ಟಾಪ್ ನ್ಯೂಸ್ ಕರಾವಳಿ
ಕೋಳಿ ಅಂಕ: ಹೊಳೆಗೆ ಹಾರಿ ತಪ್ಪಿಸಿಕೊಂಡರು!
– ಕುಂದಾಪುರ ನಗರದ ಬಳಿ ಪೊಲೀಸ್ ದಾಳಿ ವೇಳೆ ಘಟನೆ
* ಪುತ್ತೂರು: ಪುತಿಲ ಕೇಸ್: ಬೆಂಗಳೂರಿನ ಹೊಟೇಲಿನಲ್ಲಿ ಮಹಜರು!
* ಮೂಡುಬಿದಿರೆ: ಮಹಿಳೆ ಚೈನ್ ಎಳೆದು ಪರಾರಿಯಾದ ಖದೀಮರು!
* ಪುತ್ತೂರು: ಲಾರಿ- ಆಂಬ್ಯುಲೆನ್ಸ್ ಮಧ್ಯೆ ಅಪಘಾತ : ಐವರಿಗೆ ಗಾಯ
* ಉಪ್ಪಿನಂಗಡಿ: ಪತಿ ಮಕ್ಕಳ ಬಿಟ್ಟು ಪತ್ನಿ ನಾಪತ್ತೆ: ಪತ್ತೆಯಾದ್ರೂ ಬರಲ್ಲ ಎಂದ ಮಹಿಳೆ!
NAMMUR EXPRESS NEWS
ಕುಂದಾಪುರ : ಕುಂದಾಪುರ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಹಳೇ ಆದರ್ಶ ಆಸ್ಪತ್ರೆಯ ಎದುರಿನ ಕಡ್ಡಿ ರಸ್ತೆಯ ತುದಿಯ ಖಾಲಿ ಜಾಗದಲ್ಲಿ ನಡೆಯುತ್ತಿದ್ದ ಕೋಳಿಪಡೆಗೆ ಕುಂದಾಪುರ ಪೊಲೀಸರು ಸೋಮವಾರ ಸಂಜೆಯ ವೇಳೆಗೆ ದಾಳಿ ನಡೆಸಿದ್ದಾರೆ
ಪೊಲೀಸರ ದಾಳಿ ವೇಳೆ 15 ರಿಂದ 20 ಜನರಿದ್ದ ಗುಂಪು ದಿಕ್ಕಾಪಾಲಾಗಿ ಓಡಿ ಹೋಗಿದ್ದು ಕೆಲವರು ತೋಡು ಪಾಗಾರವನ್ನು ಹಾರಿ ತಪ್ಪಿಸಿಕೊಂಡರೇ ಇನ್ನು ೆಲವರು ಪಕ್ಕದ ೊಳೆಗೆ ಹಾರಿ ತಪ್ಪಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ
ಉಪ್ಪಿನಂಗಡಿ: ಪತಿ ಮಕ್ಕಳ ಬಿಟ್ಟು ಪತ್ನಿ ನಾಪತ್ತೆ: ಪತ್ತೆಯಾದ್ರೂ ಬರಲ್ಲ ಎಂದ ಮಹಿಳೆ!
ಪುತ್ತೂರು: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಬೆದರಿಕೆ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸತೀಶ್ ಜಿ.ಜೆ ಅವರ ನೇತೃತ್ವದಲ್ಲಿ ಬೆಂಗಳೂರಿನ ಪೈ ವಿಸ್ನಾ ಹೊಟೇಲ್ & ಪಾರ್ಟಿ ಹಾಲ್ ಹೊಟೇಲ್ನಲ್ಲಿ ಮಹಜರು ನಡೆಸಲಾಗುತ್ತಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.ಕೇಸ್ ದಾಖಲಾದ ಮರುದಿನ ಮಹಿಳೆಯನ್ನು ಸೆ.2 ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು ನಂತರ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಆಕೆಯ ಹೇಳಿಕೆ ಪಡೆದುಕೊಳ್ಳಲಾಗಿತ್ತು. ಅದರಂತೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ ಎಂದು ಮಹಿಳೆ ನೀಡಿದ ದೂರಿನಲ್ಲಿರುವ ಬೆಂಗಳೂರು ಪೈ ವಿಸ್ಟಾ ಹೋಟೇಲ್ ಗೆ ತೆರಳಿ ಮಹಜರು ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.
