ಶೃಂಗೇರಿ – ಮಂಗಳೂರು ಹೈವೆ ಆಗಲೀಕರಣ ಭಾಗ್ಯ!
– ಈಡೇರಲಿದೆ ಮಲೆನಾಡಿಗರ ಬಹುದಿನದ ಬೇಡಿಕೆ
– ಮಲೆನಾಡಿಗರ ಬೇಡಿಕೆಗೆ ಸ್ಪಂದಿಸಿದ ಸಂಸದ ಕೋಟಾ
NAMMUR EXPRESS NEWS
ಶೃಂಗೇರಿ: ಶೃಂಗೇರಿ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ರಾಷ್ಟ್ರೀಯ ಹೆದ್ದಾರಿ 169 ಶೃಂಗೇರಿ- ಎಸ್ ಕೆ ಬಾರ್ಡ್ರ್ ರಸ್ತೆ ಅಗಲೀಕರಣಕ್ಕೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದ್ದು ಈ ಮೂಲಕ ಮಲೆನಾಡು ಕರಾವಳಿಯ ಜೀವನಾಡಿಯಾಗಿರುವ ಈ ಹೆದ್ದಾರಿ ಅಗಲೀಕರಣ ಎಲ್ಲರಿಗೂ ಸಂತಸ ತಂದಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಹಾದು ಹೋಗುವ ಈ ಕಿರಿದಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನೇಕ ಬಾರಿ ಸಂಚಾರಕ್ಕೆ ತೊಂದರೆಯಾಗಿ, ಅನೇಕ ಅಪಘಾತಗಳು ಹಾಗೂ ಸಾವು ನೋವುಗಳು ಸಂಭವಿಸಿದೆ.ಮಳೆಗಾಲದಲ್ಲಿ ಇಲ್ಲಿಯ ಸಂಚಾರ ತುಂಬಾ ಕಷ್ಟಕರವಾಗಿತ್ತು.
ರಸ್ತೆ ಅಗಲೀಕರಣಕ್ಕೆ ಅನುಮತಿ ಕೊಡಿಸುವಲ್ಲಿ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಸಂಬಂಧಪಟ್ಟ ಇಲಾಖೆಯ ಸಚಿವರು ಅಧಿಕಾರಿಗಳನ್ನು ಭೇಟಿಯಾಗಿ ತ್ವರಿತಗತಿಯಲ್ಲಿ ಕಾರ್ಯ ಸಾಧಿಸುವಲ್ಲಿ ಯಶಸ್ವಿಯಾಗಿ್ದು ಮಲೆನಾಡಿಗರ ಬಹುದಿನದ ಬೇಡಿಕೆಗೆ ತಕ್ಷಣ ಸ್ಪಂದಿಸಿದ್ದಾರೆ.
ರಸ್ತೆ ಅಗಲೀಕರಣಕ್ಕೆ ಹಸಿರು ನಿಶಾನೆ ತೋರಿರುವ ಕೇಂದ್ರ ಸರ್ಕಾರ ಸಂಬಂಧಿಸಿದ ಇಲಾಖೆಗೆ ಡಿಪಿಆರ್ ರೂಪಿಸುವಂತೆ ನಿರ್ದೇಶನ ನೀಡಿದೆ.
ಸಂಸದರ ಈ ಜನಪರ ಕಾರ್ಯಕ್ಕೆ ಕ್ಷೇತ್ರದ ಜನ ಮೆಚ್ಚುಗೆ ವ್ಯಕ್ತವಾಗಿದೆ.
ಮೊಬೈಲ್ ಟವರ್ ಕುರಿತು ಶೀಘ್ರದಲ್ಲಿ ಪರಿಶೀಲನೆ
ಗ್ರಾಮೀಣ ಪ್ರದೇಶದ ಮೊಬೈಲ್ ಟವರ್ಗಳ ಕುರಿತು ಸ್ಪಂದನೆ ನೀಡಬೇಕು ಎಂದು ಸಂಸದರ ಮುಂದೆ ಬೇಡಿಕೆ ಇಟ್ಟಿದ್ದು ಸಂಸದರು ಕೂಡಲೇ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.