ಹೊಸದುರ್ಗದಲ್ಲಿ ಅತೀ ದೊಡ್ಡ ದೇಗುಲ ಉದ್ಘಾಟನೆ
– ಶನೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ, ಕಳಸಾರೋಹಣ
– ಸಾವಿರಾರು ಭಕ್ತರ ಆಗಮನ: ಸ್ವಾಮೀಜಿಗಳ ಸಮಾಗಮ
NAMMUR EXPRESS NEWS
ಹೊಸದುರ್ಗ: ರಾಜ್ಯದಲ್ಲಿ ಅತಿ ದೊಡ್ಡ ಮೂರನೇ ದೇವಾಲಯ ಶನೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಭಾಗವಹಿಸಿ , ಸಂಸ್ಕಾರಯುತ ಕಾರ್ಯಗಳನ್ನು ಮಾಡಿದರು. ಹೆಚ್ಚಾಗಿ ಯುವ ಜನತೆ ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆಂದು ಬೆಂಗಳೂರಿನ ಮಹರ್ಷಿ ಮಂದಿರ ನವರತ್ನ ಅಗ್ರಹಾರದ ಆನಂದ್ ಗುರೂಜಿ ಸಂತಸ ವ್ಯಕ್ತಪಡಿಸಿದರು.
ನಗರದ ಎಪಿಎಂಸಿ ಮುಂಭಾಗ ನಿರ್ಮಿಸಿರುವ ನೂತನ ಶನೇಶ್ವರ ಸ್ವಾಮಿ ದೇವಾಲಯದ ಪ್ರಾರಂಭೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಶನೇಶ್ವರ ಸ್ವಾಮಿಗೆ ಭಕ್ತರ ಸಂಖ್ಯೆ ಹೆಚ್ಚಾಗಲಿದೆ, ಆ ಶಕ್ತಿ ಗರ್ಭಗುಡಿಯಲ್ಲಿದೆ. ತಾಲ್ಲೂಕಿನ ಬೆಲಗೂರು ಅನ್ನದಾಸೋಹಕ್ಕೆ ಪ್ರಖ್ಯಾತಿ ಪಡೆದಿದೆ. ಬಿಂದು ಮಾಧವ ಶರ್ಮ ಸ್ವಾಮೀಜಿ ಅವರ ಪ್ರೀತಿಗೆ ಪ್ರತಿಯೊಬ್ಬರು ತಲೆ ಬಾಗಲೇಬೇಕು. ನನಗೆ ಪ್ರಥಮವಾಗಿ ಬೆಳ್ಳಿ ಕಿರೀಟ ಧಾರಣೆ ಮಾಡಿದ್ದು ಅವರೇ, ಎಂದು ನೆನಪು ಮಾಡಿಕೊಂಡರು.
151 ಕುಂಭಮೇಳ, ವಿವಿಧ ಕಲಾತಂಡಗಳೊಂದಿಗೆ ಆನಂದ ಗುರೂಜಿ ಅವರಿಗೆ ಸ್ವಾಗತ ಕೋರಲಾಯಿತು. ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆ ಶನೇಶ್ವರ ಸ್ವಾಮಿ ದೇವಾಲಯದವರೆಗೂ ಸಾಗಿತು. ಶನೇಶ್ವರ ಸ್ವಾಮಿ, ನವಗ್ರಹ, ಈಶ್ವರ, ಪಾರ್ವತಿ, ಗಣೇಶ ವಿಗ್ರಹಗಳ ಮೂರ್ತಿ ಪ್ರತಿಷ್ಠಾಪನೆ ನೇರವೇರಿತು. ನಂತರ ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಳಸ ಪ್ರತಿಷ್ಠಾಪನೆ ನೇರವೇರಿಸಿದರು. ಎಡೆಯೂರಿನ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟದ ಹಾಲುಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬೆಲಗೂರಿನ ಮಾರುತಿ ಪೀಠದ ವಿಜಯ ಮಾರುತಿ ಶರ್ಮಾ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದೀಪುರದ ಹಿರೇಮಠ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಕೆ. ಬಿದರೆಯ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಹಣ್ಣೆಯ ಶ್ರೀಶೈಲ ಶಾಖಾಮಠದ ಅಭಿನವ ಮರುಳಸಿದ್ದ ಪಂಡಿತಾರಾಧ್ಯ ಸ್ವಾಮೀಜಿ, ಚಿತ್ರದುರ್ಗದ ಗೋವಿಂದ ಸ್ವಾಮೀಜಿ, ವಿಸ್ಮಯ ಟ್ರಸ್ಟ್ ಅಧ್ಯಕ್ಷ ಅನಂತ್ ಜೀ, ಗುರು ಶನೇಶ್ವರ ಸ್ವಾಮಿ ಭಕ್ತ ಮಂಡಳಿಯ ಅಧ್ಯಕ್ಷ ಸಿ. ಪ್ರಕಾಶ್, ಕಾರ್ಯದರ್ಶಿ ರಾಜಣ್ಣ, ಖಜಾಂಚಿ ಡಿ.ಟಿ. ಶಿವಲಿಂಗಪ್ಪ, ಉಪಾಧ್ಯಕ್ಷ ಸುಬ್ರಮಣ್ಯ ಶೆಟ್ರು, ಪದಾಧಿಕಾರಿಗಳಾದ ಕುಮಾರಸ್ವಾಮಿ, ಹೆಚ್. ಎನ್ ಮಂಜುನಾಥ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮಂಜುನಾಥ್, ಕಾರೇಹಳ್ಳಿ ಜಯಣ್ಣ, ನಾಯಿಗೆರೆ ಚಂದ್ರಶೇಖರ್, ಸತೀಶ್, ಅನಂತ್ ಜೀ, ವಸಂತ್ ಕುಮಾರ್, ಶೈಲಜಾ, ಪಾರ್ವತಮ್ಮ ಹಾಲಪ್ಪ, ಅನಿತಾ ರಾಜೇಶ್, ವೃಷಭೇಂದ್ರ ಮೂರ್ತಿ, ಸುಬ್ಬಭೋವಿ, ನವೀನ್ ಕುಮಾರ್, ಆಗ್ರೋ ಶಿವಣ್ಣ, ದೀಪಿಕಾ ಸತೀಶ್, ಮಂಜುಳಾ, ಎಸ್.ಕೆ. ಮಂಜುನಾಥ್, ಹೆಬ್ಬಳ್ಳಿ ಮಲ್ಲಿಕಾರ್ಜುನ್, ರವಿಕುಮಾರ್, ಪ್ರದೀಪ್ ಸೇರಿದಂತೆ ಟ್ರಸ್ಟ್ ನ ಸದಸ್ಯರು, ಗಣ್ಯರು ಹಾಗೂ ಸಾರ್ವಜನಿಕರಿದ್ದರು.
ಹೊಸದುರ್ಗದಲ್ಲಿ ಆಯೋಜಿಸಿದ್ದ ಶನೇಶ್ವರ ಸ್ವಾಮಿ ದೇವಾಲಯದ ಪ್ರಾರಂಭೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಮಠಾಧೀಶರು.