ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಇಂದು ಶ್ರಾವಣ ಹುಣ್ಣಿಮೆ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?
NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?
** ಮೇಷ ರಾಶಿ :
ಮೇಷ ರಾಶಿಗೆ ಸೇರಿದ ಜನರು ಬೇರೆಯವರಿಗೆ ಸಹಾಯ ಮಾಡುವುದರಿಂದ ಮಾನಸಿಕ ಶಾಂತಿಯನ್ನು ಹೊಂದುವರು. ಮನೆಯ ಹಿರಿಯ ವ್ಯಕ್ತಿಗಳ ಆಶೀರ್ವಾದವನ್ನು ನೀವು ಇಂದು ಪಡೆಯುವಿರಿ. ಇಂದು ಸಂಜೆ ನಿಮ್ಮ ಮನೆಯ ಯಾವುದಾದರೂ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ಈ ದಿನ ನೀವು ಹೆಚ್ಚಿನ ಓಡಾಟ ಮಾಡಬೇಕಾಗುತ್ತದೆ ಮತ್ತು ಹೆಚ್ಚು ಹಣ ಖರ್ಚಾಗಬಹುದು.
** ವೃಷಭ ರಾಶಿ :
ವೃಷಭ ರಾಶಿಗೆ ಸೇರಿದ ಜನರು ಇಂದು ತಮ್ಮ ಕುಟುಂಬದವರೊಂದಿಗೆ ಸಂತೋಷದ ಸಮಯವನ್ನು ಕಳೆಯುವರು ಮತ್ತು ಈ ದಿನ ನೀವು ಶುಭ ಸಮಾಚಾರವನ್ನು ಪಡೆಯುವ ಯೋಗವಿದೆ. ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದವರಿಗೆ ಈ ದಿನ ಹೆಚ್ಚಿನ ಧನ ಲಾಭವಾಗುವುದು ಹಾಗೂ ನಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಸಂಜೆ ಅತಿಥಿಗಳ ಆಗಮನವಾಗುವುದು ಮತ್ತು ನೀವು ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ನಿಮ್ಮ ಗೌರವ, ಖ್ಯಾತಿ ಹೆಚ್ಚಾಗುವುದು.
** ಮಿಥುನ ರಾಶಿ
ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳ ಆಶೀರ್ವಾದ ಲಭಿಸುವುದು. ಇದರಿಂದಾಗಿ ನಿಮಗೆ ಬಡ್ತಿ ದೊರಕುವ ಯೋಗವಿದೆ. ನೀವು ಈ ದಿನ ಕಾರ್ಯನಿರತರಾಗಿದ್ದರೂ, ನಿಮ್ಮ ಸಂಗಾತಿಗೆ ಸಮಯ ಕೊಡುವಲ್ಲಿ ಯಶಸ್ಸು ಗಳಿಸುವಿರಿ. ಇದರಿಂದಾಗಿ ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಬಲಗೊಳ್ಳುವುದು. ಸಹೋದರರ ಬೆಂಬಲದಿಂದಾಗಿ ನಮ್ಮ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುವುದು. ರಾಜಕೀಯಕ್ಕೆ ಸಂಬಂಧಿಸಿದವರಿಗೆ ಈ ದಿನ ಲಾಭವಾಗಲಿದೆ.
** ಕರ್ಕಾಟಕ ರಾಶಿ :
ಜನರಿಗೆ ಇಂದು ಮನೆಯವರಿಂದ ಹೆಚ್ಚಿನ ಲಾಭವಾಗಲಿದೆ. ನೀವು ಕಳೆದು ಹೋದ ಹಣವನ್ನು ಈ ದಿನ ವಾಪಸ್ಸು ಪಡೆಯುವಿರಿ ಮತ್ತು ನಿಮ್ಮ ಧನ, ಸಂಪತ್ತು ವೃದ್ದಿ ಆಗುವುದು. ಈ ದಿನ ನೀವು ಹೊರಗಿನ ತಿಂಡಿ ತಿನ್ನುವುದನ್ನು ತಪ್ಪಿಸಿ, ಇಲ್ಲದಿದ್ದರೆ ತೊಂದರೆ ಉಂಟಾಗಬಹುದು. ನಿಮ್ಮ ಪ್ರೀತಿಯ ಜೀವನವು ಈ ದಿನ ಉತ್ತಮವಾಗಿರಲಿದೆ. ಮತ್ತು ಉಡುಗೊರೆಯನ್ನು ಪಡೆಯುವ ಯೋಗವಿದೆ.
