ಹಬ್ಬದ ಎಫೆಕ್ಟ್: ಬಾಳೆಹಣ್ಣು ಬಲು ದುಬಾರಿ!
– ವಿಪರೀತ ಮಳೆಯಿಂದಾಗಿ ಬಾಳೆ ಬೆಳೆ ಕಡಿಮೆ
– ಬಾಳೆ ಹಣ್ಣಿಗೆ ಈಗ ಡಿಮ್ಯಾಂಡ್ ಡಿಮ್ಯಾಂಡ್
NAMMUR EXPRESS NEWS
ಮಂಗಳೂರು: ವಿಪರೀತ ಮಳೆಯಿಂದಾಗಿ ಬಾಳೆ ಬೆಳೆ ತೀವ್ರ ಹಾನಿಯಾಗಿದ್ದು, ಜತೆಗೆ ಶ್ರೀ ಗಣೇಶ ಚತುರ್ಥಿ ಸಹಿತ ಸಾಲು ಸಾಲು ಹಬ್ಬಗಳ ಕಾರಣದಿಂದ ಬಾಳೆಹಣ್ಣಿನ ಬೆಳೆ ಗಗನಕ್ಕೇರಿಸಿದೆ. ಅತಿ ಹೆಚ್ಚು ಮಾರಾಟವಾಗುವ ಕದಳಿ ಬಾಳೆಹಣ್ಣಿನ ಬೆಲೆ ಕೆ.ಜಿ.ಗೆ 20ರಿಂದ 30 ರೂ.ನಷ್ಟು ಹೆಚ್ಚಾಗಿದೆ.
ಘಟ್ಟದ ಕದಳಿಗೆ 120 ರೂ.: ಬಿ.ಸಿ.ರೋಡಿನ ಮಾರುಕಟ್ಟೆಯಲ್ಲಿ ಊರಿನ ಕದಳಿ ಬಾಳೆಹಣ್ಣು ಕೆ.ಜಿ.ಗೆ 80 ರೂ.ಗಳಿಗೆ ಮಾರಾಟವಾಗುತ್ತಿದ್ದು, ಕೆಲವು ಸಮಯಗಳ ಹಿಂದೆ 50 ರೂ.ನಷ್ಟಿತ್ತು. ಘಟ್ಟದ ಕದಳಿ ಧಾರಣೆ ಕೆ.ಜಿ.ಗೆ 120 ರೂ. ಇದೆ. ಇದರ ಕಾಯಿ 88ರಿಂದ 90 ರೂ.ಗಳಿಗೆ ರಖಂ ವರ್ತಕರಿಗೆ ಬರುತ್ತಿದ್ದು, ಇದು ಕೂಡ 20ರಿಂದ 30 ರೂ.ಗಳನ್ನಷ್ಟು ದುಬಾರಿಯಾಗಿದೆ.
ಉಳಿದಂತೆ ಗಾಳಿ, ಬೂದಿ ಬಾಳೆಹಣ್ಣು ಬೆಲೆ 40 ರೂ., ಕ್ಯಾವಂಡೀಸ್ 40 ರೂ.ಗಳಿಗೆ ಮಾರಾಟವಾಗುತ್ತಿದೆ. ಇದರಲ್ಲಿ ಉತ್ತಮ ಗುಣಮಟ್ಟದವು 50 ರೂ.ಗಳಿಗೆ ಮಾರಾಟವಾಗುತ್ತಿವೆ. ಘಟ್ಟದ ಮೇಲಿನ ಮೈಸೂರು ಬಾಳೆಹಣ್ಣು 60 ರೂ.ಗಳಿಗೆ ಮಾರಾಟವಾಗುತ್ತಿದ್ದು, ಊರಿನದ್ದ್ಕೆ 50 ರೂ. ಬೆಲೆ ದೆ.
ಇನ್ನಷ್ಟು ಹೆಚ್ಚಾಗುವ ಸಾಧ್ಯತೆ
ಸದ್ಯಕ್ಕೆ ಈ ಧಾರಣೆ ಇದ್ದರೂ ಹಬ್ಬದ ದಿನಗಳು ಹತ್ತಿರ ಬರುತ್ತಿದ್ದಂತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ವರ್ತಕರು ಹೇಳುತ್ತಿದ್ದು, ಹಬ್ಬದ ಋತು ಮುಗಿದರೆ ಧಾರಣೆ ಕಡಿಮೆಯಾಗಬಹುದು. ಆದರೆ ಬೇಡಿಕೆಯಷ್ಟು ಪೂರೈಕೆಯಾಗದಿದ್ದರೆ ಬೆಲೆ ಇಳಿಕೆ ಸಂಶಯ ಎನ್ನಲಾಗುತ್ತಿದೆ