ವರಮಹಾಲಕ್ಷ್ಮೀ ಹಬ್ಬ: ಲಕ್ಷ್ಮಿಗೆ ದುಡ್ಡಿನ ಅಲಂಕಾರ!
– ಗರಿ ಗರಿ ನೋಟುಗಳಿಂದ ಬನಶಂಕರಿ ದೇವಿಗೆ ಅಲಂಕಾರ
– ಲಕ್ಷ್ಮಿಗೆ ವಿವಿಧ ಸೀರೆ ಉಡಿಸಿ ಸೇವೆ: ಎಲ್ಲೆಲ್ಲೂ ಜನವೋ ಜನ
NAMMUR EXPRESS NEWS
ನಾಡಿನಾದ್ಯಂತ ವರ ಮಹಾಲಕ್ಷ್ಮೀ ಹಬ್ಬದ ಸಂಭ್ರಮ ಮನೆ ಮನಗಳಲ್ಲೂ ಕಳೆಗಟ್ಟಿದೆ. ದೇಗುಲಗಳಂತೂ ಹೂಗಳಿಂದ ಝಗಮಗ ಅಂತಿವೆ.
ಮನೆ ಮನೆಯಲ್ಲೂ ದೇವಿಗೆ ಅಲಂಕರಿಸಿ ಪೂಜೆ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ ಬನಶಂಕರಿ ದೇವಿಗೆ ಮಾಡಿದ್ದ ನೋಟುಗಳ ಅಲಂಕಾರ ಎಲ್ಲರ ಗಮನ ಸೆಳೆದಿದೆ. ದೇವಿಯ ಹಿಂಬದಿ ಹಾಗೂ ಅಕ್ಕಪಕ್ಕ ನೋಟುಗಳಿಂದ ಅಲಂಕಾರ ಮಾಡಿದ್ದು, ಭಕ್ತರು ಬೆಳಗ್ಗೆಯಿಂದಲೇ ದೇಗುಲಕ್ಕೆ ಆಗಮಿಸಿ ದೇವಿಯನ್ನ ಕಣ್ತುಂಬಿಕೊಂಡಿದ್ದಾರೆ. ಬನಶಂಕರಿ ಅಮ್ಮನವರಿಗೆ ಒಂದು ಲಕ್ಷ ರೂ. ಹಣದಿಂದ ವಿಶೇಷ ಅಲಂಕಾರ ಮಾಡಲಾಗಿದೆ. 50, 10 ಮತ್ತು 20 ರೂ ಬಳಸಿಕೊಂಡು ಅಲಂಕಾರ ಮಾಡಿ ಬಳಿಕ ದೇವರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತದಿಗಳು ಆಗಮಿಸುತ್ತಿದ್ದು, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ, ಬಾಗಿನ ಕೊಟ್ಟು ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮಿಸಿದ್ದರೆ.
ವಿಭಿನ್ನ ಸೀರೆಯಲ್ಲಿ ಅಲಂಕಾರ
ವಿವಿಧ ಬಗೆಯ ಸೀರೆಗಳನ್ನು ಉಡಿಸಿ ದೇವಿಗೆ ಅಲಂಕಾರ ಮಾಡಲಾಗುತ್ತಿದೆ. ಸೀರೆ ಅಲಂಕಾರ ಗಮನ ಸೆಳೆದಿದೆ.