** ಸಿಂಹ ರಾಶಿ :
ಈ ದಿನದ ಆರಂಭದಲ್ಲಿ ಮಹತ್ವಪೂರ್ಣ ವಿಷಯಗಳಿಗಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗುವುದು. ಆದರೆ ನಿಮ್ಮ ಮನೆಯ ಸದಸ್ಯರು ಅಥವಾ ಪರಿಚಯದ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವುದು ಉತ್ತಮ. ಸಂಜೆ ನೀವು ನಿಮ್ಮ ಪ್ರೀತಿ ಪಾತ್ರದೊಂದಿಗೆ ಮೋಜು ಮಸ್ತಿಯಿಂದ ಕೂಡಿದ ಸಮಯವನ್ನು ಕಳೆಯುವಿರಿ. ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ನಿಮಗೆ ಯಶಸ್ಸು ದೊರೆಕುವುದು.
** ಕನ್ಯಾ ರಾಶಿ :
ಜನರು ವ್ಯವಹಾರಕ್ಕೆ ಸಂಬಂಧಿಸಿದಂತೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವುದರಿಂದಾಗಿ ನೀವು ಹೆಚ್ಚಿನ ಲಾಭವನ್ನು ಪಡೆಯುವಿರಿ. ಈ ದಿನ ಹಿರಿಯರ ಸೇವೆಯನ್ನು ಮಾಡಲು ಮತ್ತು ಶುಭ ಕಾರ್ಯಗಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ನಿಮ್ಮ ವೈವಾಹಿಕ ಜೀವನ ಈ ದಿನ ಸುಖವಾಗಿರಲಿದೆ. ಕೆಲಸ ಮಾಡುವ ಈ ರಾಶಿಯವರು ಯಾವುದೇ ರೀತಿಯ ವಾದ ವಿವಾದವನ್ನು ತಪ್ಪಿಸುವುದು ಉತ್ತಮ, ಇಲ್ಲದಿದ್ದರೆ ಭವಿಷ್ಯದಲ್ಲಿ ತೊಂದರೆಯಾಗುವುದು.
** ತುಲಾ ರಾಶಿ :
ವಿದ್ಯಾರ್ಥಿಗಳು ಇಂದು ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿಶೇಷವಾದ ಲಾಭವನ್ನು ಪಡೆಯುವರು. ಸಂಗಾತಿಯ ಸಂಪೂರ್ಣ ಬೆಂಬಲ ಮತ್ತು ಸಹಕಾರ ಈ ದಿನ ನಿಮಗೆ ಲಭಿಸುವುದು. ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ಹೆಚ್ಚು ಓಡಾಡಬೇಕಾಗಬಹುದು. ಇದರಿಂದಾಗಿ ನಿಮ್ಮ ಆರೋಗ್ಯದ ಮೇಲೆ ಪ್ರತಿಕುಲ ಪರಿಣಾಮ ಬೀರುವುದು. ಹಾಗಾಗಿ ಎಚ್ಚರವಹಿಸಿ. ಈ ದಿನ ನಿಮಗೆ ಸಂಬಂಧಿಕರು ಅಥವಾ ಪ್ರೀತಿ ಪಾತ್ರದಿಂದ ಉಡುಗೊರೆ ಲಭಿಸುವುದು.
** ವೃಶ್ಚಿಕ ರಾಶಿ :
ಸಮಾಜದಲ್ಲಿ ಗೌರವ ಖ್ಯಾತಿಯನ್ನು ಗಳಿಸುವರು. ಇದರೊಂದಿಗೆ ನಿಮ್ಮ ಸ್ನೇಹಿತರ ಸಂಖ್ಯೆ ಹೆಚ್ಚಾಗುವುದು. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಮನಸ್ತಾಪ ಉಂಟಾಗಬಹುದು. ಆದರೆ ನಿಮ್ಮ ತಾಳ್ಮೆಯಿಂದಾಗಿ ನೀವು ಯಾವುದೇ ಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸುವಿರಿ. ಸಂಜೆ ನಿಮ್ಮ ಪ್ರೀತಿ ಪಾತ್ರರ ಭೇಟಿಯಾಗುವುದು ಮತ್ತು ನೀವು ಪ್ರವಾಸಕ್ಕೆ ತೆರಳುವ ಅವಕಾಶ ಲಭಿಸುವುದು.