ಕಾನೂನಿನ ಮೂಲಕ ಹೋರಾಟಕ್ಕೆ ತಯಾರಾಗಿದ್ದೇವೆ ಇದೊಂದು ಸುಳ್ಳು ಆರೋಪವಾಗಿದೆ ಎಂದು ಸೋಮವಾರ ಜಾಮೀನು ಮಂಜೂರಾದ ಬಳಿಕ ಪುತ್ತಿಲ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕುತ್ತಿಗೆಯಿಂದ ಚೈನ್ ಎಳೆದು ಪರಾರಿಯಾದ ಖದೀಮರು
ಮೂಡುಬಿದಿರೆ : ದ್ವಿಚಕ್ರ ವಾಹನ ಸವಾರರಿಬ್ಬರು ವೃದ್ಧೆಯೋರ್ವರ ಬಳಿ ದಾರಿ ಕೇಳುವ ನೆಪದಲ್ಲಿ ಮಾತನಾಡಿ ಆಕೆಯ ಕುತ್ತಿಗೆಯಲ್ಲಿದ್ದ 3 ಪವನಿನ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ತಾಲೂಕಿನ ಪಡುಮಾರ್ನಾಡು ಗ್ರಾ.ಪಂ.ನ ಮಾರ್ನಾಡಿನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಮಾರ್ನಾಡು ವರ್ಧಮಾನ ಬಸದಿ ಬಳಿಯ 82 ರ ವಯಸ್ಸಿನ ವೃದ್ಧೆ ಪ್ರೇಮಾ ಅವರು ತಮ್ಮ ಮನೆಯ ಸಮೀದ ಂಗಡಿಯಿಂದ ಹಾಲು ಹಾಲು ತರುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಸವಾರರಿಬ್ಬರು ವೃದ್ಧೆಯ ಬಳಿ ಗಾಡಿ ನಿಲ್ಲಿಸಿ ಇಲ್ಲಿ ಮಠ ಎಲ್ಲಿ ಎಂದು ವಿಚಾರಿಸಿದ್ದು ಆಗ ಆಕೆ ಮಠ ಇಲ್ಲಿ ಇಲ್ಲ ಅದು ಬನ್ನಡ್ಕದಲ್ಲಿದೆ ಎಂದು ಹೇಳುತ್ತಿದ್ದಂತೆ ಆಕೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಎಗರಿಸಿದ್ದಾರೆ.
ಲಾರಿ- ಆಂಬ್ಯುಲೆನ್ಸ್ ಮಧ್ಯೆ ಅಪಘಾತ : ಐವರಿಗೆ ಗಾಯ
ಪುತ್ತೂರು: ಆಂಬ್ಯುಲೆನ್ಸ್ ಮತ್ತು ಕಂಟೈನರ್ ಮಧ್ಯೆ ಅಪಘಾತ ಸಂಭವಿಸಿ ಆಂಬ್ಯುಲೆನ್ಸ್ನಲ್ಲಿದ್ದ ಐದು ಮಂದಿ ಗಾಯಗೊಂಡ ಘಟನೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಬಳಿ ಸೆ.2ರಂದು ಸಂಜೆ ನಡೆದಿದೆ.
ಸುಳ್ಯದಿಂದ ಮಂಗಳೂರು ಆಸ್ಪತ್ರೆಗೆ ಮಗುವೊಂದನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದ ಜಯಪ್ರಕಾಶ್ ಎಂಬವರು ಚಲಾಯಿಸುತ್ತಿದ್ದ ಆಂಬ್ಯುಲೆನ್ಸ್ ಹಾಗೂ ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.
