ಬಿಜೆಪಿ ಕೈ ತಪ್ಪಿದ ಮೂಡಿಗೆರೆ!
– ಕಾಂಗ್ರೇಸ್ನ ಗೀತಾ ಅಜಿತ್ ಕುಮಾರ್ ಅಧ್ಯಕ್ಷ ಸ್ಥಾನ
– ಎಚ್.ಪಿ ರಮೇಶ್ ಉಪಾಧ್ಯಕ್ಷರಾಗಿ ಆಯ್ಕೆ
NAMMUR EXPRESS NEWS
ಮೂಡಿಗೆರೆ: ಮೂಡಿಗೆರೆ ಪಟ್ಟಣ ಪಂಚಾಯ್ತಿಯ 2ನೇ ಅವಧಿ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ನ ಗೀತಾ ಅಜಿತ್ ಕುಮಾರ್ ಹಾಗೂ ಎಚ್.ಪಿ ರಮೇಶ್ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಂಗ್ರೇಸ್ ಪಟ್ಟಣ ಪಂಚಾಯ್ತಿ ಗದ್ದುಗೆ ತನ್ನದಾಗಿಸಿಕೊಂಡಿದೆ.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಗೀತಾ ಅವರಿಗೆ 7 ಮತಗಳು ದೊರೆತರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಶಾ ಮೋಹನ್ರವರಿಗೆ 5 ಮತಗಳು ದೊರೆತವು. ಕೇವಲ 2 ಮತಗಳ ಅಂತರದಿಂದ ಕಾಂಗ್ರೇಸ್ನ ಗೀತಾ ಅಜಿತ್ ಕುಮಾರ್ ಜಯಗಳಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ನ ಹೆಚ್.ಪಿ ರಮೇಶ್ ಅವಿರೋಧವಾಗಿ ಆಯ್ಕೆಯಾದರು. ಮೂಡಿಗೆರೆ ಪಟ್ಟಣ ಪಂಚಾಯ್ತಿ ಅಧಿಕಾರ ಹಿಡಿಯಲು 11 ಸದಸ್ಯರ ಪೈಕ ಬಿಜೆಪಿಯ 6 ಸದಸ್ಯರ ಮತ ಮತ್ತು ಸಂಸದ ಕೋಟಾ ಶ್ರಿನಿವಾಸ ಪೂಜಾರಿಯವರ 1 ಮತವು ಸೇರಿ 7 ಮತವಿತ್ತು. ಕಾಂಗ್ರೇಸ್ನ 4 ಸದಸ್ಯರಿದ್ದು,ಶಾಸಕಿ ನಯನ ಮೋಟಮ್ಮಾ ಹಾಗೂ ಇತ್ತೀಚೆಗೆ ಕಾಂಗ್ರೇಸ್ ಸೇರಿದ ಜೆಡಿಎಸ್ ಸದಸ್ಯೆ ಗೀತಾ ಅಜಿತ್ ಕುಮಾರ್ರವರ ಮತವು ಸೇರಿ 6 ಮತವಿತ್ತು.
ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರು ಕೈ ತಪ್ಪಿದ್ದೆಲ್ಲಿ..?
ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಕಾಂಗ್ರೇಸ್ ಕೇವಲ 4 ಸದಸ್ಯರನ್ನಿಟ್ಟಕೊಂಡು ರಾಜಕೀಯ ತಂತ್ರಗಾರಿಕೆ ನಡೆಸಿ ಬಿಜೆಪಿಗೆ ದಕ್ಕುವ ಪಟ್ಟಣ ಪಂಚಾಯ್ತಿ ಅಧಿಕಾರವನ್ನು ಕಾಂಗ್ರೇಸ್ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬಿಜೆಪಿ ಸದಸ್ಯ ಬಿ ಜಿ ಧರ್ಮಪಾಲ್ ಅವರು ನೇರವಾಗಿ ಕಾಂಗ್ರೇಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರಿಂದ ಕಾಂಗ್ರೇಸ್ ಅನಾಸವಾಗಿ ಜಯಗಳಿಸಿತು. ಇನ್ನು ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರು ಕಾಪು ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಭಾಗವಹಿಸಿದ್ದರಿಂದ ಮೂಡಿಗೆರೆ ಚುನಾವಣೆಯಲ್ಲಿ ಗೈರಾಗಿದ್ದರು.
ಕಾಂಗ್ರೇಸ್ ಹಿರಿಯ ಪ್ರಮುಖರ ತಂತ್ರಗಾರಿಕೆ ಕಾಂಗ್ರೇಸ್ಗೆ ಅಧಿಕಾರ ಧಕ್ಕಿಸಿತು.
ಅಭಿನಂದನಾ ಸಮಾರಂಭದಲ್ಲಿ ಶಾಸಕಿ ನಯನ ಮೋಟಮ್ಮ,ಮಾಜಿ ಶಾಸಕಿ ಮೋಟಮ್ಮ,ಮಾಜಿ ಶಾಸಕ ಎಂ.ಪಿ ಕುಮಾರ ಸ್ವಾಮಿ,ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಸೇರಾದಂತೆ ಬ್ಲಾಕ್ ಕಾಂಗ್ರೇಸ್ನ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.