ಟಾಪ್ ನ್ಯೂಸ್ ಮಲ್ನಾಡ್
ಚಲಿಸುತ್ತಿದ್ದ ಓಮಿನಿ ಕಾರಿನಲ್ಲಿ ಬೆಂಕಿ: ಕಾರು ಭಸ್ಮ!
– ಶೃಂಗೇರಿಯ ಹೊಳೆಕೊಪ್ಪದಲ್ಲಿ ನಡೆದ ಘಟನೆ
– ಹೊಸನಗರ-ನಗರದಲ್ಲಿ ಕಾಡುಕೋಣಗಳ ಕಾಟ!
– ಸೊರಬ: ಅಡಿಕೆ ಮರಕ್ಕೆ ಔಷಧಿ ಹೊಡೆಯುವಾಗ ಸಾವು
NAMMUR EXPRESS NEWS
ಶೃಂಗೇರಿ: ಶೃಂಗೇರಿ ತಾಲೂಕಿನ ಹೊಳೆಕೊಪ್ಪದಲ್ಲಿ ಚಲಿಸುತ್ತಿದ್ದ ಓಮಿನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸಲಾಗಿದೆ. ಕಾರಿನ ಗ್ಯಾಸ್ ಟ್ಯಾಂಕ್ ಸಿಡಿದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಹೊಸನಗರದಲ್ಲಿ ಕಾಡುಕೋಣಗಳ ಕಾಟ!
ಹೊಸ ನಗರ: ನಗರ ಭಾಗದ ಹಳ್ಳಿಗಳಲ್ಲಿ ಕಾಡುಕೋಣದ ಕಾಟ ಜಾಸ್ತಿ ಆಗಿದೆ. ರೈತರು ಬೆಳೆದ ಬೆಳೆಯನ್ನು ನಾಶಮಾಡುತ್ತಿವೆ.ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ರೈತರು ಅಗ್ರಹಿಸಿದ್ದಾರೆ. ಕೊಳೆರೋಗದಿಂದ ಅಡಿಕೆ ಉದುರುತ್ತಿದೆ. ಇನ್ನೊಂದೆಡೆ ಕಾಡುಕೋಣ ತೋಟ ನಾಶಮಾಡುತ್ತಿವೆ. ಹಾಗೆ ಕಷ್ಟ ಟ್ಟು ರೈತ ಗದ್ದೆ ನಾಟಿ ಮಾಡಿದರೆ ಅದು ಕಾಡುಕೋಣಗಳ ಪಾಲಾಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ.
ಅಡಿಕೆ ಮರಕ್ಕೆ ಔಷಧಿ ಹೊಡೆಯುವಾಗ ಸಾವು
ಸೊರಬ: ಅಡಿಕೆ ಮರಗಳಿಗೆ ಔಷಧ ಸಿಂಪಡಿಸುವ ವೇಳೆ ವಿದ್ಯುತ್ ಪ್ರವಹಿಸಿ ರೈತ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೊರಬ ತಾಲೂಕು ಓಟೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಅಡಿಕೆ ಮರಗಳ ಹಿಂಗಾರಕ್ಕೆ ಕೊಳೆ ಔಷಧ ಸಿಂಪಡಿಸುವಾಗ ವಿದ್ಯುತ್ ತಂತಿಗೆ ಕೊಳೆ ಔಷಧ ತಗುಲಿದೆ. ಅದರಿಂದ ವಿದ್ಯುತ್ ಪ್ರವಹಿಸಿ ಆನವಟ್ಟಿ ಹೋಬಳಿಯ ಕೋಡಿಹಳ್ಳಿ ಗ್ರಾಮದ ಶ್ರೀಕಾಂತ (35) ಮೃತಪಟ್ಟಿದ್ದಾರೆ.