್ಲಿ ಎಟಿಎಂ ಕೂಡ ಒಂದು..!
ಹೆಬ್ರಿ ಮುಖ್ಯ ಬಸ್ ನಿಲ್ದಾಣ ಬಳಿ ಯಾವುದೇ ಬ್ಯಾಂಕ್ ಎಟಿಎಂ ಇಲ್ಲ. ಇದರಿಂದ ಹೆಬ್ರಿ ತಾಲೂಕು ಜನ ಸೇರಿದಂತೆ ಇಲ್ಲಿಗೆ ಬರುವ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ.
ಹೆಬ್ರಿ ಗ್ರಾಮಗಳಿಗೆ ಬೇರೆ ಬೇರೆ ಗ್ರಾಮಗಳಿಂದ ಬಸ್ಸುಗಳಿಂದ ಬಂದು ಇಳಿದು ಹಣದ ಅಗತ್ಯತೆಗೆ ೨೦೦-೩೦೦ ಮೀಟರ್ ಹೊಗಬೇಕಾಗುತ್ತದೆ. ಬಸ್ಸು ನಿಲ್ದಾಣ ಹತ್ತಿರ ಇಂಡಿಯಾ ಒನ್ ಅಥವಾ ಯಾವುದೇ ಬ್ಯಾಂಕಿನ ಎಟಿಎಂ ಇದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
ಹೆಬ್ರಿ ತಾಲೂಕು ಕಛೇರಿ ಇದ್ದರಿಂದ ಬೇರೆ ಬೇರೆ ಗ್ರಾಮಗಳಿಂದ ಜನರು ತಮ್ಮ ಕೆಲಸಕ್ಕಾಗಿ ಬರುತ್ತಾರೆ. ಹೆಬ್ರಿ ಬಸ್ಸು ನಿಲ್ದಾಣಕ್ಕೆ ಬೇರೆ ಬೇರೆ ಗ್ರಾಮಗಳಿಗೆ ಬರುತ್ತಾರೆ. ಇಂಡಿಯಾ ಒನ್ ಎಟಿಮ್ ವಿಶೇಷತೆ ಎಂದರೆ ಬೇರೆ ಯಾವುದೇ ಬ್ಯಾಂಕಿನ ಡೆಬಿಟ್ ಕಾರ್ಡು ಉಪಯೋಗಿಸಿದರೆ ಯಾವುದೇ ರೀತಿಯ ಚಾರ್ಜುಗಳು ಇರುವುದಿಲ್ಲ. ಹೀಗಾಗಿ ಜನ ಈ ಬಗ್ಗೆ ಒತ್ತಾಯಿಸಿದ್ದಾರೆ.
ಹೆಬ್ರಿ ಗ್ರಾಮದಲ್ಲಿ ಖಾಸಗಿ ಶಾಲೆ , ಕಾಲೇಜು, ಸರಕಾರಿ ಶಾಲೆ ಕಾಲೇಜುಗಳಿವೆ, ಬ್ಯಾಂಕು, ತಾಲೂಕು ಕಛೇರಿ ಕೆಲಸಗಳಿಗಾಗಿ ಹಣಕ್ಕಾಗಿ ಅಲೆದಾಟ ಮಾಡಬೇಕಾಗುತ್ತದೆ. ಈಗ ಹೆಚ್ಚಿನ ಕಡೆಯಲ್ಲಿ ಕೆಲವು ಖಾಸಗಿ ಬ್ಯಾಂಕುಗಳಲ್ಲಿ ಹಣ ಬೇಕಾದರೆ ಡೆಬಿಟ್ ಕಾರ್ಡು, ಮತ್ತು ಚೆಕ್ ಮೂಲಕ ಹಣ ಡ್ರಾ ಮಾಡಬೇಕಾಗುತ್ತದೆ. ಆದ್ದರಿಂದ ಹೆಬ್ರಿ ಬಸ್ಸು ನಿಲ್ಲಾಣದಲ್ಲಿ ಇಂಡಿಯಾ ಒನ್ ಎಟಿಎಮ್ ಇದ್ದರೆ ಜನರಿಗೆ ಸಹಾಯ ಆಗುತ್ತದೆ ಎಂಬ ಅಗ್ರಹ ವ್ಯಕ್ತವಾಗಿದೆ.