ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಬ್ರಹ್ಮ ಯೋಗದಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ?
NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?
** ಮೇಷ ರಾಶಿ :
ಮನೆಯ ವಾತಾವರಣ ಶಾಂತಿಯಿಂದ ಕೂಡಿರಲಿದೆ. ಕೆಲಸದ ಸ್ಥಳದಲ್ಲಿನ ಸಮಸ್ಯೆಗಳು ದೂರವಾಗುವುದು. ಮಕ್ಕಳ ಪ್ರಗತಿಯನ್ನು ನೋಡಿ ಮನಸ್ಸು ಸಂತೋಷವಾಗಿರುವುದು. ಈ ದಿನ ಹಠಾತ್ ಆಗಿ ಕೆಲ ಕೆಲಸಗಳನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ನಿಮ್ಮ ದಿನಚರಿಯಲ್ಲಿ ಬದಲಾವಣೆ ಮಾಡಬೇಕಾಗುವುದು. ನೀವು ಆರ್ಥಿಕ ಸಮಸ್ಯೆಯಿಂದ ಚಿಂತೆಗೊಳಗಾಗಿದ್ದರೆ ಈ ದಿನ ನಿಮಗೆ ಅದರಿಂದ ಮುಕ್ತಿ ದೊರಕುವುದು.
** ವೃಷಭ ರಾಶಿ :
ಒಡಹುಟ್ಟಿದವರ ಸಂಪೂರ್ಣ ಬೆಂಬಲ ಪಡೆಯುವುದರಿಂದ ನಿಧಾನವಾಗಿ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಸ್ನೇಹಿತರೊಂದಿಗೆ ದೂರ ಪ್ರಯಾಣ ಮಾಡುವ ಯೋಜನೆಯನ್ನು ಮಾಡುವಿರಿ. ಆದರೆ ಇದರಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಈ ದಿನ ಜಾಗರೂಕರಾಗಿರಿ, ಇಲ್ಲದಿದ್ದರೆ ಶತ್ರುಗಳ ಕಾಟ ಎದುರಾಗಬಹುದು.
** ಮಿಥುನ ರಾಶಿ
ಕೆಲಸದಲ್ಲಿ ಅತ್ಯಂತ ಹೆಚ್ಚಿನ ಪ್ರಗತಿಯನ್ನು ಹೊಂದುವರು. ಇದರಿಂದ ನಿಮ್ಮ ಶತ್ರುಗಳ ಸಂಖ್ಯೆ ಹೆಚ್ಚಾಗುವುದು. ಈ ದಿನ ನೀವು ಮನೋರಂಜನೆಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಇದರಿಂದ ನಿಮ್ಮ ಚಿಂತೆ ಹೆಚ್ಚಾಗುವುದು. ವ್ಯಾಪಾರದಲ್ಲಿ ಈ ದಿನ ನೀವು ಹೊಸ ಹೊಸ ಅವಕಾಶಗಳನ್ನು ಪಡೆಯುವಿರಿ. ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ನಿಮಗೆ ಹೆಚ್ಚಿನ ಲಾಭವಾಗುವುದು.
** ಕರ್ಕಾಟಕ ರಾಶಿ :
ಯಾವುದಾದರೂ ವಿಚಾರಗಳು ನ್ಯಾಯಾಲಯದಲ್ಲಿ ಇದ್ದರೆ, ಇಂದು ತೀರ್ಪು ನಿಮ್ಮ ಪರವಾಗಿ ಬರಬಹುದು. ನೀವು ಹೂಡಿಕೆ ಮಾಡಬೇಕೆಂದಿದ್ದರೆ ಈ ದಿನ ಉತ್ತಮವಾಗಿರುತ್ತದೆ. ಈ ರಾಶಿಗೆ ಸೇರಿದ ವಿದ್ಯಾರ್ಥಿಗಳ ಜೀವನದಲ್ಲಿನ ಆರ್ಥಿಕ ಸಮಸ್ಯೆಗಳು ದೂರವಾಗುವುದು ಮತ್ತು ಉನ್ನತ ಶಿಕ್ಷಣಕ್ಕಾಗಿ ಈ ಸಮಯ ಉತ್ತಮವಾಗಿರಲಿದೆ. ಮನೆ ಮತ್ತು ಕೆಲಸದಲ್ಲಿ ಸಮತೋಲನ ಕಾಪಾಡಿಕೊಳ್ಳುವಲ್ಲಿ ನೀವು ಯಶಸ್ಸು ಗಳಿಸುವಿರಿ.
