ಸೊರಬ: ಹೊಲದಲ್ಲಿ ಯುವಕ ಅನುಮಾನಾಸ್ಪದ ಸಾವು
– ಹೊಸನಗರ: ಸಾಲಬಾಧೆಯಿಂದ ತೋಟದಲ್ಲಿ ನೇಣಿಗೆ ಶರಣಾದ ರೈತ
– ಶಿವಮೊಗ್ಗ : ಪೊಲೀಸ್ ಠಾಣೆಗೆ ಬಂದ ಹಾವು, ಬೆಚ್ಚಿಬಿದ್ದ ಪೊಲೀಸರು
NAMMUR EXPRESS NEWS
ಸೊರಬ : ತಾಲೂಕಿನ ತಾವರೆಕೊಪ್ಪ ಗ್ರಾಮದಲ್ಲಿ ಕೃಷಿ ಕಾರ್ಮಿಕ ಮಂಜುನಾಥ್ (36) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಗದ್ದೆಯಲ್ಲಿ ತಂದೆ ಯುವರಾಜ್ ಜೊತೆ ಕೆಲಸ ಮಾಡುತ್ತಿದ್ದ ಮಂಜುನಾಥ್ ಅಣಬೆಯನ್ನು ಹುಡುಕಿ ತರಲು ತೆರಳಿದ್ದನು. ಮಧ್ಯಾಹ್ನದ ಕಾರಣ ತಂದೆ ಊಟಕ್ಕೆಂದು ಮನೆಗೆ ತೆರಳಿದ್ದಾರೆ. ಮನೆಯಲ್ಲೇ ವಿಶ್ರಾಂತಿ ಪಡೆದು ನಂತರ ಮಗ ಊಟಕ್ಕೆ ಬರಲಿಲ್ಲವೆಂದು ಹುಡುಕಿಕೊಂಡು ಹೋದಾಗ ತಮ್ಮ ಹೊಲದಲ್ಲೇ ಶವವಾಗಿ ಬಿದ್ದಿದ್ದು ಕಂಡು ಶಾ- ಕ್ ಗೆ ಒಳಗಾಗಿದ್ದರು. ನಂತರ ಮಗನನ್ನು ಅಂಗಾತ ಮಲಗಿಸಿ ನೋಡಿದಾಗ ಹಿಂಬದಿ ಸುಟ್ಟಗಾಯಗಳು ಪತ್ತೆಯಾಗಿದೆ. ಈ ಸುಟ್ಟಗಾಯಗಳು ಅನುಮಾನಕ್ಕೆ ಕಾರಣವಾಗಿದೆ. ಯುವರಾಜ್ ಅವರಿಗೆ ಮಂಜುನಾಥ ಸೇರಿ ಇಬ್ರ ಗಂಡು ಮಕ್ಕಳಿದ್ದರು. 2022 ರಲ್ಲಿ ಮತ್ತೋರ್ವ ಮಗ ಮಹೇಶ್ ಟ್ರ್ಯಾಕ್ಟರ್ ನಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದರು. ಈಗ ಅವರ ಸಹೋದರ ಮಹೇಶ್ ಸಹ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೂರನೇ ಅವರು ಸಹೋದರಿಯಾಗಿದ್ದಾರೆ. ಈಗ ಯುವ ರಾಜ್ ಹೊರತುಪಡಿಸಿ ಅವರ ಜೊತೆ ಕುಟುಂಬದ ಯಾವ ಸದಸ್ಯರೂ ಯಾರು ಇಲ್ಲವಾಗಿದೆ.
ಮಂಜುನಾಥ್ ಸಾವಿಗೆ ಕಾರಣ ಏನು ಎಂಬುದರ ಬಗ್ಗೆ ಪೊಲೀಸ್ ಇಲಾಖೆ ಬೆನ್ನುಬಿದ್ದಿದೆ. ಇವರ ಮಧ್ಯೆ ಆಸ್ತಿ ವಿಚಾರದಲ್ಲಿ ದಾಯಾದಿ ಕಲಹ ಇತ್ತು . ಮಂಜುನಾಥ್ ವಿದ್ಯುತ್ ಶಾಕ್ನಿಂದ ಸತ್ತಿರಬಹುದೆಂದು ಕುಟುಂಬ ಹೇಳಿದೆ.
