ಒಲಿಂಪಿಕ್ಸಲ್ಲಿ ಅಮೇರಿಕಾ ಮತ್ತೆ ಚಾಂಪಿಯನ್!
– ಅಮೆರಿಕಕ್ಕೆ ಅಗ್ರಸ್ಥಾನ; ಚೀನಾಕ್ಕೆ ಎರಡನೇ ಸ್ಥಾನ
– ಜಪಾನ್ 3, ಆಸ್ಟ್ರೇಲಿಯಾ 4ನೇ ಸ್ಥಾನ, ಪಾಕ್ ಕೂಡ ಚಿನ್ನ ಗೆದ್ದಿತು!
– ಭಾರತಕ್ಕೆ 6 ಪದಕ: 71ನೇ ಸ್ಥಾನಕ್ಕೆ ತೃಪ್ತಿ
NAMMUR EXPRESS NEWS
ಪ್ಯಾರಿಸ್ ಒಲಂಪಿಕ್ಸ್ ಅಮೆರಿಕ 40 ಚಿನ್ನ, 44 ಬೆಳ್ಳಿ ಮತ್ತು 42 ಕಂಚಿನ ಪದಕಗಳು ಸೇರಿದಂತೆ 126 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಮತ್ತೊಂದೆಡೆ, ಚೀನಾ 40 ಚಿನ್ನದ ಪದಕಗಳು ಸೇರಿದಂತೆ 91 ಪದಕಗಳೊಂದಿಗೆ ಕ್ರೀಡಾಕೂಟವನ್ನು ಕೊನೆಗೊಳಿಸಿತು. 2008ರಲ್ಲಿ ಬೀಜಿಂಗ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಚೀನಾ 48 ಚಿನ್ನದ ಪದಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತ್ತು. ಸ್ಪರ್ಧೆಗಳು ಭಾನುವಾರ ಸಂಜೆಯ ವೇಳೆಗೆ ಮುಕ್ತಾಯಗೊಂಡಿದ್ದು ಅಮೆರಿಕ ಅಮೆರಿಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸಾಂಪ್ರದಾಯಿಕ ಎದುರಾಳಿ ಚೀನಾವನ್ನು ಕೂದಲೆಳೆಯ ಅಂತರದಿಂದ ಹಿಂದಿಕ್ಕಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಫ್ರಾನ್ಸ್ ನಡುವಿನ ಮಹಿಳಾ ಬ್ಯಾಸ್ಕೆಟ್ಬಾಲ್ ಒಲಿಂಪಿಕ್ಸ್ನ ಕೊನೇ ಸ್ಪರ್ಧೆಯಾಗಿತ್ತು. ಅಲ್ಲಿ ಅಮೆರಿಕ ಚಿನ್ನ ಗೆದ್ದುಕೊಂಡಿತ್ತು. ಅಲ್ಲಿ ತನಕ ಚೀನಾ 40 ಚಿನ್ನದೊಂದಿಗೆ ಮೊದಲ ಸ್ಥಾನದಲ್ಲಿತ್ತು.. ಅಮೆರಿಕ ಬಾಸ್ಕೆಟ್ಬಾಲ್ ಗೆಲ್ಲುವುದರೊಂದಿಗೆ ಅಮೆರಿಕ 40 ಚಿನ್ನ ಗೆದ್ದುಕೊಂಡಿತು. ಜತೆಗೆ ಪದಕ ಪಟ್ಟಿಯಲ್ಲಿ ಬೆಳ್ಳಿ ಹಾಗೂ ಕಂಚಿನ ಸಹಾಯದಿಂದ ಅಗ್ರಸ್ಥಾನಕ್ಕೆ ಏರಿತು. ಈ ಮೂಲಕ ಅಮೆರಿಕನ್ನರು ಸತತ ನಾಲ್ಕನೇ ಬಾರಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿತು.