** ಸಿಂಹ ರಾಶಿ :
ವ್ಯಾಪಾರದಲ್ಲಿ ಇಂದು ದೊಡ್ಡ ನಷ್ಟವಾಗುವ ಸಂಭವವಿದೆ. ಹಾಗಾಗಿ ಎಚ್ಚರದಿಂದಿರಿ. ನೀವು ಪ್ರಯಾಣಿಸಬೇಕೆಂದಿದ್ದರೆ ಈ ದಿನ ಉತ್ತಮವಾಗಿರಲಿದೆ. ಇಂದು ನಿಮ್ಮ ಸಂಗಾತಿಯೊಂದಿಗೆ ಭವಿಷ್ಯದ ಬಗ್ಗೆ ಚರ್ಚೆಯನ್ನು ನಡೆಸುವಿರಿ. ನೀವು ನಿಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ಸುಧಾರಣೆಯನ್ನು ಬಯಸುವುದಾದರೆ, ಇಂದು ನಿಮ್ಮ ಸೋಮಾರಿತನವನ್ನು ದೂರ ಮಾಡಿ ಮತ್ತು ಕೆಲಸದ ಮೇಲೆ ಹೆಚ್ಚಿನ ಗಮನ ಹರಿಸುವುದು ಮುಖ್ಯ.
** ಕನ್ಯಾ ರಾಶಿ :
ಸರ್ಕಾರಿ ಕೆಲಸಗಳು ಆಶ್ಚರ್ಯದಾಯಕ ಪರಿಣಾಮವನ್ನು ಪಡೆಯುವುದರಿಂದ ನೀವು ಉತ್ಸಾಹದಿಂದಿರುವಿರಿ. ಆದರೆ ಭವಿಷ್ಯದಲ್ಲಿ ಲಾಭ ಪಡೆಯುವುದಕ್ಕಾಗಿ ಅಧಿಕಾರಿಗಳಿಂದ ದೂರವಿರಿ, ಆಗ ನಿಮಗೆ ಲಾಭ ದೊರಕುವುದು. ನೀವು ಹೊಸ ವ್ಯಾಪಾರವನ್ನು ಶುರು ಮಾಡಬೇಕೆಂದಿದ್ದರೆ, ನಿಮ್ಮ ಮನಸ್ಸು ಉತ್ಸಾಹದಾಯಕವಾಗಿರುವುದು. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.
** ತುಲಾ ರಾಶಿ :
ಇಂದು ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಬೇಕಾಗಬಹುದು. ಇದರಿಂದ ಭವಿಷ್ಯದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವಿರಿ. ಮನೆಯಲ್ಲಿ ಇಂದು ಒಂದೇ ಸಮಯದಲ್ಲಿ ಹೆಚ್ಚಿನ ಕೆಲಸವನ್ನು ಮಾಡಬೇಕಾಗುತ್ತದೆ. ಆದರೆ ನಿಮ್ಮ ಸಾಹಸ ಮತ್ತು ಬುದ್ಧಿವಂತಿಕೆಯಿಂದ ನೀವು ಈ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸುವಿರಿ. ವಿದೇಶದಲ್ಲಿ ಓದುತ್ತಿರುವ ತುಲಾ ರಾಶಿಗೆ ಸೇರಿದ ವಿದ್ಯಾರ್ಥಿಗಳು ಈ ದಿನ ಶುಭ ಸುದ್ದಿಯನ್ನು ಪಡೆಯುವರು.
** ವೃಶ್ಚಿಕ ರಾಶಿ :
ಅಪೂರ್ಣವಾದ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುವುದು. ಆದರೆ ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಯಾವುದಾದರೂ ಸಮಸ್ಯೆ ಎದುರಾದರೆ ತಕ್ಷಣ ವೈದ್ಯರನ್ನು ಭೇಟಿಯಾಗಿರಿ. ಉನ್ನತ ಅಧಿಕಾರಿಗಳ ಬೆಂಬಲದಿಂದ ಹಳೆಯ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಇಂದು ಯಾವುದೇ ರೀತಿಯ ನಿರಾಶೆಯ ವಿಷಯಗಳನ್ನು ಯೋಚಿಸಬೇಡಿ. ಸಮಯ ಬಹಳ ಅನುಕೂಲಕರವಾಗಿರಲಿದೆ.
