ಕರಾವಳಿ ಟಾಪ್ ನ್ಯೂಸ್
ಪಡುಕೆರೆ ಬೀಚ್ನಲ್ಲಿ ಬಿಕಿನಿ ಫೋಟೊಶೂಟ್ ಕಿರಿಕ್!
– ಕಾರ್ಕಳ: ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿ ಪರಾರಿ!
– ಪುತ್ತೂರು: ತಡೆಯಾಜ್ಞೆ ತಂದ ಅರುಣ್ ಕುಮಾರ್ ಪುತ್ತಿಲ
NAMMUR EXPRESS NEWS
ಕುಂದಾಪುರ: ಪಡುಕೆರೆ ಬೀಚ್ನಲ್ಲಿ ಬಿಕಿನಿ ಫೋಟೊಶೂಟ್ಗೆ ಪೊಲೀಸರು ಅಡ್ಡಿಪಡಿಸಿದ್ದಕ್ಕೆ ಮಾಡೆಲ್ವೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಬಟ್ಟೆ ಬದಲಿಸಿ ಇಲ್ಲದಿದ್ದರೆ, ಸ್ಥಳೀಯರು ರೊಚ್ಚಿಗೆದ್ದು ಹಲ್ಲೆ ಮಾಡುತ್ತಾರೆ ಎಂದು ಬೆದರಿಸಿದ್ದರಂತೆ. ಸದ್ಯ ಈ ಸಂಬಂಧ ಮಾಡೆಲ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಪ್ರಶ್ನೆ ಮಾಡಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಅಡ್ಡಿಪಡಿಸಿದ್ದಾರೆ ಎಂದು ಮಾಡೆಲ್ವೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಫೋಟೋಶೂಟ್ ಮಾಡಿದ
ಫೋಟೋಗಳ ಸಹಿತ ಪಡುಕೆರೆ ಬೀಚ್ನಲ್ಲಾದ ಕಹಿ ಅನುಭವವನ್ನು ಮಾಡೆಲ್ ಹಂಚಿಕೊಂಡಿದ್ದಾರೆ. ಬೀಚ್ನಲ್ಲಿ ನನ್ನ ಪತಿ ಬಿಕಿನಿ ಫೋಟೊಶೂಟ್ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರುಅಡ್ಡಿ ಪಡಿಸಿದ್ದಾರೆ ಎಂದು ದೂರಿದರು. ಪ್ರತಿಕ್ರಿಯಿಸಿ ಬೀಚ್ನಲ್ಲಿ ಬಿಕಿನಿ ರಿಸವುದು ಯಾವುದೇ ಅಪರಾಧವಲ್ಲ. ಸಾರ್ವಜನಿಕ ಸ್ಥಳದಲ್ಲಿ ಫೋಟ್ಶೂಟ್ ಮಾಡಲು ಯಾವುದೇ ಲೈಸೆನ್ಸ್ ಪಡೆಯುವ ಅಗತ್ಯವಿಲ್ಲ ಎಂದಿದ್ದಾರೆ. ನೈತಿಕ ಪೊಲೀಸ್ಗಿರಿ ನಡೆಸಲು ಸ್ಥಳೀಯರು ಯಾರು ಎಂದು ಮಾಡೆಲ್ ಪ್ರಶ್ನೆ ಮಾಡಿದ್ದಾರೆ. ಬೀಚ್ ಸಾರ್ವಜನಿಕ ಪ್ರದೇಶ ಅಲ್ಲಿ ಫೋಟೋಶೂಟ್ ಮಾಡಿಕೊಂಡರೆ ತಪ್ಪೇನು? ಬಿಕಿನಿ ಹಾಕಿಕೊಂಡು ಫೋಟೋಶೂಟ್ ಮಾಡುವುದು ಕಾನೂನು ಉಲ್ಲಂಘನೆಯೇ? ಎಂದು ಸಾಮಾಜಿಕ ಜಾಲತಾಣದಲ್ಲಿ ಉಡುಪಿ ಪೊಲೀಸರಿಗೆ ಮಾಡೆಲ್ ಪ್ರಶ್ನೆ ಮಾಡಿದ್ದಾಳೆ.
ಕಾರ್ಕಳ: ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿ ಪರಾರಿ!
ಕಾರ್ಕಳ: ಟ್ಯಾಂಕ್ ತುಂಬ ಪೆಟ್ರೋಲ್ ತುಂಬಿಸಿ ಹಣ ನೀಡಿದೇ ವಾಹನದೊಂದಿಗೆ ಪರಾರಿಯಾದ ಘಟನೆ ಕಾರ್ಕಳ ತಾಲೂಕು ಜಂಕ್ಷನ್ ಬಳಿಯ ಪೆಟ್ರೋಲ್ ಬಂಕ್ ವೊಂದರಲ್ಲಿ ಆ.29ರ ನಸುಕಿನ ಜಾವದಲ್ಲಿ ನಡೆದಿದೆ.