ಘಟನೆಯಿಂದ ಆಂಬ್ಯುಲೆನ್ಸ್ ನಲ್ಲಿದ್ದ ಮಗು ಸಹಿತ ಐದು ಮಂದಿಗೆ ಗಾಯವಾಗಿದ್ದು ಅವರನ್ನು ಇನ್ನೊಂದು ಆಂಬ್ಯುಲೆನ್ಸ್ ಮುಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ.
ಪತಿ ಮಕ್ಕಳ ಬಿಟ್ಟು ಪತ್ನಿ ನಾಪತ್ತೆ: ಪತ್ತೆಯಾದ್ರೂ ಬರಲ್ಲ ಎಂದ ಮಹಿಳೆ!
ಉಪ್ಪಿನಂಗಡಿ : ಪೊಲೀಸ್ ಠಾಣಾ ವ್ಯಾಪ್ತಿಯ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿಂದ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಮಂಗಳೂರಿನಲ್ಲಿ ಪತ್ತೆಯಾಗಿದ್ದು, ತನ್ನ ಪತಿ ಹಾಗೂ ಎಳೆ ಮಕ್ಕಳನ್ನು
ತೊರೆದು ಸ್ವತಂತ್ರವಾಗಿ ಜೀವನ ನಡೆಸುವುದಾಗಿ ತಿಳಿಸಿದ್ದರಿಂದ ಪತಿ
ಹಾಗೂ ಮಕ್ಕಳು ಕಂಗಾಲಾಗಿದ್ದಾರೆ.
ಪತ್ನಿ ಕಳೆದ ಆಗಸ್ಟ್ 23 ರಂದು ಪುತ್ತೂರಿನ ಸಿಟಿ ಆಸ್ಪತ್ರೆಗೆ ಹೋಗಿ ಬರುವೆನೆಂದು ಹೇಳಿ ಹೋದಾಕೆ ನಾಪತ್ತೆಯಾಗಿದ್ದಾಳೆ ಎಂದು ದೇರಣೆ ನಿವಾಸಿ ನಾರಾಯಣ ಎಂಬವರು ಪೊಲೀಸರಿಗೆ ದೂರು ಸಲ್ಲಿಸಿದ್ದರು.ಪೊಲೀಸರು ಪ್ರಕರಣವನ್ನು ದಾಖಲಿಸಿ ಶೋಧ ಕಾರ್ಯಾಚರಣೆ ನಡೆಸಿದಾಗ ನಾಪತ್ತೆಯಾದ ಮಹಿಳೆಯು ಮಂಗಳೂರಿನ ಪಿ.ಜಿ.ಯೊಂದರಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಕರೆತಂದು ವಚಾರಿಸಿದಾಗ, ತನಗೆ ಗಂಡೊಂದಿಗೆ ಜೀವನ ನಡೆಸಲು ಅಸಾಧ್ಯ ಅದಕ್ಕಾಗಿ ಮಕ್ಕಳನ್ನು ಮತ್ತು ಪತಿಯನ್ನು ತೊರೆದು ಮಂಗಳೂರಿನಲ್ಲಿ ಉದ್ಯೋಗವೊಂದಕ್ಕೆ ಸೇರಿರುವುದಾಗಿ ತಿಳಿಸಿದ್ದರಲ್ಲದೆ, ತಾನು ಸ್ವತಂತ್ರ ಜೀವನ ನಡೆಸುವುದಾಗಿ ತಿಳಿಸಿದ್ದರು.ಮಹಿಳೆಯ ಈ ವರ್ತನೆಯಿಂದಾಗಿ ಪತಿ ಮತ್ತು 12 ವರ್ಷ ಪ್ರಾಯದ ವಿಶೇಷ ಚೇತನ ಮಗು ಮತ್ತು ಐದರ ಪ್ರಾಯದ ಇನ್ನೊಂದು ಮಗು ಕಂಗಾಲಾಗಿದ್ದಾರೆ.