ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ!
– ಎಲ್ಲೆಡೆ ಶಿಕ್ಷಕರಿಗೆ ಗೌರವಿಸುವ ದಿನ: ಕಾರ್ಯಕ್ರಮ
– ಸಮಸ್ತ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳು
ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ದಾರಿದೀಪವೇ ಗುರು.
ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ ವಿದ್ಯಾರ್ಥಿಯ ಯಶಸ್ಸು ಒಬ್ಬ ಶಿಕ್ಷಕನಿಂದ ಮಾತ್ರ ಸಾಧ್ಯ ಗುರು ಒಬ್ಬ ನಿಸ್ವಾರ್ಥ ವ್ಯಕ್ತಿ ವಿದ್ಯಾರ್ಥಿಯ ಭವ್ಯ ಭವಿಷ್ಯದ ಬುನಾದಿಯನ್ನು ಹಾಕಿ ಅದರ ಮೇಲೆ ಜ್ಞಾನದ ಭವ್ಯವಾದ ಅರಮನೆಯನ್ನು ನಿರ್ಮಿಸಲು ಕಾರಣರಾದ ಗುರುವನ್ನು ದೈವಿಕ ಭಾವದಿಂದ ಕಾಣುವ ಗುರು ಪರಂಪರೆ ನಮ್ಮದು. ಬದುಕಿನ ಹೆಜ್ಜೆಯನ್ನು ಸರಿಯಾದ ಪಥಕ್ಕೆ ತರಲು ಮಗುವಿನಲ್ಲಿ ಸ್ನೇಹ ಪ್ರೀತಿಯ ಮೂಲಕ ಶಿಸ್ತು, ಸಂಯಮ,ಸಮಯಪಾಲನೆ ಕಲಿಸಿ ಸೃಜನಶೀಲ ಅಭಿವ್ಯಕ್ತಿಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ ಕಲ್ಪಿಸಿ ಆತ್ಮಸ್ಥೈರ್ಯವನ್ನು ತುಂಬಿ ನಿಸ್ವಾರ್ಥದಿಂದ ಸೇವೆ ಮಾಡುವ ಸಾಕಾರಮೂರ್ತಿ ಅಂಥಹ ಗುರುವರ್ಯರಿಗೆ ಗೌರವ ಸಮರ್ಿಸುವ ಸದಿನ.
ಸರ್ವಪಲ್ಲಿ ರಾಧಾಕೃಷ್ಣನ್ ಪ್ರಸಿದ್ಧ ತತ್ವಜ್ಞಾನಿ ಆದರ್ಶ ಶಿಕ್ಷಕ ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿ. ಭಾರತರತ್ನ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಭಾರತದ ರಾಷ್ಟ್ರಪತಿ ಡಾ| ಸರ್ವಪಲ್ಲಿ ರಾಧಾೃಷ್ಣನ್ ಅವರು ೧೮೮೮ ಸೆಪ್ಟೆಂಬರ್ ೫ ರಂದು ತಮಿಳುನಾಡಿನ ತಿರುಮಾಣಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು ಇವರು ತಂದೆ ಸರ್ವಪಲ್ಲಿವೀರಸ್ವಾಮಿ. ತಾಯಿ ಸರ್ವಪಲ್ಲಿ ಸೀತಾ ಪತ್ನಿ ಶಿವಕಾಮು.
ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಒಬ್ಬ ಮಹಾನ್ ಆದರ್ಶ ಶಿಕ್ಷಕ “ನನ್ನ ಹುಟ್ಟು ಹಬ್ಬವನ್ನು ಆಚರಿಸುವ ಬದಲು ಆ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿದರೆ ನನಗೆ ಹೆಮ್ಮೆ”ಎಂದು ಹೇಳಿದ್ದರಿಂದ ೧೯೬೨ ರಿಂದ ಸೆಪ್ಟೆಂಬರ್ ೫ ನನ್ನು ಶಿಕ್ಷಕದಿನವನ್ನಾಗಿ ಆಚರಿಸಲಾಗುತ್ತಿದೆ.
೧೯೫೪ ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಅದರ್ಶಗಳಲ್ಲಿ ನಂಬಿಕೆ ಉಳ್ಳವರಾಗಿದ್ದು ಶಿಕ್ಷಣವು ಆದರ್ಶಪ್ರಾಯವಾದ ಮೌಲ್ಯಗಳಾದ ಯೋಗ, ಸಾಮಾನ್ಯ ವಿಜ್ಞಾನ
ನೈತಿಕತೆ, ಭೂಗೋಳ ,ಕೃಷಿ, ರಾಜಕೀಯ, ಸಾಹಿತ್ಯ ,ತತ್ವಶಾಸ್ತ್ರ ವಿಷಯಗಳನ್ನು ಪ್ರತಿಪಾದಿಸಿದ್ದರು.
ಇಂಡಿಯನ್ ಫಿಲಾಸಪಿ ದಿನ ಫಿಲಾಸಫಿ ಆಫ್ ದ ಉಪನಿಷದ್ ಆನ್ ಐಡಿಯಲಿಸ್ಟಿ ವ್ಯೂ ಆಫ್ ಲೈಫ್ ಪೂರ್ವ ಧರ್ಮಗಳು ಪಾಶ್ಚಾತ್ಯ ಚಿಂತನೆ, ಪೂರ್ವ ಮತ್ತು ವೆಸ್ಟ ಸಿಮ್ ರೆಫ್ಲೆಕ್ಷನ್ ಮುಂತಾದವುಗಳು ಇವರ ಪ್ರಮುಖ ಕೃತಿಗಳನ್ನು ರಾಧಾಕೃಷ್ಣನ್ ರವರು ಭಾರತದ ರಾಷ್ಟ್ರಪತಿಗಳಾದಾಗ ಬರುತ್ತಿದ್ದ 10000 ವೇತನದಲ್ಲಿ ಕೇವಲ 2500 ರೂಪಾಯಿಗಳನ್ನು ಮಾತ್ರ ಸ್ವೀಕರಿಸುತ್ತಿದ್ದರು ಉಳಿದ ಹಣ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ಹೋಗುತ್ತಿತ್ತು
ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ಇವರ ಜನ್ಮ ದಿನ ವು ಸಮಾಜಕ್ಕೆ ಶಿಕ್ಷಕರ ಕೊಡುಗೆಯನ್ನು ಸ್ಮರಿಸಿ ಗೌರವಿಸಲು ಸಹಾಯಕವಾಗಿದೆ.ಆಟದ ಜೊತೆಗೆ ಪಾಠವನ್ನು ಕಲಿಸಿ ಜೀವನದ ಮೌಲ್ಯ ಕಲಿಸಿ ಮಗುವಿನಲ್ಲಿರುವ ಸೂಕ್ತ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಿ ಯಾವುದೇ ಸ್ವಾರ್ಥವಿಲ್ಲದೆ ದುಡಿಯುವ ಸಮಾಜದ ಸಮನ್ವಯತೆಯ ಸಾಧಕರಾದ ನಮ್ಮ ಬದುಕನ್ನು ರೂಪಿಸಿದ ಎಲ್ಲ ಶಿಕ್ಷಕರಿಗೂ ಶಿಕ್ಷಕ ದಿನಾಚರಣೆಯ ಶುಭಾಶಯಗಳು.
ಲೇಖನ: ನಿಶ್ಮಿತಾ