ಕುಡ್ಲಂಗಿಪ್ಪ ಕುಂದಾಪ್ರದವರ ಸಂಭ್ರಮ!
– ಗ್ರಾಮೀಣ ಕ್ರೀಡಾಕೂಟ: ಸಾಂಸ್ಕೃತಿಕ ಕಾರ್ಯಕ್ರಮದ ಝಲಕ್
– ಮಂಗಳೂರಿನಲ್ಲಿ ಕುಂದಾಪುರ ಕನ್ನಡಿಗರ ಸಮ್ಮಿಲನ
NAMMUR EXPRESS NEWS
ಮಂಗಳೂರು: ಹಗ್ಗಜಗ್ಗಾಟ ಸೇರಿದಂತೆ
ಗ್ರಾಮೀಣ ಕ್ರೀಡೆಗಳಲ್ಲಿ ಜಿದ್ದಾಜಿದ್ದಿಯ ಹೋರಾಟದ ರೋಮಾಂಚನ, ವೇದಿ ಕೆಯಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಗಳ ಖುಷಿ, ಹೆಂಗ್ಸ್ ಪಂಚೇತಿ ಮತ್ತಿತರ ಹಾಸ್ಯಭರಿತ ಗೋಷ್ಠಿಗಳ ಕಚಗುಳಿ, ಎಲ್ಲೆಲ್ಲೂ ಕುಂದಾಪ್ರ ಕನ್ನಡದ ರಸಗವಳ…
ಕುಡಂಗಿಪ್ಪ ಕುಂದಾಪ್ರದವ್ (ಮಂಗಳೂರಿನಲ್ಲಿರುವ ಕುಂದಾಪುರ ದವರು) ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಅಂಗವಾಗಿ ನಗರದ ರಾಮಕೃಷ್ಣ ವಿದ್ಯಾಸಂಸ್ಥೆಯ ಮೈದಾನ ದಲ್ಲಿ ಭಾನುವಾರ ಆಯೋಜಿಸಿದ್ದ ಕುಂದಾಪ್ರ ಕನ್ನಡ ಹಬ್ಬದಲ್ಲಿ ಒಂದು ಪ್ರದೇಶದ ವಿಶಿಷ್ಟ ಭಾಷೆ, ಸಂಸ್ಕೃತಿಯನ್ನು ಅನಾವರಣಗೊಳಿಸಿತು.
ಇದ್ ಭಾಷಿ ಅಲ್ಲ, ಬದ್ ಎಂಬ ಘೋಷವಾಕ್ಯದಡಿ ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣ ಕ್ರೀಡೆ, ಕುಂದಾಪುರದ ಆಹಾರ ಇತ್ಯಾದಿ ಇತ್ತು. -ಆಸಾಡಿ ಒಡ್ರಂಗ್ ಒಂದಿನ ಒಟ್ಟಾಪ’ ಎಂದು ಹೇಳುತ್ತಲೇ ಒಟ್ಟುಗೂಡಿದ ಕುಂದಾಪುರದವರು ಮಳಿ ಅಂದ್ರೆ, ಒಗಿ ಎತ್ತಲೇ ಎಂದು ಹೇಳಿದ್ದರಿಂದಲೋ ಏನೋ ಮಳೆ ಬಿಡುವು ಕೊಟ್ಟಿತ್ತು. ಮೈದಾನದಲ್ಲಿ ಆಟೋಟ ಮುಗಿದ ನಂತರ ಒಳಗೆ ಸಾಂಸ್ಕೃತಿಕ-ಹಾಸ್ಯ ವೈಭವ ಇತ್ತು. ‘ಹೆಂಗ್ಸ್ ಪಂಚೇತಿ’ಗಾಗಿಕುಂದಾಪ್ರ ಕನ್ನಡ ಹಬ್ಬದಲ್ಲಿ ಮುದ ನೀಡಿದ ಗ್ರಾಮೀಣ ಕ್ರೀಡೆಕಟ್ಟೆ ಮೇಲೆ ಕುಳಿತ ಮೂವರು ಪುರುಷರು ಮಾತುಕತೆಯ ಮೂಲಕ ನಗೆಗಡಲು ಉಕ್ಕಿಸಿದರು.
ಬೆಳಿಗ್ಗೆ ಹೆಸ್ ಬಾಯ್, ಉದ್ದಿನ ಇಡ್ಲಿ, ಉದ್ದಿನ ವಡಿ ಚಟ್ಟಿ ಚಿಕ್ಕು ಶೀರಾ ಮತ್ತು ಚಹಾ ಸೇವಿಸಿ ಆರಂಭಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರು ಮಧ್ಯಾಹ್ನ ಕೊಚ್ಚಕ್ಕಿ ಗಂಜಿ, ಉಪ್ಪಿನ್ನುಡಿ, ಮಾವಿನಕಾಯಿ ಚಟ್ಟಿ, ಕೋಳಿ ತಾಳ್, ಸುವರ್ಣಗಡ್ಡೆ ಸುಕ್ಕ ಇತ್ಯಾದಿ ಸವಿದರು. ಬಯ್ಯಾಪತಿಗೆ (ಸಂಜೆ) ಸುಕ್ಕಿನುಂಡೆ, ಚಟ್ಟಂಬಡೆ, ಚಹಾ, ಕಾಫಿ ಇತ್ತು. ರಾತ್ರಿಯೂ ಭರ್ಜರಿ ಊಟ ಇತ್ತು. ಕೋಳಿ ಗಸಿ, ಹಾಗಲ್ಕಾಯಿ, ಅಮ್ಮಿಕಾಯಿ ಗೊಜ್ಜು ವಿಶೇಷವಾಗಿತ್ತು.