** ಧನಸ್ಸು ರಾಶಿ :
ಹೊಸ ಜನರ ಭೇಟಿ ಆಗುವರು ಅಥವಾ ವ್ಯಾಪಾರದಲ್ಲಿ ಹೊಸ ಅವಕಾಶಗಳನ್ನು ಪಡೆಯುವರು ಇದರಿಂದ ನಿಮಗೆ ಹೆಚ್ಚಿನ ಲಾಭವಾಗಲಿದೆ. ಇಂದು ನಿಮ್ಮ ಗಂಡನ ಮನೆಯ ಯಾರಾದರೂ ಸಾಲವನ್ನು ಕೇಳಿದರೆ, ಎಚ್ಚರಿಕೆಯಿಂದ ನೀಡಿ. ಅದು ವಾಪಸ್ಸು ನಿಮ್ಮ ಕೈ ಸೇರುವ ಸಂಭವ ಕಡಿಮೆ ಇದೆ. ಈ ದಿನ ನಿಮ್ಮ ಕುಟುಂಬ ಜೀವನ ಉತ್ತಮವಾಗಿರುವುದು.
** ಮಕರ ರಾಶಿ :
ಪಿತ್ರಾರ್ಜಿತ ಆಸ್ತಿ ಲಭಿಸುವ ಯೋಗವಿದೆ. ನೀವು ವ್ಯಾಪಾರಕ್ಕೆ ಸಂಬಂಧಿಸಿದಂತೆ ಯಾರಿಂದಲಾದರೂ ಸಾಲ ಪಡೆದಿದ್ದರೆ, ಅದನ್ನು ವಾಪಸ್ಸು ನೀಡಲು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಇಂದು ನೀವು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಗೌರವ, ಖ್ಯಾತಿ ಹೆಚ್ಚಾಗಬಹುದು. ಇಂದು ನಿಮ್ಮ ತಾಯಿಯ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ.
** ಕುಂಭ ರಾಶಿ :
ಇಂದು ಭವಿಷ್ಯಕ್ಕಾಗಿ ಉತ್ತಮ ಯೋಜನೆಗಳನ್ನು ರೂಪಿಸುವ ಅವಕಾಶವನ್ನು ಪಡೆಯುವರು. ಇಂದು ಸರ್ಕಾರಿ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುವುದರಿಂದ ಹೆಚ್ಚಿನ ಲಾಭವನ್ನು ಗಳಿಸುವಿರಿ. ಇಂದು ನಿಮ್ಮ ಭೌಧಿಕ ಮತ್ತು ತಾರ್ಕಿಕ ಸಾಮರ್ಥ್ಯ ಹೆಚ್ಚಾಗುವುದು. ಇದರಿಂದ ಭವಿಷ್ಯದಲ್ಲಿ ಹೆಚ್ಚಿನ ಲಾಭ ಪಡೆಯುವಿರಿ. ಮನೆಯಲ್ಲಿ ಒತ್ತಡದ ವಾತಾವರಣ ಇರುವುದು. ಸಂಗಾತಿ ನಿಮ್ಮಿಂದ ಕೋಪಕ್ಕೆ ಒಳಗಾಗಬಹುದು.
** ಮೀನ ರಾಶಿ :
ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಪಡೆಯುವರು. ಇದರಿಂದ ನಿಮಗೆ ಹೆಚ್ಚಿನ ಲಾಭವಾಗಲಿದೆ. ಈ ರಾಶಿಗೆ ಸೇರಿದ ವಿದ್ಯಾರ್ಥಿಗಳಿಗೆ ಶಿಕ್ಷಕರ ಸಂಪೂರ್ಣ ಬೆಂಬಲ ಲಭಿಸುವುದು. ಇದರಿಂದ ಭವಿಷ್ಯದ ಹೆಚ್ಚಿನ ಯಶಸ್ಸನ್ನು ಗಳಿಸುವಿರಿ. ಕೆಲಸದ ಸ್ಥಳದಲ್ಲಿ ಶತ್ರುಗಳಿಂದ ಎಚ್ಚರದಿಂದಿರಿ, ಇಲ್ಲದಿದ್ದರೆ ನಿಮ್ಮ ಕೆಲಸಗಳು ಅಪೂರ್ಣಗೊಳ್ಳಬಹುದು. ಮನೆಯ ಹಿರಿಯ ಸದಸ್ಯರೊಂದಿಗೆ ನಿಮಗೆ ಮನಸ್ತಾಪ ಉಂಟಾಗಲಿದೆ.