ಕಾರ್ಕಳದ ‘ಅನು ಪ್ಯೂಯೆಲ್ ಪಂಪ್’ ಎಂಆರ್ಪಿಎಲ್ ದಿನದ 24 ಘಂಟೆ ಕಾರ್ಯ ನಿರ್ವಹಿಸುತ್ತದೆ. ಇದನ್ನು ದುರುಪಯೋಗ ಮಾಡಿದ ವ್ಯಕ್ತಿಯೊಬ್ಬ ಈ ದಿನ ಬೆಳಗ್ಗಿನ ಜಾವ 2.50ಕ್ಕೆ ಬಿಳಿ ಬಣ್ಣದ ಕಾರಿನಲ್ಲಿ ಕಾರ್ಕಳ ಬೈಪಾಸ್ ರಸ್ತೆಯ ಕಡೆಯಿಂದ ಬಂದಂತಹ ವ್ಯಕ್ತಿಯೊಬ್ಬ ಪುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸುವಂತೆ ಹೇಳಿದ್ದಾನೆ.
ಗ್ರಾಹಕನ ಸೂಚನೆಯಂತೆ 4253.88 ಮೊತ್ತದಷ್ಟು ಟ್ಯಾಂಕ್ ಪೂರ್ತಿ ಪೆಟ್ರೋಲ್ ತುಂಬಿಸಿ, ಟ್ಯಾಂಕ್ ನಿಂದ ಪೈಪ್ಬ ಬೇರ್ಪಡಿಸುತ್ತಿದ್ದಾಗ ಗ್ರಾಹಕ ತನ್ನ ವಾಹನವನ್ನು ಚಲಾಯಿಸಿ ಹೊರಟು ಹೋಗಿದ್ದಾನೆ. ವಾಹನವು ಬೈಲೂರು-ಉಡುಪಿ ರಸ್ತೆಯಲ್ಲಿ ಹೋಗಿದ್ದು. ವಂಚಕ ಗ್ರಾಹಕ ತುಳುವಿನಲ್ಲಿ ಮಾತನಾಡುತ್ತಿದ್ದನು. ಗ್ಯಾರೇಜ್ ಎಲ್ಲಿಯಾದರೂ ಓಪನ್ ಇದೆಯಾ ಅಂತ ಮೊದಲಾಗಿ ಪೆಟ್ರೋಲ್ ಬಂಕ್ ಸಿಬ್ಬಂದಿಯಲ್ಲಿ ವಿಚಾರಿಸಿ ನಂತರ ಮಂಕುಬೂದಿ ಎರಚಿದ್ದಾನೆ ಎಂದು ತಿಳಿದುಬಂದಿದೆ.
ವಾಹನದ ಕುರಿತು ಮಾಹಿತಿ ಲಭಿಸಿದರೆ, 9964070507 ಮೊಬೈಲ್ ಸಂಖ್ಯೆಗೆ ಕರೆಯನ್ನು ಮಾಡಿ ತಿಳಿಸಿ ಇಲ್ಲದಿದ್ದರೆ ಪೋಲಿಸರ ಗಮನಕ್ಕೆ ತರುವಂತೆ ಪೆಟ್ರೋಲ್ ಬಂಕ್ ಮಾಲಕ ಮಿಯ್ಯಾರು ರೋಹಿತಿ ತಿಳಿಸಿದ್ದಾರೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಡೆಯಾಜ್ಞೆ ತಂದ ಅರುಣ್ ಕುಮಾರ್ ಪುತ್ತಿಲ
ಪುತ್ತೂರು :ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ
ಅರುಣ್ ಪುತ್ತಿಲರ ಕುರಿತಾಗಿ ಮಾನಹಾನಿ ಹಾಗೂ
ತೇಜೋವಧೆ ಮಾಡುವ ವರದಿಗಳನ್ನು ಪ್ರಕಟಿಸದಂತೆ
ಅರುಣ್ ಕುಮಾರ್ ಪುತ್ತಿಲ ಹೈಕೋರ್ಟ್ ನಿಂದ ತಡೆಯಾಜ್ಞೆ
ತಂದಿದ್ದಾರೆ.ರಾಜಕೀಯವಾಗಿ ಸಂಚು ಮಾಡುಲಾಗುತ್ತಿದೆ
ಎಂಬ ಹಿನ್ನಲೆಯಲ್ಲಿ ಅರುಣ್ ಪುತ್ತಿಲರು ನ್ಯಾಯಾಲಯದ
ಮೊರೆ ಹೋಗಿದ್ದಾರೆ.