ಕೋರ ಕಮಿಟಿ ಸದಸ್ಯರು
G. K ಶೆಟ್ಟಿ. ಮಮತಾ ಜಿ ಐತಾಳ್.ಆದರ್ಶ್ ಶೆಟ್ಟಿ ಗಿಳಿ ಯಾರು.
ವಿವೇಕ್.ಮಾಲಾ ಸಂತೋಷ್ ಶೆಟ್ಟಿ.Dr ಅಣ್ಣಯ್ಯ ಕುಲಾಲ್.C.A SS ನಾಯಕ್.C. A ಶಾಂತರಾಮ್ ಶೆಟ್ಟಿ.
ದಯಾನಂದ ಶೆಟ್ಟಿ.ಸಂತೋಷ್ ಶೆಟ್ಟಿ ಐರೋಡಿ.ಸಂತೋಷ್ ಶೆಟ್ಟಿ.
ಸಂತೋಷ್ ಶೆಟ್ಟಿ. ಬಾಲಕೃಷ್ಣ ಶೆಟ್ಟಿ ಕೆಂಚನೂರು.ಬಾಲಕೃಷ್ಣ ಶೆಟ್ಟಿ ಸಿರಿಯಾರ್. ಅವಿನಾಶ್ ಶೆಟ್ಟಿ.ಮಹಾಬಲ ಕುಲಾಲ್. ಅಶ್ವತ್ಥಾಮ ಹೆಗಡೆ.
B ಶೇಖರ್ ಶೆಟ್ಟಿ. ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ.
ದೇವು ಆನೆಹಳ್ಳಿ. ಶರತ್ ಆಚಾರ್ಯ.Dr ಪ್ರಮೋದ್ ಹೆಗಡೆ.Dr ರವೀಶ್ ತುಂಗ.
Dr ಪ್ರತಿಭಾ ರೈ.Dr ವಸಂತ್ ಶೆಟ್ಟಿ. ಕರುಣಾಕರ್ ಬೆಳ್ಳೂರು.ನಾಗರಾಜ್.ನರಸಿಂಹ ಭಟ್.
ಲಿಖಿತಾ ಶೆಟ್ಟಿ. ಪಾಂಡುರಂಗ ಶೆಟ್ಟಿ.R J ಪ್ರಸನ್ನ.R. J ನಯನ.ಉತ್ಸವ ಶೆಟ್ಟಿ. ಮಹೇಶ್.ಗಾವಳ್ಳಿ ಸುರೇಶ್ ಶೆಟ್ಟಿ
ಸಂಘಟಕ ಗೋಪಾಲಕೃಷ್ಣ ಶೆಟ್ಟಿ ವಾಟ್ಸ್ ಆ್ಯಪ್ ಗುಂಪಿನ ಮೂಲಕ ಆರಂಭಗೊಂಡ ಮಂಗಳೂರಿನಲ್ಲಿರುವ ಕುಂದಾಪುರದವರ ಬಳಗ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ವಿವಿಧ ಕಾರ್ಯಗಳಿಂದ ಕುಂದಾಪ್ರದಿಂದ ಬಂದಿರುವ ನಮಗೆ ತುಳುನಾಡು ಅನ್ನ ನೀಡುತ್ತಿದೆ’ ಎಂದರು.
‘ಗುಂಪಿನಲ್ಲಿರುವವರು 2019ರಲ್ಲಿ ಬೆಳ್ತಂಗಡಿ ತಾಲ್ಲೂಕಿನ ನೆರೆ ಪರಿಹಾರಕ್ಕೆ ₹6 ಲಕ್ಷ ಮೊತ್ತ ಮತ್ತು ವಸ್ತುಗಳನ್ನು ಸಂಗ್ರಹಿಸಿ ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಿದೆ. ರಕ್ತದಾನದಲ್ಲೂ ಗುಂಪಿನವರು ಮುಂಪಕ್ತಿಯಲ್ಲಿದ್ದಾರೆ. ವಾಟ್ಸ್ ಆ್ಯಪ್ ಗುಂಪಿನಲ್ಲಿ 600 ಮಂದಿ
ಇದ್ದಾರೆ’ ಎಂದು ಅವರು ತಿಳಿಸಿದರು.