ಡೈವಿಂಗ್, ಕಲಾತ್ಮಕ ಈಜು ಮತ್ತು ಟೇಬಲ್ ಟೆನಿಸ್ ಮತ್ತು ವೇಟ್ ಲಿಫ್ಟಿಂಗ್ ಸೇರಿದಂತೆ ಪೂಲ್ ಸ್ಪರ್ಧೆಗಳಲ್ಲಿ ಚೀನಾ ಪ್ರಾಬಲ್ಯ ಸಾಧಿಸಿದರೆ, ಯುಎಸ್ಎ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ 14 ಚಿನ್ನದ ಪದಕಗಳು, 11 ಬೆಳ್ಳಿ ಪದಕಗಳು ಮತ್ತು 9 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ತನ್ನ ಶಕ್ತಿ ಪ್ರದರ್ಶಿಸಿತು. ಇಲ್ಲಿ ಅಮೆರಿಕನ್ನರು ಎಂಟು ಚಿನ್ನದ ಪದಕಗಳು ಸೇರಿದಂತೆ ಒಟ್ಟು 28 ಪದಕಗಳನ್ನು ಗೆದ್ದರು.
ಭಾರತಕ್ಕೆ 71ನೇ ಸ್ಥಾನ
ಭಾರತ 5 ಕಂಚು, 1 ಬೆಳ್ಳಿ ಸೇರಿದಂತೆ ಒಟ್ಟು 6 ಪದಕಗಳೊಂದಿಗೆ 71ನೇ ಸ್ಥಾನದಲ್ಲಿದೆ. ಮಹಿಳೆಯರ 50 ಕೆ.ಜಿ ಕುಸ್ತಿಯ ಫೈನಲ್ ತಲುಪಿದ ವಿನೇಶ್ ಫೋಗಟ್ ತನ್ನ ಅನರ್ಹತೆಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ (ಸಿಎಎಸ್) ಪ್ರಶ್ನಿಸಿದ್ದರಿಂದ ಭಾರತಕ್ಕೆ ನಿರ್ಧಾರ ಪೂರಕವಾಗಿ ಬಂದರೆ ತನ್ನ ಪಟ್ಟಿಗೆ ಇನ್ನೂ ಒಂದು ಪದಕ ಸೇರಿಸಬಹುದು. ಫೈನಲ್ ಪಂದ್ಯದ ವೇಳೆ 100 ಗ್ರಾಂ ತೂಕ ಹೊಂದಿದ್ದಕ್ಕಾಗಿ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು.
ಮನು ಬಾಕರ್ 2 ಕಂಚು, ನೀರಜ್ ಚೋಪ್ರಾ ಒಂದು ಬೆಳ್ಳಿ, ಸ್ವಪ್ನಲ್ ಕೌಶಲೆ ಹಾಗೂ ಸರಬ್ಜಿಟ್ ಸಿಂಗ್, ಅಮನ್ ಶೆರಾವತ್ ಒಂದು ಕಂಚು, ಹಾಕಿ ತಂಡ ಕಂಚು ಗೆದ್ದಿತು.
ಭಾರತಕ್ಕಿಂತ ಪಾಕ್ ಈ ಬಾರಿ ಮೇಲೆ!
ಪಾಕಿಸ್ತಾನ 44 ವರ್ಷಗಳ ಬಳಿಕ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದು 62ನೇ ಸ್ಥಾನದಲ್ಲಿದೆ. ಪುರುಷರ ಜಾವೆಲಿನ್ ಫೈನಲ್ನಲ್ಲಿ ಅರ್ಷದ್ ನದೀಮ್ ಮೊದಲ ಸ್ಥಾನ ಪಡೆದರು.
ಜಪಾನ್ 20 ಚಿನ್ನ ಸೇರಿದಂತೆ 45 ಪದಕಗಳೊಂದಿಗೆ ಮೂರನೇ ಸ್ಥಾನ ಪಡೆಯಿತು. ಟೋಕಿಯೊ ಒಲಿಂಪಿಕ್ಸ್ನಲ್ಲಿ ಜಪಾನ್ 27 ಚಿನ್ನದ ಪದಕಗಳೊಂದಿಗೆ ಮೂರನೇ ಸ್ಥಾನ ಪಡೆದಿತ್ತು.
ಗ್ರೇಟ್ ಬ್ರಿಟನ್ 14 ಚಿನ್ನದ ಪದಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 18 ಚಿನ್ನದ ಪದಕಗಳನ್ನು ಗೆದ್ದು ಅಗ್ರ ನಾಲ್ಕು ಸ್ಥಾನಗಳನ್ನು ಗಳಿಸಿದೆ. ಆತಿಥೇಯ ಫ್ರಾನ್ಸ್ 16 ಚಿನ್ನದ ಪದಕಗಳೊಂದಿಗೆ ಅಗ್ರ 5ನೇ ಸ್ಥಾನ ಪಡೆದಿದೆ.