** ಧನಸ್ಸು ರಾಶಿ :
ವೈವಾಹಿಕ ಜೀವನ ಉತ್ತಮವಾಗಿರುವುದು. ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಈ ದಿನದ ನೀವು ಯಾವುದಾದರೂ ಸಹೋದ್ಯೋಗಿಗಳ ಅಥವಾ ಸಂಬಂಧಿಕ ಕಾರಣದಿಂದಾಗಿ ಒತ್ತಡಕ್ಕೆ ಒಳಗಾಗಬಹುದು. ಆದರೆ ನಿಮ್ಮ ಮಾತಿನ ಮೇಲೆ ನಿಯಂತ್ರಣವಿರಲಿ ಮತ್ತು ಯಾವುದೇ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ. ನಿಮಗೆ ಸಂಬಂಧಿಸಿದೆ ಯಾವುದಾದರೂ ವಿಚಾರ ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ, ಅದಕ್ಕಾಗಿ ನೀವು ಹೆಚ್ಚು ಓಡಾಡಬೇಕಾಗುತ್ತದೆ.
** ಮಕರ ರಾಶಿ :
ಸಾಮಾಜಿಕ ಜೀವನದಲ್ಲಿ ಹೆಚ್ಚು ಬುದ್ಧಿವಂತರು ಎಂದು ಎಲ್ಲರೂ ತಿಳಿಯುವರು. ಆದರೆ ನೀವು ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಹಾಗೂ ಹೊರಗಿನ ಆಹಾರವನ್ನು ಸೇವಿಸುವುದರಿಂದ ತಪ್ಪಿಸಬೇಕು. ಈ ದಿನ ಸಂಜೆ ನಿಮಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಅವಕಾಶ ಲಭಿಸುವುದು. ಈ ದಿನ ವಾಹನವನ್ನು ಚಲಾಯಿಸುವಾಗ ಎಚ್ಚರದಿಂದಿರಿ, ಇಲ್ಲದಿದ್ದರೆ ಅಪಘಾತವಾಗುವ ಸಂಭವವಿದೆ.
** ಕುಂಭ ರಾಶಿ :
ಈ ದಿನ ತಮ್ಮ ಮಿತ್ರರಿಂದ ನಿರಾಶೆಗೆ ಒಳಗಾಗಬಹುದು. ಸರ್ಕಾರಿ ಕೆಲಸವನ್ನು ಮಾಡುವ ಜನರ ಮೇಲೆ ಈ ದಿನ ಜವಾಬ್ದಾರಿ ಹೆಚ್ಚಾಗಬಹುದು. ವ್ಯಾಪಾರದಲ್ಲಿ ನಿಮಗೆ ಅನುಕೂಲಕರ ಲಾಭವಾಗಲಿ. ಈ ದಿನ ನೀವು ಯಾವುದೇ ಸಂಪತ್ತನ್ನು ಖರೀದಿಸುವ ಮೊದಲು ಆ ಸಂಪತ್ತಿನ ಬಗ್ಗೆ ಎಲ್ಲರಿಂದ ಮಾಹಿತಿಯನ್ನು ಪಡೆಯುವುದು ಮತ್ತು ಸ್ನೇಹಿತರೊಂದಿಗೆ ಚರ್ಚಿಸುವುದು ಉತ್ತಮ.
** ಮೀನ ರಾಶಿ :
ಅಂದುಕೊಂಡ ಕೆಲಸದಲ್ಲಿ ಯಶಸ್ಸು ಲಭಿಸುವುದು. ಹಾಗಾಗಿ ಈ ದಿನಾ ಯಾವುದೇ ಕೆಲಸವನ್ನು ಶ್ರದ್ದೆಯಿಂದ ಮಾಡಿದರೂ, ಅದಕ್ಕೆ ನಿಮ್ಮ ತಂದೆ ತಾಯಿ ಸಲಹೆಯನ್ನು ಪಡೆಯಿರಿ. ಈ ದಿನ ನೀವು ದೂರ ಅಥವಾ ಅಲ್ಪ ದೂರ ಪ್ರಯಾಣಿಸಬೇಕಾಗಬಹುದು. ಕೆಲಸದಲ್ಲಿ ಪ್ರಗತಿಯನ್ನು ನೋಡಿ ನೀವು ಹೆಚ್ಚು ಸಂತೋಷದಿಂದಿರುವಿರಿ. ಈ ದಿನ ವೈವಾಹಿಕ ಜೀವನದಲ್ಲಿ ಸಂತೋಷವನ್ನು ಹೊಂದುವಿರಿ. ಈ ದಿನ ನಿಮಗೆ ವಿವಾಹ ಯೋಗವಿದೆ. ಮೀನ ರಾಶಿಗೆ ಸೇರಿದ ವಿದ್ಯಾರ್ಥಿಗಳು ಈ ದಿನ ಎಲ್ಲಾ ಅಡೆತಡೆಗಳಿಂದ ಮುಕ್ತಿಯನ್ನು ಮುಕ್ತಿ ಹೊಂದುವರು.