– ಹೊಸನಗರ: ಸಾಲಬಾಧೆಯಿಂದ ತೋಟದಲ್ಲಿ ನೇಣಿಗೆ ಶರಣಾದ ರೈತ
ಹೊಸನಗರ: ಹೊಸನಗರ ತಾಲ್ಲೂಕು ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಅವರ ಸಾವಿಗೆ, ಸಾಲಬಾಧೆ ಕಾರಣ ಎನ್ನಲಾಗಿದೆ. ಧನಂಜಯಪ್ಪ (73) ಆತ್ಮಹತ್ಯೆ ಮಾಡಿಕೊಂಡರು. ಬೆಳಗ್ಗೆ ತೋಟಕ್ಕೆ ಹೋಗಿದ್ದ ಅವರು ವಾಪಸ್ ಬಂದಿರಲಿಲ್ಲ. ಹೀಗಾಗಿ ಗಾಬರಿಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಆ ಬಳಿಕ ಅಡಕೆ ತೋಟದಲ್ಲಿ ಹಣ್ಣಿನ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಇವರು ವಿವಿಧ ಮೂಲಗಳಿಂದ ಒಟ್ಟು 12 ಲಕ್ಷ ರೂ. ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ. ಈ ಸಾಲವನ್ನ ತೀರಿಸಲು ಇವರಿಗೆ ಸಾಧ್ಯವಾಗಿರಲಿಲ್ಲ. ಕೊಳೆರೋಗ ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲು ಬಿಟ್ಟಿರಲಿಲ್ಲ. ಈ ಸಲವು ಅಡಿಕೆಗೆ ಕೊಳೆರೋಗ ಕಾಣಿಸಿದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಕುಗ್ಗಿದ್ದ ಹಿರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
– ಶಿವಮೊಗ್ಗ : ಪೊಲೀಸ್ ಠಾಣೆಗೆ ಬಂದ ಹಾವು, ಬೆಚ್ಚಿಬಿದ್ದ ಪೊಲೀಸರು
ಶಿವಮೊಗ್ಗ: ಶಿವಮೊಗ್ಗ ನಗರದ ಗ್ರಾಮಾಂತರ ಪೊಲೀಸ್ ಠಾಣೆಯೊಳಕ್ಕೆ ಕೇರೆ ಹಾವು ನುಗ್ಗಿ ಸಿಬ್ಬಂದಿಗಳನ್ನು ಬೆಚ್ಚಿಬೀಳಿಸಿದ ಘಟನೆ ನಡೆದಿದೆ. ನಂತರ ಉರಗ ಸಂರಕ್ಷಕ ಸ್ನೇಕ್ ಕಿರಣ್ ಸುರಕ್ಷಿತವಾಗಿ ಾವನ್ನು ಂರಕ್ಷಿಸಿ ಹಿಡಿದರು. ಠಾಣೆಯ ಕಂಪ್ಯೂಟರ್, ಜೆರಾಕ್ಸ್ ಮಿಷನ್ ಇಟ್ಟಿದ್ದ ಕೊಠಡಿಯಲ್ಲಿ ಹಾವು ಕಾಣಿಸಿಕೊಂಡಿತ್ತು. ಹಾವು ಗಮನಿಸಿದ ಪೊಲೀಸರು, ಉರಗ ಸಂರಕ್ಷಕ ಸ್ನೇಕ್ ಕಿರಣ್ ಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕಾಗಮಿಸಿದ ಕಿರಣ್ ಅವರು ಸುಮಾರು ಮೂರುವರೆ ಅಡಿ ಉದ್ದದ ಕೇರೆ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ‘ಸದರಿ ಹಾವು ವಿಷ ರಹಿತವಾಗಿದೆ ಠಾಣೆಯ ಕಿಟಕಿ ಮೂಲಕ ಒಳ ಬಂದಿರುವ ಸಾಧ್ಯತೆಯಿದೆ’ ಎಂದು ಸ್ನೇಕ್ ಕಿರಣ್ ಮಾಹಿತಿ ನೀಡಿದ್ದಾರೆ.